ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಸದ್ಗುರು ಜಗ್ಗಿ ವಾಸುದೇವ್ ಅವರು ಕೇವಲ ಆಧ್ಯಾತ್ಮಿಕ ಚಿಂತನೆಗೆ ಮಾತ್ರವಲ್ಲದೇ ಮೋಟಾರ್ ಸ್ಪೋರ್ಟ್ ಬಗ್ಗೆಯೂ ಸಾಕಷ್ಟು ಕ್ರೇಜ್ ಹೊಂದಿರುವುದು ಬಹುತೇಕರಿಗೆ ಗೊತ್ತಿಲ್ಲದ ವಿಚಾರ. ಆಧ್ಯಾತ್ಮದಲ್ಲಿ ಎಷ್ಟು ಆಸಕ್ತಿ ಹೊಂದಿದ್ದಾರೋ ಅಷ್ಟೇ ಮೋಟಾರ್ ಸ್ಪೋರ್ಟ್ ಬಗ್ಗೆ ಇರುವ ಅವರ ಕ್ರೇಜ್ ನೋಡಿದ್ರೆ ನಿಮಗೆ ಅಚ್ಚರಿಯಾಗದೇ ಇರಲಾರದು.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಹೌದು, ಜಗ್ಗಿ ವಾಸುದೇವ್ ಅವರು ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶಿಗಳಲ್ಲೂ ತಮ್ಮ ಆಧ್ಯಾತ್ಮಿಕ ಚಿಂತನೆಗಳಿಂದಾಗಿ ಜನಪ್ರಿಯತೆಯನ್ನು ಹೊಂದಿರುವುದಲ್ಲದೇ ಆಟೋ ಸ್ಪೋರ್ಟ್ ಬಗ್ಗೆ ಇರುವ ಅವರ ಆಸಕ್ತಿ ನಿಮ್ಮನ್ನು ಅಚ್ಚರಿಗೊಳಿಸುತ್ತೆ. ಮನಸ್ಸಿಗೆ ಶಾಂತತೆ ನೀಡುವ ಅವರ ಸಂದೇಶಗಳಂತೆ ಅವರ ಮೋಟಾರ್ ಸ್ಪೋರ್ಟ್ ಕ್ರೇಜ್ ಕೂಡಾ ಯುವಕರ ಮನಸ್ಸಿನಲ್ಲಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಯೋಗ ಮತ್ತು ಇತರ ಸಾಮಾಜಿಕ ಚಟುವಟಿಕೆಗಳನ್ನು ನೆಡೆಸಿಕೊಂಡು ಬರುತ್ತಿರುವ 'ಇಶಾ ಪ್ರತಿಷ್ಠಾನದ' ಸ್ಥಾಪಕರಾದ ಸದ್ಗುರು ಅವರು ನ್ಯೂಯಾರ್ಕ್ ಟೈಮ್ಸ್‌ನ ಜನಪ್ರಿಯ ಲೇಖಕ ಎಂಬ ಖ್ಯಾತಿಯನ್ನು ಸಹ ಪಡೆದುಕೊಂಡಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

'ಇಶಾ ಪ್ರತಿಷ್ಠಾನ' ಸೇವಾ ಸಂಸ್ಥೆಯ ಮೂಲಕ ಹಲವಾರು ಜಾಗೃತಿ ಅಭಿಯಾನ ಕೈಗೊಳ್ಳುತ್ತಿರುವ ಜಗ್ಗಿ ವಾಸುದೇವ್ ಅವರು ಆಧ್ಯಾತ್ಮಿಕ ಚಿಂತನೆಗಳ ಜೊತೆ ಜೊತೆಗೆ ಆಟೋಮೊಬೈಲ್ ಕ್ಷೇತ್ರದ ಬಗ್ಗೆಯು ಹೆಚ್ಚಿನ ಒಲವು ಹೊಂದಿದ್ದು, ಹಲವು ದುಬಾರಿ ಬೈಕ್‌ಗಳು ಮತ್ತು ಕಾರುಗಳ ಸಂಗ್ರಹವೇ ಇವರ ಬಳಿಯಿದೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಕಳೆದ ಅಗಸ್ಟ್‌ನಲ್ಲಿ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ್ದ ಜಗ್ಗಿ ವಾಸುದೇವ್ ಅವರು ಇದೀಗ ಮತ್ತೊಂದು ದುಬಾರಿ ಬೆಲೆಯ ಡುಕಾಟಿ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಎನ್ನುವ ಅಡ್ವೆಂಚರ್ ಬೈಕ್ ಮಾದರಿಯನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

1,262ಸಿಸಿ ಎಲ್ ಟ್ವಿನ್ ಡಿವಿಟಿ ಟೆಸ್ಟಾಸ್ಟ್ರೆಟಾ ಎಂಜಿನ್ ಹೊಂದಿರುವ ಡುಕಾಟಿ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಬೈಕ್ ಮಾದರಿಯು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 158-ಬಿಎಚ್‌ಪಿ ಮತ್ತು 129.5-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಈ ಹಿಂದಿನ ಮಲ್ಟಿಸ್ಟ್ರಾಡಾ 1260 ಮತ್ತು 1260ಎಸ್ ಅಡ್ವೆಂಚರ್ ಬೈಕ್‍‍ಗಳ ಮಾದರಿಯಲ್ಲೇ ಈ ಬೈಕ್ ಸಹ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 229 ಕೆಜಿ ತೂಕದೊಂದಿಗೆ ತುಸು ಭಾರ ಎನ್ನಿಸಿದರೂ ಸಹ ಚಾಲನಾ ಶೈಲಿ ವಿಚಾರದಲ್ಲಿ ಉತ್ತಮವಾಗಿದೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 20.06 ಲಕ್ಷ ಬೆಲೆ ಹೊಂದಿರುವ ಈ ಬೈಕ್ ಮಾದರಿಯ ಆನ್ ರೋಡ್ ಬೆಲೆ ಲೆಕ್ಕ ಹಾಕಿದ್ದಲ್ಲಿ ಬರೋಬ್ಬರಿ ರೂ.23 ಲಕ್ಷಕ್ಕೆ ಮಾರಾಟವಾಗುತ್ತಿದೆ. ಹೀಗಿದ್ದರೂ ದುಬಾರಿ ಬೆಲೆಗಳಿಗೆ ತಲೆಕೆಡಿಸಿಕೊಳ್ಳದ ಜಗ್ಗಿವಾಸುದೇವ್ ಅವರು ಅಡ್ವೆಂಚರ್ ಚಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಡುಕಾಟಿ ಮಲ್ಟಿಸ್ಟ್ರಾಡಾ 1260 ಪೈಕ್ಸ್ ಪೀಕ್ ಅಲ್ಲದೇ ಈ ಹಿಂದೆ ಖರೀದಿ ಮಾಡಿದ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಕೂಡಾ ಆನ್ ರೋಡ್ ಪ್ರಕಾರ ರೂ. 12 ಲಕ್ಷ ಬೆಲೆ ಹೊಂದಿದ್ದು, ವಯಸ್ಸು 61 ದಾಟಿದರೂ ಸಹ ಕಾಲೇಜ್ ದಿನಗಳಲ್ಲಿ ಇದ್ದ ಮೋಟಾರ್ ಸ್ಪೋರ್ಟ್ ಕ್ರೇಜ್ ಈಗಲೂ ಇದೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಕಾಲೇಜು ದಿನಗಳಲ್ಲಿ ಜಾವಾ ಮತ್ತು ಬಿಎಸ್ಎ ಬೈಕ್‌ಗಳ ಮೇಲೆ ಹೆಚ್ಚಿನ ಒಲವು ಹೊಂದಿದ್ದ ಜಗ್ಗಿ ವಾಸುದೇವ್ ಅವರು ತದನಂತರ ಬುಲೆಟ್ ಮತ್ತು ಹಲವು ಕ್ಲಾಸಿಕ್ ಬೈಕ್‌ಗಳ ಸಂಗ್ರಹ ಹೊಂದಿದ್ದರು. ತದನಂತರ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲು ಬೈಕ್ ರೈಡಿಂಗ್ ಕ್ರೇಜ್ ಮಾತ್ರ ಹಾಗೆಯೇ ಇದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಮೈಸೂರಿನಲ್ಲೇ ಹುಟ್ಟಿ ಬೆಳೆದಿರುವ ಜಗ್ಗಿವಾಸುದೇವ್ ಅವರು ಇಶಾ ಪ್ರತಿಷ್ಠಾನ ಆರಂಭಿಸುವುದಕ್ಕೂ ಮುನ್ನ ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿದ್ದರು. ಆಗಾ ಮೈಸೂರಿನಿಂದ ಬೆಂಗಳೂರಿಗೆ ವಾರದಲ್ಲಿ ಎರಡು ಮೂರು ಬಾರಿ ಬೈಕಿನಲ್ಲೇ ಸಂಚರಿಸುತ್ತಿದ್ದ ಸದ್ಗುರು ಗಂಟೆಗೆ 100ರಿಂದ 120 ಕಿ.ಮಿ ವೇಗದಲ್ಲಿ ಬೈಕ್ ರೈಡಿಂಗ್ ಮಾಡುತ್ತಿದ್ದನ್ನು ಈಗಲೂ ಸಂದರ್ಶನಗಳಲ್ಲಿ ನೆನಪಿಸಿಕೊಳ್ಳುತ್ತಿರುತ್ತಾರೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಹೀಗಾಗಿ ಅಡ್ವೆಂಚರ್ ಬೈಕ್‌ಗಳ ಕುರಿತಾಗಿ ಆಗಾಗ ತಮ್ಮ ಕ್ರೇಜ್ ತೋರ್ಪಡಿಸುವ ಜಗ್ಗಿ ವಾಸುದೇವ್ ಅವರು, ಕಳೆದ ಕೆಲದಿನ ಹಿಂದೆ ಬಾಬಾ ರಾಮ್‌ದೇವ್ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬೈಕ್ ರೈಡಿಂಗ್ ಮಾಡಿದ್ದ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿತ್ತು.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಜಗ್ಗಿ ವಾಸುದೇವ್ ಅವರಿಗೆ ಕೇವಲ ಬೈಕ್ ರೈಡಿಂಗ್ ಆಸಕ್ತಿ ಮಾತ್ರವಲ್ಲದೇ ಸ್ಪೋರ್ಟ್ ಕಾರುಗಳ ಕ್ರೇಜ್ ಬಗ್ಗೆ ಕೇಳಿದ್ರೆ ಇವರು ಸದ್ಗುರು ಹೇಗಾದ್ರು ಅಂತಾ ಅನುಮಾನ ಮೂಡದೇ ಇರಲಾರದು.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಕಳೆದ ವರ್ಷ ಭಾರೀ ಚರ್ಚೆಗೆ ಕಾರಣವಾಗಿದ್ದ ಸೇವ್ ರಿವರ್ ಅಭಿಯಾನದ ಸಂದರ್ಭದಲ್ಲಿ ಜಗ್ಗಿ ವಾಸುದೇವ್ ಅವರು ಬರೋಬ್ಬರಿ 2. 50 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಎಎಂಜಿ ಜಿ63 ಐಷಾರಾಮಿ ಎಸ್‌ಯುವಿ ಕಾರನ್ನು ಖರೀದಿಸಿದ್ದರು.

MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಕೆಲವೇ ಉದ್ಯಮಿಗಳು ಮತ್ತು ಬಾಲಿವುಡ್ ನಟರು ಮಾತ್ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿ63ಎಎಂಜಿ ಹೊಂದಿದ್ದು, ಈ ಕಾರು 5.5-ಲೀಟರ್(5,500 ಸಿಸಿ) ಟ್ವಿನ್ ವಿ8 ಎಂಜಿನ್‌ನೊಂದಿಗೆ 563-ಬಿಎಚ್‌ಪಿ ಮತ್ತು 760-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಹಾಗೆಯೇ ಟ್ರ್ಯಾಕ್ ಪರ್ಫಾಮೆನ್ಸ್‌ನಲ್ಲೂ ಕಮಾಲ್ ಮಾಡಬಲ್ಲ ಜಗ್ಗಿ ವಾಸುದೇವ್ ಅವರು ಗಂಟೆಗೆ 250 ಕಿ.ಮಿ ವೇಗ ಕಾರು ಚಾಲನೆ ಮಾಡಿರುವ ದಾಖಲೆಗಳಿದ್ದು, ಒಟ್ಟಿನಲ್ಲಿ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಮೋಟಾರ್ ಸ್ಪೋರ್ಟ್ ಬಗೆಗಿನ ಅವರ ಆಸಕ್ತಿಯು ಒಂದು ರೀತಿ ವಿಚಿತ್ರ ಎನ್ನಬಹುದು.

ಸದ್ಗುರು ಜಗ್ಗಿ ವಾಸುದೇವ್ ಅವರ ಹೊಸ ಡುಕಾಟಿ ಬೈಕ್ ಬೆಲೆ ಎಷ್ಟು ಗೊತ್ತಾ?

ಅವರೇ ಹೇಳುವಂತೆ 'ನಿಮಗಿರುವುದು ಒಂದೇ ಜೀವನ, ಪ್ರತಿಕ್ಷಣವನ್ನೂ ಪ್ರೀತಿಯಿಂದ ಪ್ರೀತಿಸಿ' ಎಂಬ ವಾಕ್ಯವನ್ನು ತಾವೂ ಪಾಲಿಸುತ್ತಿರುವುದ್ದು, ಮನಸ್ಸಿದ್ದರೆ ಪ್ರತಿಯೊಂದು ಕಾರ್ಯವೂ ಸುಲಭವಾಗಲಿದೆ ಎಂಬುದನ್ನು ತಾವೇ ಸ್ವತಃ ಪ್ರಯೋಗ ಮಾಡಿ ತೋರಿಸುತ್ತಿದ್ದಾರೆ.

Most Read Articles

Kannada
English summary
Sadhguru Jaggi Vasudev Bought His Second Ducati: A Multistrada 1260 Pikes Peak Edition. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more