ಬಡ ಸೆಕ್ಯುರಿಟಿ ಗಾರ್ಡ್ ಜೀವನದ ಬಹುದೊಡ್ಡ ಕನಸು ನನಸು ಮಾಡಿದ ಹೃದಯವಂತ ಯೂಟ್ಯೂಬರ್
ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ಅಷ್ಟರ ಮಟ್ಟಿಗೆ ಕ್ರೇಜ್ ಅನ್ನು ಹೊಂದಿದೆ.
ರಾಯಲ್ ಎನ್‍ಫೀಲ್ಡ್ ತನ್ನ ಕ್ಲಾಸಿಕ್ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ಅದರಲ್ಲೂ, ಇತ್ತೀಚೆಗೆ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಅನೇಕರ ಕನಸಿನ ಬೈಕು ಆಗಿದೆ. ಈ ಕೆಫೆ ರೇಸರ್ ಬೈಕ್ ಬೆಲೆಯು ರೂ.3.19 ಲಕ್ಷವಾಗಿದೆ. ಕಾಂಟಿನೆಂಟಲ್ ಜಿಟಿ 650 ಮಾಲಿಕರೊಬ್ಬರು ಇತ್ತೀಚೆಗೆ ಒಬ್ಬ ವ್ಯಕ್ತಿಯ ಕನಸನ್ನು ನನಸಾಗಿಸಲು ಸೆಕ್ಯುರಿಟಿ ಗಾರ್ಡ್‌ಗೆ ಬೈಕ್ ಚಲಾಯಿಸಲು ಅವಕಾಶ ನೀಡಿದರು.

ಈ ಘಟನೆಯ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ರೋವಿಂಗ್ ವಿಜ್ ತಮ್ಮ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 (Royal Enfield Continental GT 650) ಹ್ಯಾಂಡಲ್‌ಬಾರ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ತನ್ನ ಕೈ ಇಟ್ಟು ಎಕ್ಸ್ಲೆಟರ್ ಕೊಡುವ ಮೂಲಕ ವೀಡಿಯೋ ಪ್ರಾರಂಭವಾಗುತ್ತದೆ. ನಂತರ ಮಾಲೀಕರು ಬೈಕ್ ಓಡಿಸಲು ಸೆಕ್ಯುರಿಟಿ ಗಾರ್ಡ್‌ಗೆ ಹೇಳುತ್ತಾರೆ. ಈ ಐಷಾರಾಮಿ ಸ್ವಲ್ಪ ಸಮಯದವರೆಗೂ ಸೆಕ್ಯುರಿಟಿ ಗಾರ್ಡ್‌ಗೆ ಬೈಕ್ ಓಡಿಸುತ್ತಾರೆ.
ನಂತರ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮಾಲೀಕರು ಸೆಕ್ಯುರಿಟಿ ಗಾರ್ಡ್‌ಗೆ (Security Guard) ಬೈಕ್ ಓಡಿಸಿ ಫನ್ ಮಾಡಿದ್ದೀರಾ ಎಂದು ಕೇಳುತ್ತಾರೆ. ಇದಕ್ಕೆ ಸೆಕ್ಯುರಿಟಿ ಗಾರ್ಡ್ ಒಂದು ದೊಡ್ಡ ಸ್ಮೈಲ್ ನೀಡುತ್ತಾನೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಬಗ್ಗೆ ಹೇಳುವುದಾದರೆ, ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಹೆಚ್ಚು ಅಗತ್ಯವಿರುವ ಅಲಾಯ್ ವ್ಹೀಲ್ ಗಳನ್ನು ಪರಿಚಯಿಸಿದ್ದಾರೆ.

ಈ ಕಾಂಟಿನೆಂಟಲ್ ಜಿಟಿ 650 ಬೈಕಿನ ವೈರ್ ಸ್ಪೋಕ್ಡ್ ವೀಲ್‌ಗಳು ಅದ್ಭುತವಾದ ರೆಟ್ರೊ ಲುಕ್ ಅನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಬ್ಲ್ಯಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ಆಗಿ ಬ್ಲ್ಯಾಕ್ ಔಟ್ ಬಿಟ್‌ಗಳೊಂದಿಗೆ ಸ್ಲಿಪ್‌ಸ್ಟ್ರೀಮ್ ಬ್ಲೂ ಮತ್ತು ಅಪೆಕ್ಸ್ ಗ್ರೇ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ.
ಇನ್ನು ಈ ಕೆಫೆ ರೇಸರ್ ಅನ್ನು ಡಕ್ಸ್ ಡಿಲಕ್ಸ್, ಬ್ರಿಟಿಷ್ ರೇಸಿಂಗ್ ಗ್ರೀನ್, ರಾಕರ್ ರೆಡ್ ಪೇಂಟ್ ಮತ್ತು ಮಿಸ್ಟರ್ ಕ್ಲೀನ್ ಬಣ್ಣಗಳೊಂದಿಗೆ ಸಹ ಮಾರಾಟವಾಗಲಿದೆ. ಬ್ಲ್ಯಾಕ್ ಔಟ್ ಬಿಟ್‌ಗಳು ಎಂಜಿನ್ ಪ್ರದೇಶ ಮತ್ತು ಎಕ್ಸಾಸ್ಟ್‌ಗೆ ಡಾರ್ಕ್ ಫಿನಿಶ್ ಅನ್ನು ಒಳಗೊಂಡಿವೆ. ಟ್ಯೂಬ್‌ಲೆಸ್ ಟೈರ್‌ಗಳಲ್ಲಿನ ಕ್ಯಾಸ್ಟ್ ಅಲಾಯ್ ವ್ಹೀಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಆದರೆ ಇತರ ನವೀಕರಣಗಳಲ್ಲಿ ಹೊಸ ಎಲ್ಇಡಿ ಹೆಡ್‌ಲೈಟ್ ಯುನಿಟ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಹೊಸ ಸ್ವಿಚ್‌ಗಿಯರ್ ಮತ್ತು ಸುಧಾರಿತ ಸೀಟ್ ಸೌಕರ್ಯಗಳು ಕೂಡ ಒಳಗೊಂಡಿವೆ. ಈ ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳಲ್ಲಿ 648 ಸಿಸಿ ಏರ್- ಮತ್ತು ಆಯಿಲ್-ಕೂಲ್ಡ್ ಪ್ಯಾರಲಲ್ ಟ್ವಿನ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎರಡೂ ಟ್ವಿನ್ ಬೈಕ್‌ಗಳಲ್ಲಿ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications