ಐಷಾರಾಮಿ ಲಂಬೋರ್ಗಿನಿಯಲ್ಲಿ ಕಾಣಿಸಿಕೊಂಡ 'ಕ್ರಿಕೆಟ್ ದೇವರು'.. ಈ ಕಾರಿನ ಬೆಲೆ ಎಷ್ಟು ಗೊತ್ತಾ?
ಜಾಗತಿಕ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಒಬ್ಬರಾಗಿದ್ದಾರೆ. ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕ್ರಿಕೆಟ್ ನಂತೆಯೇ ಅವರಿಗೆ ಕಾರುಗಳ ಮೇಲೆಯೂ ವಿಶೇಷ ಪ್ರೀತಿಯಿದೆ.
ಸೂಪರ್‌ಕಾರ್ಸ್ ಕ್ಲಬ್ ಇಂಡಿಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅವರು ಐಷಾರಾಮಿ ಲಂಬೋರ್ಗಿನಿ ಉರಸ್ ಎಸ್ (Lamborghini Urus S) ಕಾರಿನಲ್ಲಿ ಪ್ರಯಾಣಿಸುವಾಗ ಕಾಣಿಸಿಕೊಂಡಿದ್ದಾರೆ. ಅವರೇ ಎಸ್‌ಯುವಿ ಆಸನದಲ್ಲಿ ಕುಳಿತುಕೊಂಡಿರುವುದನ್ನು ಸಹ ಚಿತ್ರದಲ್ಲಿ ನೋಡಬಹುದು. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು, ರೂ.4.18 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ.

ಈ ಲಂಬೋರ್ಗಿನಿ ಉರಸ್ ಎಸ್ ಎಸ್‌ಯುವಿ ವಿನ್ಯಾಸ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 5 ಮಂದಿ ಆದರಾಮದಾಯಕವಾಗಿ ಪ್ರಯಾಣಿಯಬಹುದು. ಯೆಲ್ಲೋ, ಗ್ರೀನ್, ಬಿಯಾಂಕೊ ಮೊನೊಸೆರಸ್, ಬ್ಲೂ ಕೇಲಮ್, ರೊಸ್ಸೊ ಮಾರ್ಸ್, ಒರಾಗ್ನೆ, ಬ್ಲೂ ಸೆಫಿಯಸ್, ಬಿಯಾಂಕೊ ಇಕಾರ್ಸ್, ನೀರೋ ಹೆಲೆನ್ ಸೇರಿದಂತೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಲಂಬೋರ್ಗಿನಿ ಉರಸ್ ಎಸ್ ಕಾರು 3999 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 657.10 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 850 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡಿದೆ.

ಈ ಕಾರು ಬೆಲೆಗೆ ತಕ್ಕಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ಅಡ್ಜಸ್ಟಬಲ್ ಎಕ್ಸ್‌ಟೀರಿಯರ್ ರೇರ್ ವ್ಯೂ ಮಿರರ್, ಟಚ್ ಸ್ಕ್ರೀನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್, ಫ್ರಂಟ್ ಫಾಗ್ ಲೈಟ್ಸ್, ರೇರ್ ಪವರ್ ವಿಂಡೋಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಸಚಿನ್ ತೆಂಡೂಲ್ಕರ್ ಅವರ ಗ್ಯಾರೇಜ್‌ನಲ್ಲಿ ಲಂಬೋರ್ಗಿನಿ ಉರಸ್ ಎಸ್ ಮಾತ್ರವಲ್ಲದೆ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಕೂಡ ಇವೆ. ಅವರು ಪೋರ್ಷೆ 911 ಟರ್ಬೊ ಎಸ್ ಕಾರಿನ ಮಾಲೀಕರೂ ಆಗಿದ್ದು, ರೂ.4.13 ಕೋಟಿ ಆನ್-ರೋಡ್ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿರುವ ಈ ಕಾರು, 9 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಗಂಟೆಗೆ 330 ಕಿ.ಮೀ ಗರಿಷ್ಠ ವೇಗವನ್ನು ಪಡೆಯುತ್ತದೆ.
ವೋಲ್ವೋ ಎಸ್80 ಸೆಡಾನ್ ಕೂಡ ಸಚಿನ್ ಅವರ ಗ್ಯಾರೇಜ್‌ನಲ್ಲಿದ್ದು, ಪ್ರಸ್ತುತ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದು ರೂ.48.56 ರಿಂದ 52.40 ಲಕ್ಷ ಬೆಲೆಯನ್ನು ಹೊಂದಿತ್ತು. ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದ ಈ ಕಾರು, 13.1 ರಿಂದ 16.6 ಕೆಎಂಪಿಎಲ್ ಮೈಲೇಜ್ ನೀಡುತ್ತಿತ್ತು. ಇವುಗಳಲ್ಲದೆ, ಸಚಿನ್ ಅವರು, ಫೆರಾರಿ 360 ಮೊಡೆನಾ, ಬಿಎಂಡಬ್ಲ್ಯೂ ಎಂ5 30 ಜಹ್ರೆ, ಬಿಎಂಡಬ್ಲ್ಯೂ 7-ಸೀರಿಯಸ್ 760 ಎಲ್ಐ ಕಾರುಗಳ ಒಡೆಯರೂ ಆಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications