ರಾತ್ರಿ ಬೇಟೆಗಾರ; ಮುನ್ನುಗ್ಗಿ ಬರುವ ಮಿಸೈಲ್‌ಗೆ ಲೇಸರ್ ದಾಳಿಯನ್ನಿಡುವ ಸೂಪರ್ ಹೆಲಿಕಾಪ್ಟರ್
ಐಸಿಸ್ ಉಗ್ರರನ್ನು ನೆಲಸಮಗೊಳಿಸಲು ಅತ್ಯಾಧುನಿಕ ಸೂಪರ್ ಹೆಲಿಕಾಪ್ಟರನ್ನು ರಷ್ಯಾ ಅಭಿವೃದ್ಧಿಗೊಳಿಸಿದೆ.
ಐಸಿಸ್ ನಾಮಾವಶೇಷ ಮಾಡಲು ಪಣತೊಟ್ಟಿರುವ ರಷ್ಯಾ ಪ್ರಬಲ ಮೈಮಾನಿಕ ದಾಳಿ ನಡೆಸುವ ಸಾಮರ್ಥ್ಯವುಳ್ಳ ಅತ್ಯಾಧುನಿಕ ಸೂಪರ್ ಹೆಲಿಕಾಪ್ಟರ್ ವೊಂದನ್ನು ಅಭಿವೃದ್ಧಿಪಡಿಸಿದ್ದು, ತನ್ನತ್ತ ಮುನ್ನುಗ್ಗಿ ಬರುವ ಕ್ಷಿಪಣಿಗಳನ್ನು ಲೇಸರ್ ದಾಳಿಯಿಂದ ನೆಲಸಮಗೊಳಿಸುವಷ್ಟು ಸಾಮರ್ಥ್ಯವನ್ನು ಪಡೆದಿದೆ.

ರಷ್ಯಾ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಎಂಐ-28ಎನ್‌ಎಂ ಯುದ್ಧ ಹೆಲಿಕಾಪ್ಟರನ್ನು ನೈಟ್ ಹಂಟರ್ ಅಥವಾ ರಾತ್ರಿ ಬೇಟೆಗಾರ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದು ಅತ್ಯಂತ ವಿನಾಶಕಾರಿ ಬಾಂಬ್ ಗಳನ್ನು ಹೊತ್ತೊಯ್ಯಲಿದ್ದು, ಡ್ರೋನ್ ಹಾಗೂ ಮಾನವರಹಿತ ವಿಮಾನಗಳನ್ನು ಹೊಡೆದುರುಳಿಸುವಷ್ಟು ಸಮರ್ಥವಾಗಿದೆ.

ಕಳೆದೊಂದು ಶತಮಾನದಿಂದಲೂ ಮಿಲಿಟರಿ ಬಲದಲ್ಲಿ ಮುಂಚೂಣಿಯಲ್ಲಿರುವ ರಷ್ಯಾ, ಭವಿಷ್ಯತ್ತಿನ ವಿನಾಶಕಾರಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವುದರಲ್ಲಿ ಎತ್ತಿದ ಕೈ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ.

ಮಿಲ್ ಎಕ್ಸ್ ಪೀರಿಮೆಂಟಲ್ ಡಿಸೈನ್ ಬ್ಯುರೋ ಈ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ರಷ್ಯಾಗೆ ಆನೆ ಬಲ ಬಂದಂತಾಗಿದೆ.

ನೂತನ ಎಂಐ-28ಎನ್‌ಎಂ ಯುದ್ಧ ಹೆಲಿಕಾಪ್ಟರ್ ರಾತ್ರಿ ವೇಳೆಯಲ್ಲೂ ನಿಖರ ದಾಳಿ ನಡೆಸುವಷ್ಟು ಸಮರ್ಥವಾಗಿರಲಿದೆ.

ಹೈ ಟೆಕ್ ಶಸ್ತ್ರಾಸ್ತ್ರ ಹಾಗೂ ನೆಲದ ಯುದ್ಧ ಘಟಕಗಳನ್ನು ಹೊತ್ತೊಯ್ಯಲಿರುವ ಈ ವಿಮಾನವು ಏಕಾಂಕಿಯಾಗಿಯೇ ವಾಯುವಿನಲ್ಲಿ ಯುದ್ಧ ನಡೆಸುವಷ್ಟು ಬಲಶಾಲಿಯಾಗಿದೆ.

ಯುದ್ಧ ವೇಳೆಯಲ್ಲಿ ದಾಳಿ ನಡೆಸಲು ಬಳಕೆ ಮಾಡಬಹುದಾದ ವಿವಿಧ ರೀತಿಯ ಮಾರ್ಗಸೂಚಿ ಹಾಗೂ ಮಾರ್ಗಸೂಚಿ ರಹಿತ ಕ್ಷಿಪಣಿಗಳು ಇದರಲ್ಲಿರಲಿದೆ.

ಅಷ್ಟೇ ಯಾಕೆ ಸಂಕೇತ ವ್ಯವಸ್ಥೆಯನ್ನು ಸಂಮರ್ದಿಸುವ ತಾಜಾ ವ್ಯವಸ್ಥೆಗಳು ಮತ್ತು ವಿಕಿರಣಗಳನ್ನು ಭೇದಿಸಿ ಒಳ ನುಗ್ಗುವ ಹೀಟ್ ಸೀಕಿಂಗ್ ಮಿಸೈಲ್ ಗಳನ್ನು ಬಗ್ಗು ಬಡಿಯುವ ಲೇಸರ್ ತಂತ್ರಗಾರಿಕೆಯನ್ನು ಪಡೆದಿದೆ.

ರಷ್ಯಾ ಅಭಿವೃದ್ಧಿಪಡಿಸಿರುವ ನೂತನ ಎಂಐ-28ಎನ್ ಎಂ ಯುದ್ಧ ಹೆಲಿಕಾಪ್ಟರ್, ಅಮೆರಿಕದಂತಹ ರಾಷ್ಟ್ರಗಳಿಗೂ ಭೀತಿಯನ್ನುಂಟು ಮಾಡಲಿದೆ. ಯಾಕೆಂದರೆ ಇದು ಅಮೆರಿಕದ ಎಎಚ್-64-ಡಿ ಅಪಾಚಿ ಹೆಲಿಕಾಪ್ಟರ್ ಗಿಂತಲೂ ವಿನಾಶಕಾರಿ ಎನಿಸಿಕೊಂಡಿದೆ.

ಅಂದ ಹಾಗೆ ಎಂಐ-28ಎನ್ ಎಂ ಯುದ್ಧ ಹೆಲಿಕಾಪ್ಟರ್ ಎಂಐ-28ಎನ್ ನ ಸುಧಾರಿತ ಆವತ್ತಿಯಾಗಿದ್ದು, ಐದನೇ ತಲೆಮಾರಿನ ಶಸ್ತ್ರಾಸ್ತ್ರ ಸಜ್ಜಿತ ತಂತ್ರಗಾರಿಕೆಗಳನ್ನು ಒಳಗೊಂಡಿರಲಿದೆ.

360 ಡಿಗ್ರಿ ರಾಡಾರ್ ಮತ್ತು ಸುಧಾರಿತ ಶಸ್ತ್ರಾಸ್ತ್ರಗಳ ಮಾರ್ಗದರ್ಶನ ವ್ಯವಸ್ಥೆಯನ್ನು ಎಂಐ-28ಎನ್ ಎಂ ಯುದ್ಧ ಹೆಲಿಕಾಪ್ಟರ್ ಒಳಗೊಂಡಿರಲಿದೆ.

ಸುಧಾರಿತ ಶಸ್ತ್ರಾಸ್ತ್ರ ಮಾರ್ಗದರ್ಶನ ವ್ಯವಸ್ಥೆಯ ಮೂಲಕ ಶಿಪ್ರ ಗತಿಯಲ್ಲಿ ಗುರಿಯನ್ನಿಡಲು ನೆರವಾಗಲಿದೆ.

ಇತ್ತೀಚೆಗಷ್ಟೇ ರಷ್ಯಾ ಅತಿ ನೂತನ ಸ್ಯಾಟನ್-2 ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಯ ರೋಚಕ ಚಿತ್ರ ಹಾಗೂ ವಿವರಗಳನ್ನು ಬಹಿರಂಗಪಡಿಸಿತ್ತು. ಇದು ಎರಡನೇ ಮಹಾಯುದ್ಧದ ಕೊನೆಯಲ್ಲಿ ಅಮೆರಿಕ ಜಪಾನ್ ವಿರುದ್ಧ ನಡೆಸಿದ ಹೀರೋಷಿಮಾ ಮತ್ತು ನಾಗಸಾಕಿ ಅಣ್ವಸ್ತ್ರ ದಾಳಿಗಿಂತಲೂ 2,000 ಪಟ್ಟು ಹೆಚ್ಚು ಬಲಶಾಲಿಯಾಗಿದ್ದು, ಇಡೀ ಜಗತ್ತನ್ನೇ ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿದೆ.

ಇವನ್ನೂ ಓದಿ
ಹಿರೋಷಿಮಾಗಿಂತಲೂ 2000 ಪಟ್ಟು ಹೆಚ್ಚು ವಿನಾಶಕಾರಿ ಬಾಂಬ್; ಕ್ಷಣ ಮಾತ್ರದಲ್ಲಿ ಲಂಡನ್ ನಾಮಾವಶೇಷ


Click it and Unblock the Notifications








