ಬರೋಬ್ಬರು 2.5 ಕೋಟಿ ರೂ. ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡ ಸದ್ಗುರು

ಸದ್ಗುರು ಎಂದೇ ಖ್ಯಾತಿ ಪಡೆದಿರುವ ಜಗ್ಗಿ ವಾಸುದೇವ್ ಅವರಿಗೆ ಕಾರುಗಳು, ಬೈಕ್ ಗಳು ಅಂದ್ರೆ ಬಲು ಇಷ್ಟ. ಈ ಹಿಂದೆಯೂ ಅವರು ಬೈಕ್ ರೈಡ್‌ಗಳನ್ನು ಹೊರಟಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಂದು ದುಬಾರಿ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಗುರು ಅಥವಾ ಜಗ್ಗಿ ವಾಸುದೇವ್ ಅವರು ಆಧ್ಯಾತ್ಮಿಕತೆ ಮತ್ತು ವಿವಾದ ಎರಡಕ್ಕೂ ಹೆಸರುವಾಸಿಯಾಗಿದ್ದಾರೆ. ಅವರೊಬ್ಬ ದೊಡ್ಡ ಕಾರು ಪ್ರೇಮಿ. ಇದು ನಿಮ್ಮಲ್ಲಿ ಕೆಲವರಿಗೆ ಹೊಸದಿರಬಹುದು. ಜಗ್ಗಿ ವಾಸುದೇವ್‌ ಎಂತಹ ಕಾರು ಪ್ರೇಮಿ ಎಂಬುದು ನೀವು ನಮ್ಮ ನಿತ್ಯದ ಓದುಗರಾಗಿದ್ದರೆ ನಿಮಗೆ ಗೊತ್ತಿರಲೇಬೇಕು. ಈ ಹಿಂದೆ ಇವರ ಹಲವು ಕಾರು, ಬೈಕ್ ಕುರಿತ ಸುದ್ದಿಗಳನ್ನು ಮಾಡಿದ್ದೇವೆ.

sadhguru-driving-land-rover-defender-2-5-crore-worth-car

ಅವರು ವಿವಾದಕ್ಕೆ ಗುರಿಯಾಗುವುದು ಕೂಡ ಇದೇ ಐಷಾರಾಮಿ ಕಾರುಗಳು ಮತ್ತು ಐಷಾರಾಮಿ ಬೈಕ್‌ಗಳಿಂದ, ಇದೀಗ ಮತ್ತೊಮ್ಮೆ ದುಬಾರಿ ಕಾರಿನಲ್ಲಿ ಅವರು ಕಾಣಿಸಿಕೊಂಡಿರುವ ಅವರ ವಿಡಿಯೋ ವೈರಲ್ ಆಗಿದೆ. ಅವರು ಪ್ರಸಿದ್ಧ ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾದ ಲ್ಯಾಂಡ್ ರೋವರ್ ಡಿಫೆಂಡರ್ 110 V8 ನಲ್ಲಿ ಕಾಣಿಸಿಕೊಂಡಿದ್ದು ಇದರ ಬೆಲೆಯು ಬರೋಬ್ಬರಿ 2.5 ಕೋಟಿ ರೂ.

ಸದ್ಗುರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅವರು ಹೊಚ್ಚಹೊಸ ಲ್ಯಾಂಡ್ ರೋವರ್ ಡಿಫೆಂಡರ್ 110 ಒಳಗೆ ಕಾಣಿಸಿಕೊಂಡಿದ್ದಾರೆ. ಕಾರ್ಪಾಥಿಯನ್ ಗ್ರೇ ಬಣ್ಣದ ಎಸ್‌ಯುವಿಯನ್ನು ಅವರೇ ಚಾಲನೆ ಮಾಡುತ್ತಿದ್ದು, ಒಬ್ಬಂಟಿಯಾಗಿರುವಂತೆ ತೋರುತ್ತಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ISHA ಫೌಂಡೇಶನ್‌ನಲ್ಲಿ ಅವರು ಚಾಲನೆ ಮಾಡುತ್ತಿರುವುದು ತಿಳಿದುಬಂದಿದೆ.

sadhguru-driving-land-rover-defender-2-5-crore-worth-car

ಮಕ್ಕಳ ಗುಂಪಿನ ಬಳಿ ಸದ್ಗುರು ಕಾರು ನಿಲ್ಲುವುದನ್ನು ವೀಡಿಯೊದಲ್ಲಿ ನೋಡಬಹುದು. ಮಕ್ಕಳ ಗುಂಪಿನಲ್ಲಿ ಒಬ್ಬ ಕವಿತೆಯನ್ನು ಓದುತ್ತಿದ್ದರೆ ಸದ್ಗುರು ಗಮನವಿಟ್ಟು ಕೇಳುತ್ತಾರೆ. ಬಳಿಕ ಕಾರಿನಲ್ಲಿ ಹೊರಟುಬಿಡುತ್ತಾರೆ. ಈ ವಿಡಿಯೋದಲ್ಲಿ ಕೇವಲ ಇದು ಮಾತ್ರ ಇದೆ. ಆದ್ರೆ ಈಗ ವೈರಲ್ ಆಗಿದ್ದು ಅವರ ಕಾರು, ಏಕೆಂದರೆ ಇದು ಬರೋಬ್ಬರಿ 2.5 ಕೋಟಿ ರೂ.

ನೀವು ತಿಳಿಯಲೇಬೇಕು ಈ ಐಷಾರಾಮಿ SUV ಬಗ್ಗೆ: ಲ್ಯಾಂಡ್ ರೋವರ್ ಡಿಫೆಂಡರ್ ಪ್ರೀಮಿಯಂ ಐಷಾರಾಮಿ SUV ಆಗಿದ್ದು, ಅದರ ಆಫ್-ರೋಡ್ ಪವರ್ ಮತ್ತು ಐಷಾರಾಮಿ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಇದನ್ನು 3-ಬಾಗಿಲಿನ ಆವೃತ್ತಿ (ಡಿಫೆಂಡರ್ 90) ಮತ್ತು 5-ಬಾಗಿಲಿನ ಆವೃತ್ತಿ (ಡಿಫೆಂಡರ್ 110) ಎಂಬ ಎರಡು ಬಾಡಿ ಡಿಸೈನ್‌ನಲ್ಲಿ ನೀಡಲಾಗುತ್ತದೆ.

sadhguru-driving-land-rover-defender-2-5-crore-worth-car
ಸದ್ಗುರುಗಳು ಓಡಿಸುತ್ತಿರುವ ರೂಪಾಂತರವು ಬೃಹತ್ 5.0-ಲೀಟರ್ ಸೂಪರ್ಚಾರ್ಜ್ಡ್ V8 ಎಂಜಿನ್ ಅನ್ನು ಹೊಂದಿದ್ದು, ಇದು 525 PS ಗರಿಷ್ಠ ಪವರ್ ಮತ್ತು 625 Nm ನ ಗರಿಷ್ಠ ಟಾರ್ಕ್ ಹೊರಹಾಕುತ್ತದೆ. ಇದು ಗಂಟೆಗೆ 240 ವೇಗವನ್ನು ತಲುಪಬಲ್ಲದು. ಕೇವಲ 5.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಸಾಧಿಸಬಲ್ಲದು. 3.5 ಟನ್‌ಗಳಷ್ಟು ಎಳೆಯುವ ಸಾಮರ್ಥ್ಯದೊಂದಿಗೆ, ಇದು 8-ಸ್ಪೀಡ್ ಆಟೋಮ್ಯಾಟಕ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

ಹಿಂದೆ ಮರ್ಸಿಡಿಸ್ ಬೆಂಝ್: ಈ ಹಿಂದೆ ಸದ್ಗುರು ಕನ್ಯಾಕುಮಾರಿಯಿಂದ ಹರಿದ್ವಾರಕ್ಕೆ ರಸ್ತೆ ಪ್ರಯಾಣ ಮೂಲಕ ತೆರಳಲು ಮರ್ಸಿಡಿಸ್-ಎಎಂಜಿ ಜಿ63 ಅನ್ನು ಓಡಿಸಿದ್ದರು. ಸದ್ಗುರು ಕೇವಲ ಕಾರು ಮಾತ್ರವಲ್ಲ, ಅವರಿಗೆ ಬೈಕ್ ರೈಡ್ ಸಖತ್ ಇಷ್ಟ. ತಮ್ಮ ಚಿಕ್ಕಂದಿನಿಂದಲೂ ಸಮರ್ಪಿತ ಮೋಟಾರ್‌ಸೈಕಲ್ ಉತ್ಸಾಹಿಯಾಗಿದ್ದಾರೆ. ಈಗಾಗಲೇ ಅವರ ಬೈಕ್ ರೈಡಿಂಗ್ ಬಗ್ಗೆ ಹಲವು ಸುದ್ದಿಗಳನ್ನು ಬಿತ್ತರಿಸಿದ್ದೇವೆ.

ಸಂದರ್ಶನವೊಂದರಲ್ಲಿ, ಅವರು ತಮ್ಮ ಕಾಲೇಜು ದಿನಗಳಲ್ಲಿ Yamaha RD 350 ಅನ್ನು ಹೊಂದಿದ್ದರು. ಅದರೊಂದಿಗೆ ಭಾರತದಾದ್ಯಂತ ಸವಾರಿ ಮಾಡಲು ಪ್ರಾರಂಭಿಸಿದ್ದನ್ನು ಬಹಿರಂಗಪಡಿಸಿದ್ದರು. ಅವರು ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್‌ನಲ್ಲಿ ಬಾಬಾ ರಾಮ್‌ದೇವ್ ಅವರೊಂದಿಗೆ ಸವಾರಿ ಮಾಡಿದ್ದರು. ಅವರು BMW R1200 GS ಮತ್ತು ಹಲವಾರು ಡರ್ಟ್ ಬೈಕ್‌ಗಳನ್ನು ಒಳಗೊಂಡಂತೆ ವಿವಿಧ ಬೈಕ್‌ಗಳನ್ನು ಓಡಿಸುತ್ತಿದ್ದಾರೆ, ಪ್ರಪಂಚದಾದ್ಯಂತದ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ.

More from DriveSpark

Article Published On: Tuesday, August 29, 2023, 11:22 [IST]
English summary
Sadhguru driving land rover defender 2 5 crore worth car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+