ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜೊತೆಗೆ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು, ಫೆರಾರಿ, ಆಡಿ, ನಿಸ್ಸಾನ್ ಜಿಟಿ-ಆರ್ ನಂತಹ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಹಲವಾರು ಕಾರುಗಳಿವೆ.

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಸಚಿನ್ ತೆಂಡೂಲ್ಕರ್ ಈಗ ಹಲವಾರು ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಆದರೆ ಅವರ ಮೊದಲ ಕಾರು ಮಾರುತಿ 800 ಆಗಿತ್ತು. ಅವರು ತಮ್ಮ ಮೊದಲ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಮಾರುತಿ 800 ಕಾರನ್ನು ಖರೀದಿಸಿದರು. ಆ ಕಾರನ್ನು ಸಚಿನ್ ರವರು ಈಗ ಹೊಂದಿಲ್ಲವಾದರೂ ತಮ್ಮ ಮೊದಲ ಕಾರಿನ ನೆನಪು ಅವರನ್ನು ಕಾಡುತ್ತಿದೆ.

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಮುಡಿಟ್ ದಾನಿಯವರ ಜೊತೆಗಿನ ಇನ್ ದಿ ಸ್ಪೋರ್ಟ್‌ಲೈಟ್ ಶೋನಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಕಾರು ತಮ್ಮೊಂದಿಗೆ ಇಲ್ಲವಾದರೂ ಅದರ ನೆನಪು ತಮ್ಮನ್ನು ಕಾಡುತ್ತಿದೆ. ಈ ಕಾರು ಹೊಂದಿರುವವರು ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಕಾರನ್ನು ಮತ್ತೆ ಪಡೆಯಲು ಬಯಸಿದ್ದಾರೆ. ಬಾಲ್ಯದಿಂದಲೂ ತಮಗೆ ಕಾರುಗಳ ಬಗ್ಗೆ ಆಸಕ್ತಿ ಇತ್ತು. ಬಾಂದ್ರಾದ ತಮ್ಮ ಮನೆಯ ಬಾಲ್ಕನಿಯಲ್ಲಿ ಸಹೋದರನ ಜೊತೆ ನಿಂತು ಕಾರುಗಳನ್ನು ನೋಡುವಾಗ ಅವರಿಗೆ ಈ ಆಸಕ್ತಿ ಉಂಟಾಗಿತ್ತು. ಈಗ ಅವರು ಅನೇಕ ಕಾರುಗಳನ್ನು ಹೊಂದಿದ್ದಾರೆ.

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ತಮ್ಮ ಮನೆಯ ಹತ್ತಿರ ದೊಡ್ಡ ಓಪನ್ ಡ್ರೈವ್-ಇನ್ ಮೂವಿ ಹಾಲ್ ಇತ್ತು. ಅಲ್ಲಿ ಜನರು ತಮ್ಮ ಕಾರುಗಳನ್ನು ನಿಲ್ಲಿಸಿ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರು. ನಾನು ಹಾಗೂ ನನ್ನ ಸಹೋದರ ಬಾಲ್ಕನಿಯಲ್ಲಿ ನಿಂತು ಆ ಕಾರುಗಳನ್ನು ಗಂಟೆಗಟ್ಟಲೆ ನೋಡುತ್ತಿದ್ದೆವು ಎಂದು ಸಚಿನ್ ಹೇಳಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ ಸಚಿನ್ ಆ ಸಮಯದಲ್ಲಿ ಫಿಯೆಟ್, ಕಾಂಟೆಸ್ಸಾ, ಅಂಬಾಸಿಡರ್ ಕಾರುಗಳು ಮಾತ್ರ ಇದ್ದವು. ಆ ಕಾರುಗಳನ್ನು ರಸ್ತೆಯಲ್ಲಿ ನೋಡಿದಾಗ ಖುಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಕಾರಣ ಅವರ ಗ್ಯಾರೇಜ್‌ನಲ್ಲಿ ಹೆಚ್ಚಿನ ಸಂಖ್ಯೆಯ ಬಿಎಂಡಬ್ಲ್ಯು ಕಾರುಗಳಿವೆ. ಸಚಿನ್ ಬಿಎಂಡಬ್ಲ್ಯು 750 ಲಿ ಎಂ, ಬಿಎಂಡಬ್ಲ್ಯು ಐ 8, ಬಿಎಂಡಬ್ಲ್ಯು 7 ಸರಣಿ, ನಿಸ್ಸಾನ್ ಜಿಟಿ-ಆರ್, ಮರ್ಸಿಡಿಸ್ ಬೆಂಝ್ ಎಸ್ಎಲ್ 600 ಸೇರಿದಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಸಚಿನ್ ತೆಂಡೂಲ್ಕರ್ ಫೆರಾರಿ ಮೊಡೆನಾ ಕಾರನ್ನು ಸಹ ಹೊಂದಿದ್ದರು. ಸಚಿನ್ ಈ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ಆದರೆ ಈ ಕಾರಿನ ಕುರಿತು ವಿವಾದಗಳು ಉಂಟಾದ ಕಾರಣ ಕಾರನ್ನು ಮಾರಾಟ ಮಾಡಿದರು.

ಕ್ರಿಕೆಟ್ ದೇವರನ್ನು ಕಾಡುತ್ತಿದೆ ಮೊದಲ ಕಾರಿನ ನೆನಪು

ಸಚಿನ್ ತೆಂಡೂಲ್ಕರ್ ಕಾರುಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುವುದಾಗಿ ತಿಳಿಸಿದರು. ಈಗಲೂ ಸಹ ತಮಗೆ ಅನೇಕ ಅಭಿಮಾನಿಗಳಿದ್ದಾರೆ ಎಂದು ಸಚಿನ್ ಹೇಳಿದರು. ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೇ ಮಹೇಂದ್ರ ಸಿಂಗ್ ಧೋನಿ ಸಹ ಕಾರು ಹಾಗೂ ಬೈಕುಗಳ ಬಗ್ಗೆ ಕ್ರೇಜ್ ಹೊಂದಿದ್ದು, ಇತ್ತೀಚಿಗಷ್ಟೇ ವಿಂಟೇಜ್ ಕಾರನ್ನು ಖರೀದಿಸಿದ್ದಾರೆ.

Most Read Articles

Kannada
English summary
Sachin Tendulkar wants to buy back his first car. Read in Kannada.
Story first published: Thursday, August 20, 2020, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X