ಮರು ಬಳಕೆಯ ಬಾಟಲಿಗಳಿಂದ ನಿರ್ಮಿಸಿದ ಹೈಡ್ರೋಜನ್ ಕಾರು
ಇಡೀ ಜಗತ್ತೇ ಪರ್ಯಾಯ ಸಂಚಾರ ವಾಹಕದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿರುವಂತೆಯೇ ರಿವರ್ ಸಿಂಪಲ್ ಎಂಬ ಸಂಸ್ಥೆಯು ನೂತನ ರಾಸಾ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರನ್ನು ಅಭಿವೃದ್ಧಿಪಡಿಸಿದೆ.
21ನೇ ಶತಮಾನದಲ್ಲಿ ಪರಿಸರ ಸ್ನೇಹಿ ವಾಹನಗಳ ಹುಡುಕಾಟದಲ್ಲಿರುವ ವಾಹನ ಜಗತ್ತಿಗೆ ಇದೊಂದು ಬದಲಿ ಆಯ್ಕೆಯಾಗಿರಲಿದ್ದು, ಮುಂಬರುವ ವರ್ಷಗಳಲ್ಲಿ ರಸ್ತೆಗೆ ಕಾಲಿಡುವ ನಿರೀಕ್ಷೆಯನ್ನು ಹೊಂದಲಾಗಿದೆ.

ಕೇವಲ ತಂತ್ರಜ್ಞಾನದ ವಿಷಯದಲ್ಲಿ ಮಾತ್ರವಲ್ಲದೆ ಸುಸ್ಥಿರ ವಿನ್ಯಾಸ ತಂತ್ರಗಾರಿಕೆಯಲ್ಲೂ ಇಲ್ಲಿ ಗಮನ ಕೊಡಲಾಗಿದೆ. ಅಂದರೆ ಇಕ್ಕಟ್ಟಿನ ಪ್ರದೇಶದಲ್ಲೂ ಪಾರ್ಕಿಂಗ್ ತೊಂದರೆ ಕಾಡದು.

ಇಲ್ಲಿ ಸರಳತೆ, ದಕ್ಷತೆ, ಚುರುಕುತನ, ಶಕ್ತಿ, ಸುರಕ್ಷತೆ ಮತ್ತು ಸುಸ್ಥಿರ ತಂತ್ರಜ್ಞಾನಕ್ಕೆ ಆದ್ಯತೆ ಕೊಡಲಾಗಿದೆ.

ಎರಡು ಸೀಟುಗಳ ರಾಸಾ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರಿನ ನಿರ್ಮಾಣದಲ್ಲಿ ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ.

ಕಾಂಪೊಸಿಟ್ ಮೊನೊಕಾಕ್ ಸಂರಚನೆಯನ್ನು ಪಡೆದಿದ್ದು, ಸಂಕುಚಿತ ಹೈಡ್ರೋಜನ್ ಟ್ಯಾಂಕ್ ಜೋಡಣೆ ಮಾಡಲಾಗಿದೆ.

ಪ್ರಸ್ತುತ ಮೊದಲ ಮಾದರಿಯು ಕೇವಲ 580 ಕೆ.ಜಿ ಭಾರವನ್ನಷ್ಟೇ ಹೊಂದಿದೆ. ಅಲ್ಲದೆ ನಾಲ್ಕು ಎಲೆಕ್ಟ್ರಿಕ್ ಮೋಟಾರು ಇದರಲ್ಲಿರಲಿದೆ.

ಬ್ರೇಕಿಂಗ್ ವೇಳೆ ಶಕ್ತಿ ಪ್ರತ್ಯುತ್ಪಾದನೆಯಾಗಲಿದ್ದು, ಇವುಗಳ ಸಂರಕ್ಷಣೆಗಾಗಿ ಸೂಪರ್ ಕ್ಯಾಪಸಿಟರ್ ಇರಲಿದೆ.

8.5 ಕೆಡಬ್ಲ್ಯು ಹೈಡ್ರೋಜನ್ ಫ್ಯೂಯಲ್ ಸೆಲ್ ನಿಯಂತ್ರಿತ ರಾಸಾ ಕಾರು 300 ಕೀ.ಮೀ. ವ್ಯಾಪ್ತಿಯ ವರೆಗೆ ಸಾಗಬಹುದಾಗಿದೆ. ಅಲ್ಲದೆ ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿದೆ.

ನೆಟ್ ವರ್ಕ್ ಎಲೆಕ್ಟ್ರಿಕ್ ಕಾರು ಎಂದು ಇದನ್ನು ವಿಶ್ಲೇಷಿಸಲಾಗುತ್ತಿದ್ದು, ನಾವೀನ್ಯ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ಒಟ್ಟಾರೆಯಾಗಿ 2018ರ ಸಾಲಿನಲ್ಲಷ್ಟೇ ರಾಸಾ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರು ಲೋಕಾರ್ಪಣೆಯಾಗಲಿದೆ.


Click it and Unblock the Notifications








