ಹೆಂಡತಿಯೊಂದಿಗೆ ಶಾಪಿಂಗ್‌ ಮಾಡಲು ಬುಹುಕೋಟಿ ಕಾರಿನಲ್ಲಿ ಸರಳವಾಗಿ ಬಂದ ರೋಹಿತ್ ಶರ್ಮಾ

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ಇವರು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೂ ಕಾರುಗಳ ಕ್ರೇಜ್ ಅನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಅವರ ಬಳಿ ಲ್ಯಾಂಬೊರ್ಗಿನಿ ಉರುಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಅವರು ತಮ್ಮ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.

Rohit Sharma

ಇತ್ತೀಚೆಗೆ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇಹ್ ತಮ್ಮ ಲ್ಯಾಂಬೊರ್ಗಿನಿ ಕಾರಿನಲ್ಲಿ ಕಾಣಿಸಿಕೊಂಡ ವೀಡಿಯೊ ಸಖತ್ ವೈರಲ್ ಆಗಿದೆ. ಮುಫದ್ದಲ್ ವೋಹ್ರಾ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೊ, ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮ ತಮ್ಮ ಪತ್ನಿಯೊಂದಿಗೆ ಮುಂಬೈನ ಅಂಗಡಿಯೊಂದಕ್ಕೆ ಆಗಮಿಸಿದ ಶಾರ್ಟ್ ಕ್ಲಿಪ್ ಆಗಿದೆ. ನೀಲಿ ಬಣ್ಣದ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿ.

ಹಿಟ್‌ಮ್ಯಾನ್‌ ಈ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರನ್ನು 2022 ರಲ್ಲಿ ಖರೀದಿಸಿದ್ದಾರೆ. ರೋಹಿತ್ ಶರ್ಮಾ ಡ್ರೈವರ್ ಸೀಟ್ ನಲ್ಲಿ ಇರಲಿಲ್ಲ. ಅವರು ಸಹ ಪ್ರಯಾಣಿಕನ ಸೀಟ್ ನಿಂದ ಇಳಿದು ಬಂದರು. ಅವರ ಹೆಂಡತಿ ಎದುರುಗಡೆ ಡ್ರೈವರ್ ಸೀಟ್ ನಿಂದ ಬಂದರು. ಕುತೂಹಲಕಾರಿಯಾಗಿ, ಅವರ ಪತ್ನಿಯೇ ಕಾರನ್ನು ಡ್ರೈವ್ ಮಾಡಿದ್ದಾರೆ. ಕಾರಿನಿಂದ ರೋಹಿತ್ ಶರ್ಮ ಅವರು ಹೊರಗೆ ಬರುವಾಗ, ಅವರ ಅಭಿಮಾನಿಗಳು, ಛಾಯಾಗ್ರಾಹಕರು ಮತ್ತು ವ್ಲಾಗರ್‌ಗಳಿಂದ ಸುತ್ತುವರಿಯಲ್ಪಟ್ಟರು.

ನಂತರ ರೋಹಿತ್ ಶರ್ಮ ಅವರು ಸರಳವಾಗಿ ಅಂಗಡಿಯನ್ನು ಪ್ರವೇಶಿಸಿದರು. ರೋಹಿತ್ ಶರ್ಮ ಕಾಣಿಸಿಕೊಂಡ ಕಾರು ಬಗ್ಗೆ ಹೇಳುವುದಾದರೆ, ಇದು ಲ್ಯಾಂಬೊರ್ಗಿನಿ ಉರುಸ್ ಆಗಿದೆ. ಉರುಸ್ ಅನ್ನು ಜನವರಿ 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮೊದಲ ಕಾರನ್ನು ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ವಿತರಿಸಲಾಯಿತು. ಒಂದು ವರ್ಷದೊಳಗೆ, ಕಂಪನಿಯು ಭಾರತದಲ್ಲಿ 50 ಯೂನಿಟ್ ಕಾರನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದರು. ಈ ಎಸ್‍ಯುವಿಯ ಒಳಗೆ ಹಾಗೂ ಹೊರಗೆ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ.

2020ರ ಜೂನ್ ತಿಂಗಳಿನಲ್ಲಿ ಕಂಪನಿಯು ಉರುಸ್‌ ಎಸ್‌ಯುವಿಗಾಗಿ ಹೊಸ ಪರ್ಲ್ ಕ್ಯಾಪ್ಸುಲ್ ಹಾಗೂ ಕಾರ್ಬನ್ ಫೈಬರ್ ಬಣ್ಣವನ್ನು ಪರಿಚಯಿಸಿತು. ಉರುಸ್, ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಅನೇಕ ಫೀಚರ್'ಗಳನ್ನು ಹೊಂದಿದೆ. ಉರುಸ್ ಎಸ್‌ಯುವಿಯಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಎಂಜಿನ್ ಆಗಿದೆ. ಈ ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಸ್‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಹಲವು ಚಿತ್ರ ನಟರು ಹಾಗೂ ಉದ್ಯಮಿಗಳು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ.

ಈ ಐಷಾರಾಮಿ ಎಸ್‌ಯುವಿಯು ಆಫ್-ರೋಡ್'ಗಾಗಿ ವಿಭಿನ್ನ ಚಾಲನಾ ವಿಧಾನಗಳನ್ನು ಹೊಂದಿದೆ. ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂನ ಮೇಲೆ ನಿರ್ಮಾಣವಾಗಿದೆ. ಈ ಪ್ಲಾಟ್‌ಫಾರಂನಲ್ಲಿಯೇ ಆಡಿ ಕ್ಯೂ 7 ಹಾಗೂ ಪೋರ್ಷೆ ಕೇನ್ ಕಾರುಗಳನ್ನು ನಿರ್ಮಿಸಲಾಗಿದೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯು ಸ್ಲಿಮ್ ಆದ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ.

ಈ ಎಸ್‌ಯುವಿಯ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರಿನಿಂದ ಸ್ಫೂರ್ತಿ ಪಡೆದಿದೆ. ಲ್ಯಾಂಬೊರ್ಗಿನಿ ಉರುಸ್ 21 ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ.

ಇನ್ನು ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯಲ್ಲಿರುವ ಕ್ಲಾಡಿಂಗ್ ಗ್ಲೋಸಿ ಬ್ಲಾಕ್ ಬಣ್ಣವನ್ನು ಹೊಂದಿದ್ದರೆ ಸ್ಟ್ಯಾಂಡರ್ಡ್ ಮಾದರಿಯ ಉರುಸ್ ಮ್ಯಾಟ್ ಬ್ಲಾಕ್ ಬಣ್ಣದ ಕ್ಲಾಡಿಂಗ್ ಹೊಂದಿದೆ. ಈ ಗ್ಲೋಸ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಲ್ಯಾಂಬೊರ್ಗಿನಿ ಕಂಪನಿಯ ಸ್ಟೈಲ್ ಪ್ಯಾಕೇಜ್‌ನ ಭಾಗವಾಗಿ ನೀಡಲಾಗುತ್ತದೆ. ಉರುಸ್ 440 ಎಂಎಂ ಮೂಲಕ ಅತಿದೊಡ್ಡ ಕಾರ್ಬನ್-ಸೆರಾಮಿಕ್ ಬ್ರೇಕ್ ರೋಟಾರ್‌ಗಳನ್ನು ಹೊಂದಿರುವ ಪ್ರಪಂಚದ ಏಕೈಕ ಉತ್ಪಾದನಾ ಕಾರು.

More from DriveSpark

Article Published On: Friday, August 11, 2023, 13:38 [IST]
English summary
Rohit sharma and his wife seen in lamborghini urus details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+