ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನ ಮಹಿಳಾ ಪೊಲೀಸರು ಬುಲೆಟ್ ರ‍್ಯಾಲಿ ಹಮ್ಮಿಕೊಂಡಿದರು. ಮಹಿಳಾ ಪೊಲೀಸ್ ಪಡೆಯ ಈ ಬುಲೆಟ್ ರ‍್ಯಾಲಿಯು ಎಲ್ಲರ ಗಮನಸೆಳೆದಿದೆ.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಬೆಂಗಳೂರಿನಲ್ಲಿ ಹಲವು ಬಾರಿ ಮಹಿಳೆಯರ ಮೇಲೆ ದುರ್ಜನ್ಯ ನಡೆದಾಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಪೊಲೀಸರ ಮೇಲೆ ಹೆಚ್ಚಿನ ಒತ್ತಡವಿತ್ತು. ಬೆಂಗಳೂರಿನ ಪೊಲೀಸರು ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆಗಳನ್ನು ರಚಿಸಿದ್ದಾರೆ. ಈ ವಿಶೇಷ ಪೊಲೀಸ್ ಪಡೆಗಳು ಬೆಂಗಳೂರಿನ ನಗರದಲ್ಲಿ ಗಸ್ತು ತಿರುಗುತ್ತಾ ನಿಗಾ ವಹಿಸುತ್ತಾರೆ.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಮಹಿಳೆಯರು ರಾತ್ರಿ ಸಮಯದಲ್ಲಿ ಮನೆಗೆ ಹೋಗುವುದಕ್ಕೆ ಬಸ್ ಅಥವಾ ಇತರ ಸಾರಿಗೆ ವ್ಯವಸ್ಥೆ ವ್ಯತ್ಯಯ ಕಂಡು ಬಂದರೆ 1091 ನಂಬರ್ ಗೆ ಕರೆ ಮಾಡಿ ಬೆಂಗಳೂರು ಪೊಲೀಸರಿಗೆ ತಿಳಿಸಬಹುದಾಗಿದೆ. ಕೂಡಲೇ ಕಂಟ್ರೋಲ್ ರೂಂ ಸಿಬ್ಬಂದಿ ಮಹಿಳೆಯರು ಇರುವ ಸ್ಥಳ ಹಾಗೂ ಮಹಿಳೆ ತಲುಪಬೇಕಾದ ಸ್ಥಳದ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕ ಮಹಿಳೆ ಇರುವ ಸ್ಥಳಕ್ಕೆ ಹತ್ತಿರದ ಠಾಣೆಯ ಹೊಯ್ಸಳ ವಾಹನವನ್ನು ಕಳುಹಿಸಿಕೊಡುತ್ತಾರೆ.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಹೊಯ್ಸಳ ವಾಹನವು ಸ್ಥಳಕ್ಕೆ ಆಗಮಿಸಿ ಮಹಿಳೆಯಿಂದ ಮಾಹಿತಿ ಪಡೆದು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸವನ್ನು ಪೊಲೀಸ್ ಸಿಬ್ಬಂದಿ ಮಾಡುತ್ತಾರೆ.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಈ ರೀತಿ ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಭಾಗವಾಗಿ ಮೈಸೂರು ರೋಡ್ ನ ಸಿಎಆರ್ ಆವರಣದಿಂದ ಬುಲೆಟ್ ರ‍್ಯಾಲಿಯನ್ನು ಹಮ್ಮಿಕೊಂಡಿದರು.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ರ‍್ಯಾಲಿಯಲ್ಲಿ 15 ಮಹಿಳಾ ಪಿ‍ಎಸ್ಐಗಳು ಭಾಗವಹಿಸಿದ್ದರು. ಬೆಂಗಳೂರಿನ ಸಿಎಆರ್ ಅವರಣದಿಂದ ರ‍್ಯಾಲಿಯನ್ನು ಪ್ರಾರಂಭಿಸಿ ನಂದಿಬೆಟ್ಟದ ಬಳಿಯಿರುವ ಬೋಗನಂದಿಶ್ವರ ದೇವಸ್ಥಾನದವರೆಗೆ ತೆರಳಿದರು.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಈ ರ‍್ಯಾಲಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಚಾಲೆನೆ ನೀಡಿದರು. ರಾಯಲ್ ಎನ್‍‍ಫೀಲ್ಡ್ ಕಂಪನಿಯ ಸಹಯೋಗದೊಂದಿಗೆ ಬೆಂಗಳೂರು ಪೊಲೀಸರು ಬೈಕ್ ರ‍್ಯಾಲಿ ತೆರಳಿದರು. ಈ ರ‍್ಯಾಲಿಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳು ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್ ಅನ್ನು ರೈಡ್ ಮಾಡಿದರು.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಹಿಮಾಲಯನ್ ಬೈಕ್

ಹೊಸ ಹಿಮಾಲಯನ್ ಬೈಕಿನಲ್ಲಿ ಸ್ವಿಚ್ಎಬಲ್ ಎಬಿಎಸ್ ಮತ್ತು ಹಾರ್ಜಾರ್ಡ್ ಲೈ‍‍‍ಟ್‍ಗಳನ್ನು ಹೊಂದಿರಲಿದೆ. ಸ್ವಿಚ್‍‍ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನಿಗೆ ಬೈಕಿನ ಬೆಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಿದೆ. ಈ ಬೈಕಿನ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರಲಿದೆ.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಹಿಮಾಲಯನ್ ಬಿಎಸ್-6 ಮಾದರಿಯಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 24.5 ಬಿ‍‍ಹೆಚ್‍‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗುವುದು.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಬೈಕಿನ ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್‍‍ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್‌ಗಳನ್ನು ಹೊಂದಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍‍ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್‍‍ಗಳಿವೆ.

ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಲೇಡಿ ಪೊಲೀಸರ ಬುಲೆಟ್ ರ‍್ಯಾಲಿ

ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೆಂಗಳೂರು ಪೊಲೀಸರು ಈ ರ‍್ಯಾಲಿಯನ್ನು ಹಮ್ಮಿಕೊಂಡಿದರು. ಮಹಿಳೆಯರು ಬೆಂಗಳೂರು ನಗರದಲ್ಲಿ ಯಾವುದೇ ಭಯಭೀತಿ ಇಲ್ಲದೆ ವಾಹನವನ್ನು ಚಾಲಯಿಸಬಹುದು ಮತ್ತು ಓಡಾಡಬಹುದು ಎಂಬ ಸಂದೇಶವನ್ನು ಈ ರ‍್ಯಾಲಿ ಮೂಲಕ ನೀಡಿದೆ.

Most Read Articles

Kannada
English summary
Bangalore woman cops get Royal Enfield Himalayan. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more