ಇದೇನ್ ಸಾರ್ ಇವ್ರು ಆಟ ಆಡ್ತಿದ್ದಾರಾ?: ಟೋಯೋಟಾ ಲಾಂಚ್ ಮಾಡಲಿದೆಯಂತೆ ಮಾರುತಿಯ ಈ ಸ್ಟೈಲಿಶ್ ಕಾರು
ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿಗಳು ವಿಪರೀತವಾಗಿ ಹೆಚ್ಚಾಗಿದ್ದು, ಸ್ಪರ್ಧಾತ್ಮಕ ಮೊತ್ತದಲ್ಲಿ ಅತ್ಯುತ್ತಮ ಕಾರುಗಳನ್ನು ಜನರಿಗೆ ತಲುಪಿಸಲು ಕಾರು ತಯಾರಿಕಾ ಕಂಪನಿಗಳು ಪ್ರಯತ್ನಿಸುತ್ತಿದ್ದು, ತಮ್ಮ ಕಾರಿನ ಮಾರಾಟ ಹೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಗ್ರಾಹಕ ಮಾತ್ರ ಒಳ್ಳೆಯ ಉತ್ಪನ್ನಗಳನ್ನು ಪಡೆಯುತ್ತಿದ್ದಾನೆ.
ಈ ಮಧ್ಯೆ ಮಾರುತಿ ಸುಜುಕಿ ಮತ್ತು ಟೊಯೋಟಾ ಕಾರು ತಯಾರಿಕಾ ಕಂಪನಿಗಳು ಮಾತ್ರ ಬೇರೆಯದೇ ತಂತ್ರವನ್ನು ಭಾರತೀಯ ಮಾರುಕಟ್ಟೆಯಲ್ಲಿ ನಡೆಸುತ್ತಿದ್ದು, ಇದರಲ್ಲಿ ಎರಡೂ ಕಂಪನಿಗಳು ಸಹ ಯಶಸ್ವಿಯೂ ಆಗಿದೆ. ಟೊಯೋಟಾ ಮತ್ತು ಮಾರುತಿ ಸುಜುಕಿಯ ಸಹಯೋಗದಲ್ಲಿ ಈಗಾಗಲೇ ಕೆಲವು ವಾಹನಗಳು ಬಂದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಇತ್ತೀಚೆಗಷ್ಟೇ ಮಾರುತಿ ಸುಜುಕಿ ಮತ್ತು ಟೊಯೋಟಾ ಸಹಯೋಗದಲ್ಲಿ ಟೊಯೋಟಾದ ಪ್ರಸಿದ್ದ ಇನ್ನೋವಾ ಹೈಕ್ರಾಸ್ ಕಾರನ್ನು ಮಾರುತಿ ಸುಜುಕಿಯು ಇನ್ವಿಕ್ಟೋ ಎಂಬ ಹೆಸರಿನಲ್ಲಿ ಪರಿಚಯ ಮಾಡಿತ್ತು. ಇದೀಗ ಮತ್ತೆ ಇವೆರಡೂ ಕಂಪನಿಗಳು ಮಾರುಕಟ್ಟೆಗೆ ಹೊಸ ಕಾರನ್ನು ತರುವ ಯೋಜನೆಯಲ್ಲಿದ್ದು, ಗ್ರಾಹಕರು ಆಕಾಂಕ್ಷೆಯಿಂದ ಕಾಯುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಟೊಯೋಟಾವು ಮಾರುತಿ ಸುಜುಕಿಯ ನೆಚ್ಚಿನ ಕ್ರಾಸ್ ಓವರ್ ಎಸ್‌ಯುವಿಯಾದ ಫ್ರಾಂಕ್ಸ್ ಅನ್ನು (Maruti Suzuki Fronx) ರೀಬ್ಯಾಡ್ಜ್ ಮಾಡಿ ಮಾರುಕಟ್ಟೆಗೆ ತರುವ ಯೋಜನೆಯಲ್ಲಿದೆ ಎಂದು ತಿಳಿದು ಬಂದಿದೆ. ಆಟೋ ಎಕ್ಸ್‌ಪೋ ೨೦೨೩ ರಲ್ಲಿ ಮಾರುತಿ ಸುಜುಕಿಯು ಜಿಮ್ನಿಯ ಜೊತೆಗೆ ಫ್ರಾಂಕ್ಸ್ ಅನ್ನು ಅನಾವರಣ ಗೊಳಿಸಿ ಬಹುದೊಡ್ಡ ಶಾಕ್ ನೀಡಿತ್ತು.

ಇದೀಗ ಮಾರುತಿ ಸುಜುಕಿ ಫ್ರಾಂಕ್ಸ್ ಕಾರನ್ನು ಟೊಯೋಟಾ ತನ್ನ ಫ್ಲಾಟ್‌ಫಾರ್ಮ್‌ನಲ್ಲಿ ಲಾಂಚ್ ಮಾಡುತ್ತಿದೆ ಎಂದು ತಿಳಿದ ಕೂಡಲೇ ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿದ್ದು, ಈ ಮೂಲಕ ಟೊಯೋಟಾ, ತನ್ನ ಗ್ರಾಹಕರಿಗೆ ಮಾರುತಿ ಫ್ರಾಂಕ್ಸ್‌ನ ಅದೇ ಬೆಲೆಯ ರೇಂಜ್‌ನಲ್ಲಿ ಮತ್ತೊಂದು ಆಯ್ಕೆ ಲಭ್ಯವಾಗುವುದರಲ್ಲಿ ಎರಡು ಮಾತಿಲ್ಲ.
ಇನ್ನು ಕಾರಿನ ಡಿಸೈನ್ ಮತ್ತು ಎಂಜಿನ್ ಸ್ಪೆಸಿಫಿಕೇಶನ್‌ಗಳು ಬಹುತೇಕ ಫ್ರಾಂಕ್ಸ್ ಅನ್ನೇ ಹೋಲಲಿದೆ ಎಂಬುದು ಕಾರು ಪಂಡಿತರ ಅಭಿಪ್ರಾಯ. ಇದಕ್ಕೆ ಕಾರಣ ಈ ಹಿಂದೆ ಟೊಯೋಟಾ ಮಾರುತಿಯೊಂದಿಗೆ ಸಹಯೋಗದಲ್ಲಿ ಲಾಂಚ್ ಮಾಡಿದ ಕಾರುಗಳ ಡಿಸೈನ್ ಮತ್ತು ಫೀಚರ್‌ಗಳು ಮಾರುತಿ ಕಾರುಗಳನ್ನೇ ಹೋಲುತ್ತಿದ್ದುದು.
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0-ಲೀಟರ್, ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್‌ಜೆಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಬೂಸ್ಟರ್ ಜೆಟ್ ಎಂಜಿನ್ ಬಲೆನೊದ 1.2-ಲೀಟರ್ K12C ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನೊಂದಿಗೆ ಇರುತ್ತದೆ. ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಫ್ರಾಂಕ್ಸ್‌ನ ಬಾನೆಟ್ ಅಡಿಯಲ್ಲಿ 5,500 ಆರ್‌ಪಿಎಂನಲ್ಲಿ 98.7 ಬಿಹೆಚ್‌ಪಿ ಮತ್ತು 147.6ಎನ್‌ಎಂ ಪೀಕ್ ಟಾರ್ಕ್ ಅನ್ನು 2,000 ಆರ್‌ಪಿಎಂನಿಂದ 4,500 ಆರ್‌ಪಿಎಂವರೆಗೆ ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications