Prithviraj Sukumaran: ಬಹುಕೋಟಿಯ ಬಿಎಂಡಬ್ಲ್ಯೂ ಕಾರಿನಲ್ಲಿ ಕಾಣಿಸಿಕೊಂಡ 'ಸಲಾರ್' ನಟ.. ವಿಶೇಷತೆಗಳೇನು ಗೊತ್ತಾ?

ಟಾಲಿವುಡ್ ನಟ ಪ್ರಭಾಸ್ ಅಭಿನಯದ ಸಲಾರ್‌ ಪಾರ್ಟ್‌ 1-ಸೀಸ್‌ಫೈರ್‌ (Salaar: Part 1-Ceasefire) ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬಿಸುತ್ತಿದ್ದು, ಮೂರೇ ದಿನಕ್ಕೆ ರೂ.400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಕೂಡ ನಟಿಸಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದ್ದು, ಅವರ ಗ್ಯಾರೇಜ್‌ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ದೊಡ್ದ ಸಂಗ್ರಹವಿದೆ. ಇತ್ತೀಚೆಗೆ ನಟ ಪೃಥ್ವಿರಾಜ್, ಬಿಎಂಡಬ್ಲ್ಯೂ 7 ಸೀರಿಯಸ್ (BMW 7 - Series) ಪ್ರಯಾಣಿಸುತ್ತಿರುವ ವಿಡಿಯೋವನ್ನು ಅಜರ್ ಅಂದುಕ್ಕಾ ಎಂಬುವವರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Prithviraj Sukumaran: ಬಹುಕೋಟಿಯ ಬಿಎಂಡಬ್ಲ್ಯೂ ಕಾರಿನಲ್ಲಿ ಕಾಣಿಸಿಕೊಂಡ ಸಲಾರ್ ನಟ.. ವಿಶೇಷತೆಗಳೇನು ಗೊತ್ತಾ?

ಈ ವಿಡಿಯೋದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಅವರು, ಬಿಎಂಡಬ್ಲ್ಯೂ ಕಾರಿನಲ್ಲಿ ಮನೆಯೊಂದರ ಮುಂಭಾಗ ಇಳಿಯುತ್ತಿರುವ ದೃಶ್ಯಗಳನ್ನು ಸೆರೆಯಿಡಿಯಾಲಾಗಿದೆ. ಕಾರಿನ ಸಿ-ಪಿಲ್ಲರ್‌ನಲ್ಲಿ ವಿ12 ಬ್ಯಾಡ್ಜ್ ಇರುವುದನ್ನು ಗುರುತಿಸಬಹುದು. ವಿಶ್ವದಾದ್ಯಂತ ಈ ಬಿಎಂಡಬ್ಲ್ಯೂ 7 ಸೀರಿಯಸ್ ಸೆಡಾನ್ ಕ್ರಿಕೆಟ್ ತಾರೆಯರು, ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅನೇಕರನ್ನು ಸೆಳೆದಿದೆ.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ 7 ಸೀರಿಯಸ್ ಸೆಡಾನ್, ರೂ.1.78 ಕೋಟಿಯಿಂದ ರೂ.1.81 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಕಾರಿನ 3.0 - ಲೀಟರ್ 6 - ಸಿಲಿಂಡರ್ ಪೆಟ್ರೋಲ್ ಎಂಜಿನ್ 376 bhp ಗರಿಷ್ಠ ಪವರ್ ಮತ್ತು 520 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Prithviraj Sukumaran: ಬಹುಕೋಟಿಯ ಬಿಎಂಡಬ್ಲ್ಯೂ ಕಾರಿನಲ್ಲಿ ಕಾಣಿಸಿಕೊಂಡ ಸಲಾರ್ ನಟ.. ವಿಶೇಷತೆಗಳೇನು ಗೊತ್ತಾ?

ಮತ್ತೊಂದು 3.0 - ಲೀಟರ್ ಡೀಸೆಲ್ ಎಂಜಿನ್, 281 bhp ಪವರ್, 650 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 8 ಸ್ವೀಡ್ ಸ್ಟೆಪ್ಟ್ರಾನಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್, 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದೆ. ವಿನ್ಯಾಸದ ದೃಷ್ಟಿಯಿಂದ ಅತ್ಯಾಧುನಿಕ ಗ್ರಿಲ್, ಸ್ಪ್ಲಿಟ್ ಹೆಡ್ ಲ್ಯಾಂಪ್, ಫ್ರಂಟ್ & ರೇರ್ ಹೊಸದಾದ ಬಂಪರ್, ನವೀನ ಅಲಾಯ್ ವೀಲ್ಸ್, ಎಲ್ಇಡಿ ಟೈಲ್ ಲೈಟ್ ಅನ್ನು ಪಡೆದಿದೆ.

ಬಿಎಂಡಬ್ಲ್ಯೂ 7 ಸೀರಿಯಸ್ 12.3 - ಇಂಚಿನ ಡಿಜಿಟಲ್ ಕಾಕ್‌ಪಿಟ್, 14.9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಸಾಜ್ ಫಂಕ್ಷನ್ ನೊಂದಿಗೆ ಫ್ರಂಟ್ & ರೇರ್ ಸೀಟ್ಸ್, ಆಂಬಿಯೆಂಟ್ ಲೈಟಿಂಗ್, ರೇರ್ ಸೀಟ್ ನಲ್ಲಿ ಟೆಲಿಫೋನಿ ಮತ್ತು ಮೀಡಿಯಾ ಕಂಟ್ರೋಲ್, ರೇರ್ ಡೋರ್ ಗಳಲ್ಲಿ 5.5 - ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ.

ಇನ್ನು, ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಸಾಕಷ್ಟು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಕಳೆದ ವರ್ಷ ಅವರು, ಮರ್ಸಿಡಿಸ್ ಬೆಂಜ್ ಜಿ63 ಎಎಂಜಿ (Mercedes-Benz G63 AMG) ಕಾರನ್ನು ಖರೀದಿಸಿದ್ದರು. ಪ್ರಸ್ತುತ ಕಂಪನಿಯು ಈ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿದೆ. ಈ ಎಸ್‌ಯುವಿ, ರೂ.2.45 - 3.30 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು. ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತಿದ್ದ ಈ ಕಾರು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 27, 2023, 15:06 [IST]
English summary
Salaar actor prithviraj sukumaran spotted in bmw 7 series sedan details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+