ಹೈಡ್ರೋಜನ್ ಫ್ಯಾಮಿಲಿಗೆ ಸ್ವಾಗತ; ಹೋಂಡಾ ಎಫ್‌ಸಿವಿ ಕಾರು

By Nagaraja

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಪ್ರತಿಷ್ಠಿತ 2015 ಜಿನೆವಾ ಮೋಟಾರು ಶೋದಲ್ಲಿ ಫ್ಯೂಯಲ್ ಸೆಲ್ ವಾಹನದ (ಎಫ್‌ಸಿವಿ) ಕಾನ್ಸೆಪ್ಟ್ ಪ್ರದರ್ಶಿಸಿದೆ. ಈ ಮೂಲಕ ಹೈಡ್ರೋಜನ್ ವಾಹನಗಳ ನಿರ್ಮಾಣದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಮುಖ್ಯಾಂಶಗಳು

  • ಮುಂದಿನ ಪೀಳಿಗೆಯ ಫ್ಯೂಯಲ್ ಸೆಲ್ ವಾಹನ,
  • 2016ನೇ ಇಸವಿಯಲ್ಲಿ ಬಿಡುಗಡೆ,
  • ಹೈಡ್ರೋಜನ್ ಎನರ್ಜಿ ಸಮಾಜಕ್ಕೆ ಹೋಂಡಾ ಕೊಡುಗೆ,

ಕಳೆದ ವರ್ಷ ನವೆಂಬರ್‌ನಲ್ಲಿ ಟೊಕಿಯೊದಲ್ಲೂ ಹೋಂಡಾ ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನ ಪ್ರದರ್ಶನ ಕಂಡಿತ್ತು. ಅಲ್ಲದೆ ಜಪಾನ್ ಮಾರುಕಟ್ಟೆಯನ್ನು 2016 ಮೊದಲಾರ್ಧದಲ್ಲೇ ತಲುಪಲಿದ್ದು, ತದಾ ಬಳಿಕ ಅಮೆರಿಕ ಹಾಗೂ ಯುರೋಪ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಹೈಡ್ರೋಜನ್ ಫ್ಯಾಮಿಲಿಗೆ ಸ್ವಾಗತ; ಹೋಂಡಾ ಎಫ್‌ಸಿವಿ ಕಾರು

ಹೋಂಡಾ ಮುಂದಿನ ಪೀಳಿಗೆಯ ಫ್ಲೂಯಲ್ ಸೆಲ್ ವಾಹನದ ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ಈ ಸಾಂಪ್ರಾದಾಯಿಕ ಸೆಡಾನ್ ಶೈಲಿಯ ಹೈಡ್ರೋಜನ್ ಕಾರಿನಲ್ಲಿ ಐದು ಪ್ರಯಾಣಿಕರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

ಹೈಡ್ರೋಜನ್ ಫ್ಯಾಮಿಲಿಗೆ ಸ್ವಾಗತ; ಹೋಂಡಾ ಎಫ್‌ಸಿವಿ ಕಾರು

ಇದರಲ್ಲಿ ಆಳವಡಿಸಲಾಗಿರುವ ಹೈಡ್ರೋಜನ್ ಸ್ಟೋರೆಜ್ ಟ್ಯಾಂಕ್ ಮುಖಾಂತರ ಭರ್ತಿ 700 ಕೀ.ಮೀ. ವ್ಯಾಪ್ತಿಯ ವರೆಗೆ ಸಾಗಬಹುದಾಗಿದೆ. ಅಷ್ಟೇ ಯಾಕೆ ಕೇವಲ ಮೂರು ನಿಮಿಷಗಳಲ್ಲೇ ಮರು ತುಂಬಬಹುದಾಗಿದೆ.

ಹೈಡ್ರೋಜನ್ ಫ್ಯಾಮಿಲಿಗೆ ಸ್ವಾಗತ; ಹೋಂಡಾ ಎಫ್‌ಸಿವಿ ಕಾರು

ನಿರಂತರ ಅಧ್ಯಯನದ ಬಳಿಕ ಹೋಂಡಾ ಎಫ್‌ಸಿವಿ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಸ್ಮಾರ್ಟ್ ಹೈಡ್ರೋಜನ್ ಸ್ಟೇಷನ್ (ಎಸ್‌ಎಚ್‌ಎಸ್) ಅಪ್ಲಿಕೇಷನ್ ಅನ್ನು ಸಹ ಹೋಂಡಾ ಪ್ರೋತ್ಸಾಹಿಸುತ್ತಿದೆ.

ಹೈಡ್ರೋಜನ್ ಫ್ಯಾಮಿಲಿಗೆ ಸ್ವಾಗತ; ಹೋಂಡಾ ಎಫ್‌ಸಿವಿ ಕಾರು

ಒಟ್ಟಿನಲ್ಲಿ ಪರಿಸರಕ್ಕೆ ಮಾರಾಕವಾಗಿರುವ ಇಂಧನ ಚಾಲಿತ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಹೋಂಡಾ ಎಫ್‌ಸಿವಿ ವಾಹನಗಳು ಬದಲಿ ವ್ಯವಸ್ಥೆಯಾಗಲಿದೆ. ಅಷ್ಟಕ್ಕೂ ಹೈಡ್ರೋಜನ್ ನಿಯಂತ್ರಿತ ಕಾರುಗಳು ಭಾರತಕ್ಕೆ ಯಾವಾಗ ಪ್ರವೇಶವಾಗಲಿದೆ ಎಂಬುದಕ್ಕೀಗ ಉತ್ತರ ನೀಡುವುದು ಕಷ್ಟಕರವಾಗಿದೆ.

Most Read Articles

Kannada
English summary
The 2015 Geneva Motor Show is where most manufacturers showcase their upcoming and futuristic models. Honda has taken this opportunity and showcased its FCV concept for the very first time in Europe. It is a near production model that will be launched in Japan by 2016.
Story first published: Friday, March 6, 2015, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X