ಕೋಟ್ಯಂತರ ಅಭಿಮಾನಿಗಳಿರುವ ಸಚಿನ್ ಯಾರ ಅಭಿಮಾನಿ ಗೊತ್ತೇ?
ಕ್ರಿಕೆಟ್‌ನ ಜೀವಂತ ದಿಗ್ಗಜ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೇವಲ ಭಾರತ ಮಾತ್ರವಲ್ಲದೆ ವಿಶ್ವದ್ಯಂತ ಕೋಟ್ಯಂತರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ. ಜೀವನದಲ್ಲಿ ಎಂದಾದರೂ ಒಂದು ದಿನ ಸಚಿನ್‌ರನ್ನು ಕಣ್ಣಾರೆ ನೋಡಬೇಕೆಂಬ ಬಯಕೆ ಹಲವರದ್ದಾಗಿದೆ.
Also Read: ಮಹೇಂದ್ರ ಸಿಂಗ್ ಧೋನಿ ತೆರಿಗೆ ವಂಚನೆ ?
ಹಾಗಿರಬೇಕೆಂದರೆ ಸಚಿನ್ ತೆಂಡೂಲ್ಕರ್ ಯಾರ ಅಭಿಮಾನಿಯಾಗಿರಬಹುದು ನಿಮಗಿದು ಗೊತ್ತೇ? ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ಬೌಲರ್ ಗಳನ್ನು ಧೂಳೀಪಟ ಮಾಡಿರುವ ಸಚಿನ್ ಇಷ್ಟಾರ್ಥ ವಿಷಯವನ್ನು ಇಲ್ಲಿ ಬಹಿರಂಗ ಮಾಡಲಿದ್ದೇವೆ.

ಹೌದು, ಕ್ರಿಕೆಟ್ ಹೊರತಾಗಿ ಆಟೋಮೊಬೈಲ್ ಮೇಲೂ ಅತಿ ಹೆಚ್ಚು ಕ್ರೇಜ್ ಹೊಂದಿರುವ ಸಚಿನ್ ತೆಂಡೂಲ್ಕರ್ ಜರ್ಮನಿಯ ಐಷಾರಾಮಿ ಬಿಎಂಡಬ್ಲ್ಯು ಸಂಸ್ಥೆಯ ಕಟ್ಟಾ ಅಭಿಮಾನಿಯಾಗಿದ್ದಾರೆ. ಅಷ್ಟೇ ಯಾಕೆ ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಜವಾಬ್ದಾರಿಯನ್ನು ಲಿಟ್ಲ್ ಮಾಸ್ಟರ್ ನಿರ್ವಹಿಸುತ್ತಿದ್ದಾರೆ.

ಬಿಎಂಡಬ್ಲ್ಯು 7 ಸಿರೀಸ್
ಭಾರತದಲ್ಲಿ ಎರಡು ಕೋಟಿ ರುಪಾಯಿಗಳಷ್ಟು ದುಬಾರಿ ಎನಿಸುತ್ತಿರುವ ಬಿಎಂಡಬ್ಲ್ಯು 7 ಸಿರೀಸ್ 769 ಎಲ್‌ಐ ಐಷಾರಾಮಿ ಸೆಡಾನ್ ಕಾರನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಇದರಲ್ಲಿರುವ 6.0 ಲೀಟರ್ ವಿ12 ಎಂಜಿನ್ 750 ಎನ್ ಎಂ ತಿರುಗುಬಲದಲ್ಲಿ 544 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಸಚಿನ್ ವೈಯಕ್ತಿಕ ಬಯಕೆಗಳಿಗೆ ಅನುಸಾರವಾಗಿ ಇದನ್ನು ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿದೆ.

ಬಿಎಂಡಬ್ಲ್ಯು ಎಕ್ಸ್5ಎಂ
ಬಿಎಂಡಬ್ಲ್ಯು ಶಕ್ತಿಶಾಲಿ ಎಂ ವಿಭಾಗದ ಕ್ರೀಡಾ ಬಳಕೆಯ ಕಾರುಗಳನ್ನು ಭಾರತದಲ್ಲಿ ಕೆಲವೇ ಕೆಲವು ಗಣ್ಯ ವ್ಯಕ್ತಿಗಳು ಹೊಂದಿರುತ್ತಾರೆ. ಅವರಲ್ಲಿ ಓರ್ವರು ಸಚಿನ್ ಆಗಿದ್ದು, ಒಂದು ವರೆ ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಎಕ್ಸ್5ಎಂ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಆಳವಡಿಸಲಾಗಿರುವ 3.0 ಲೀಟರ್ 6 ಸಿಲಿಂಡರ್ ಟರ್ಬೊ ಚಾರ್ಜ್ಡ್ ಎಂಜಿನ್ 740 ಎನ್ ಎಂ ತಿರುಗುಬಲದಲ್ಲಿ 381 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಕೇವಲ 5.3 ಸೆಕಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ
ಕ್ರಿಕೆಟ್ ಬಳಿಕದ ಬಿಡುವಿಲ್ಲದ ನಿವೃತ್ತಿ ಜೀವನ ನಡೆಸುತ್ತಿರುವ ಸಚಿನ್ ತೆಂಡೂಲ್ಕರ್, ಬಿಎಂಡಬ್ಲ್ಯು ಅತಿ ವಿಶಿಷ್ಟ ಫ್ರಾಜನ್ ಸಿಲ್ವರ್ ಬಣ್ಣದ ಎಂ6 ಗ್ರ್ಯಾನ್ ಕೂಪೆ ಕಾರನ್ನು ಹೊಂದಿರುತ್ತಾರೆ. ಇದರಲ್ಲಿರುವ ಶಕ್ತಿಶಾಲಿ ವಿ8 ಎಂಜಿನ್ 680 ಎನ್ ಎಂ ತಿರುಗುಬಲದಲ್ಲಿ 560 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ದೇಶದಲ್ಲಿ 1.7 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಬಿಎಂಡಬ್ಲ್ಯು ಎಂ5
ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಪ್ರೀತಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರು '30 ಜಾಹ್ರೆ ಎಂ5' ವಿಶೇಷ ಆವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಎಂ5 ಶ್ರೇಣಿಯ 30 ವರ್ಷಾಚರಣೆಯನ್ನು ಆಚರಿಸಿಕೊಳ್ಳಲು ಸೀಮಿತ 300ರಷ್ಟು ವಿಶೇಷ ಆವೃತ್ತಿಯನ್ನು ನಿರ್ಮಿಸಲಾಗಿತ್ತು. ಭಾರತದಲ್ಲಿ ಈ ಕಾರನ್ನು ಹೊಂದಿರುವ ಏಕ ಮಾತ್ರ ವ್ಯಕ್ತಿ ಸಚಿನ್ ಅವರಾಗಿದ್ದಾರೆ. ಇದರ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 3.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಬಿಎಂಡಬ್ಲ್ಯು ಐ8
ಪ್ರಶಸ್ತಿ ವಿಜೇತ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಸಚಿನ್ ತೆಂಡೂಲ್ಕರ್ ಸಾನಿಥ್ಯದಲ್ಲಿ ಭಾರತ ಪ್ರವೇಶ ಪಡೆದಿತ್ತು ಎಂಬುದನ್ನು ನಾವು ಯಾರು ಮರೆಯಬಾರದು. ಇದು ದೇಶದಲ್ಲಿರುವ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಇದು 1.5 ಲೀಟರ್ 3 ಸಿಲಿಂಡರ್ ಜೊತೆಗೆ ಎಲೆಕ್ಟ್ರಿಕ್ ಮೋಟಾರನ್ನು ಪಡೆದಿದ್ದು, 570 ಎನ್ ಎಂ ತಿರುಗುಬಲದಲ್ಲಿ 357 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ದೇಶದಲ್ಲಿ 2.3 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ನಿಸ್ಸಾನ್ ಜಿಟಿಆರ್
ಬಿಎಂಡಬ್ಲ್ಯು ಹೊರತಾಗಿ ಸಚಿನ್ ತೆಂಡೂಲ್ಕರ್ ಗ್ಯಾರೇಜ್ ನಲ್ಲಿ ಇತರ ಹಲವಾರು ಐಕಾನಿಕ್ ಕಾರುಗಳು ನಿಮಗೆ ಕಾಣಸಿಗುವುದು. ಅವುಗಳೆನ್ನೆಲ್ಲ ಇಲ್ಲಿ ಪಟ್ಟಿ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಕೆಲವು ಐಕಾನಿಕ್ ಕಾರುಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ. ಇವುಗಳಲ್ಲಿ ಮೊದಲ ಸ್ಥಾನ ನಿಸ್ಸಾನ್ ಜಿಟಿಆರ್ ಗೆ ಸಲ್ಲುತ್ತದೆ. ಇದರಲ್ಲಿರುವ ವಿ6 ಟ್ವಿನ್ ಟರ್ಬೊ ಎಂಜಿನ್ ಬರೋಬ್ಬರಿ 545 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, 2.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಪ್ರಸ್ತುತ ಕಾರು ಇನ್ನಷ್ಟೇ ಭಾರತ ಪ್ರವೇಶವಾಗಬೇಕಿದೆ.

ಫೆರಾರಿ 360 ಮೊಡೆನಾ
ಫೆರಾರಿ 360 ಎಂ ಎಂಬುದಾಗಿಯೂ ಅರಿಯಲ್ಪಡುವ ಪ್ರಸ್ತುತ ಐಕಾನಿಕ್ ಕಾರನ್ನು ಸ್ವತ: ರೇಸ್ ದಿಗ್ಗಜ ಮೈಕಲ್ ಶುಮೇಕರ್ ಅವರು ಸಚಿನ್ ಗೆ ನೀಡಿದ್ದರು. ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕಾರನ್ನು ಬಳಿಕ ಸಚಿನ್ ಮಾರಾಟ ಮಾಡಿದ್ದರು.

ಮರ್ಸಿಡಿಸ್ ಬೆಂಝ್ ಸಿ36 ಎಎಂಜಿ
ಸಚಿನ್ ಹೊಂದಿರುವ ಹಳೆಯ ಕಾರುಗಳಲ್ಲಿ ಮರ್ಸಿಡಿಸ್ ಬೆಂಝ್ ಸಿ36 ಎಎಂಜಿ ಒಂದಾಗಿತ್ತು. ಆದರೆ ಈಗ ಸಚಿನ್ ಬಳಿಯಲ್ಲಿಲ್ಲ. ಇದರ 3.6 ಲೀಟರ್ 6 ಸಿಲಿಂಡರ್ ಎಂಜಿನ್ 280 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಬಿಎಂಡಬ್ಲ್ಯು ಸಚಿನ್ ಎಡಿಷನ್
ಸ್ವತ: ತಮ್ಮ ದಿವ್ಯ ಹಸ್ತಗಳಿಂದ ಬಿಎಂಡಬ್ಲ್ಯು 530ಡಿ ವಿಶೇಷ ಆವೃತ್ತಿಯನ್ನು ನಿರ್ಮಿಸಲು ಸಚಿನ್ ತೆಂಡೂಲ್ಕರ್ ನೆರವಾಗಿದ್ದರು. ಈ ಮೂಲಕ ಚೆನ್ನೈನ ಘಟಕದಲ್ಲಿ ಶೇಕಡಾ 50ರಷ್ಟು ಸ್ಥಳೀಯವಾಗಿ ಕಾರು ಜೋಡಣೆ ಮಾಡುವ ತನ್ನ ಬದ್ಧತೆಯನ್ನು ಬಿಎಂಡಬ್ಲ್ಯು ಪ್ರದರ್ಶಿಸಿತ್ತು. ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ಸಚಿನ್ "ಇದು ನಿಜಕ್ಕೂ ವಿಶಿಷ್ಟ ಹಾಗೂ ಅವಿಸ್ಮರಣೀಯ" ಎಂದಿದ್ದಾರೆ.

ಭಾರತೀಯ ಕ್ರಿಕೆಟರುಗಳ ಅದೃಷ್ಟದ ಕಾರು ಕಲೆಕ್ಷನ್!
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾರು ಕಲೆಕ್ಷನ್

Click it and Unblock the Notifications








