ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲಿಯೇ ಇರುವಂತಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರು ನಾನಾ ರೀತಿಯ ವೀಡಿಯೊಗಳನ್ನು ತಯಾರಿಸಿ ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ಅನೇಕ ಜನ ಮನೆಯಲ್ಲಿ ಕುಳಿತು ಹೊಸ ಹೊಸ ಕೆಲಸಗಳನ್ನು ಮಾಡುವ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಚಿತ್ರವಾದ ಆದರೆ ಮನರಂಜನೆ ನೀಡುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ಸ್‌ಸ್ಟಾಗ್ರಾಂನಲ್ಲಿ ಅಸ್ಸಾಂನ ಯುವಕರ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ.

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ಈ ವೀಡಿಯೊದಲ್ಲಿರುವ ಇಬ್ಬರು ಯುವಕರು ರಾಯಲ್ ಎನ್‌ಫೀಲ್ಡ್ ಬೈಕಿನ ಸೈಲೆನ್ಸರ್ ಸೌಂಡಿಗೆ ತಕ್ಕಂತೆ ಗಿಟಾರ್ ಹಾಗೂ ಕೊಳಲಿನೊಂದಿಗೆ ಮಧುರ ಗೀತೆಗಳನ್ನು ರಚಿಸಿ ನುಡಿಸುತ್ತಿದ್ದಾರೆ. ಈ ವೀಡಿಯೊವನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ಈ ವೀಡಿಯೊದಲ್ಲಿರುವ ಯುವಕರು ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350 ಎಕ್ಸ್ ಬೈಕಿನ ಎಕ್ಸಾಸ್ಟ್ ಶಬ್ದಕ್ಕೆ ರಾಗಗಳನ್ನು ಸಂಯೋಜಿಸುತ್ತಿದ್ದಾರೆ. ವೀಡಿಯೊವನ್ನು ಬಹಳಷ್ಟು ಮಂದಿ ಇಷ್ಟಪಟ್ಟಿದ್ದು, ಇದುವರೆಗೆ 81,121 ಬಾರಿ ವೀಕ್ಷಿಸಲಾಗಿದೆ.

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ತಮ್ಮ ವಿಭಿನ್ನ ನೋಟ ಹಾಗೂ ಶೈಲಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿವೆ. ಈ ಶ್ರೇಣಿಯಲ್ಲಿನ ಬೈಕ್‌ಗಳು ಉತ್ತಮವಾದ ಪರ್ಫಾಮೆನ್ಸ್ ನೀಡುತ್ತವೆ. ಆದರೆ ಹೆಚ್ಚಿನ ಮೈಲೇಜ್ ಬಯಸುವ ಭಾರತೀಯರು 100 ಸಿಸಿ ಅಥವಾ 150 ಸಿಸಿ ಬೈಕ್‌ಗಳನ್ನು ಖರೀದಿಸುತ್ತಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮೈಲೇಜ್ ಅನ್ನು ಹೊರತು ಪಡಿಸಿ ತಮ್ಮ ಪವರ್, ಲುಕ್ ಹಾಗೂ ಸೌಂಡ್‌ನಿಂದ ಗಮನ ಸೆಳೆಯುತ್ತವೆ. ಈ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ಈ ಬೈಕ್ ಅನ್ನು ಭಾರತದಲ್ಲಿ ಪರಿಪೂರ್ಣ ಬೈಕ್ ಎಂದು ಪರಿಗಣಿಸಲಾಗುತ್ತದೆ. ಈ ಬೈಕ್ ಅನ್ನು ಜನರ ವ್ಯಕ್ತಿತ್ವದೊಂದಿಗೂ ಸಹ ಗುರುತಿಸಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅನೇಕ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರಾಯಲ್ ಎನ್‌ಫೀಲ್ಡ್ ಕಂಪನಿಯು ಥಂಡರ್ ಬರ್ಡ್ 350 ಎಕ್ಸ್ ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಈ ಬೈಕಿನ ಬದಲು 350 ಸಿಸಿಯ ಹೊಸ ಮೆಟಿಯೊರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಬುಲೆಟ್ ಸೈಲೆನ್ಸರ್ ಸೌಂಡಿನಂತೆ ಗಿಟಾರ್, ಕೊಳಲು ನುಡಿಸಿದ ಯುವಕರು

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ 500 ಸಿಸಿ ಬೈಕ್‌ಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಿದೆ. ಕಂಪನಿಯು ಭಾರತದಲ್ಲಿ ಈಗ 350 ಸಿಸಿ ಹಾಗೂ 650 ಸಿಸಿ ಬೈಕುಗಳನ್ನು ಮಾತ್ರ ಉತ್ಪಾದಿಸಿ ಮಾರಾಟ ಮಾಡುತ್ತಿದೆ.

Article Published On: Wednesday, May 6, 2020, 19:24 [IST]
English summary
Royal Enfield Bullet Exhaust Note used to make music amidst lockdown. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+