ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಎಲ್ಲಾ ರಾಜ್ಯಗಳ ಗಡಿಗಳನ್ನು ಮುಚ್ಚಲಾಗಿದೆ. ಮಾರಣಾಂತಿಕ ಕರೋನಾ ವೈರಸ್‌ನಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ ಈ ಉದ್ದೇಶವನ್ನು ಮರೆತಿರುವ ಕೆಲವರು ಇನ್ನೂ ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಕರೋನಾ ವೈರಸ್‌ನ ಗಂಭೀರತೆಯನ್ನು ಅರಿತುಕೊಳ್ಳದ ಜನರು ರಜೆ ನೀಡಲಾಗಿದೆ ಎಂಬಂತೆ ಜಾಲಿ ರೈಡ್‌ಗೆ ಹೋಗುತ್ತಿದ್ದಾರೆ. ಇಂತಹ ಅಜಾಗರೂಕತೆಯಿಂದಾಗಿ, ಇಟಲಿ ಹಾಗೂ ಅಮೆರಿಕಾ ಸೇರಿದಂತೆ ಇನ್ನೂ ಹಲವು ದೇಶಗಳು ಕರೋನಾದ ಹಿಡಿತದಲ್ಲಿ ಸಿಲುಕಿಕೊಂಡು, ಭಾರಿ ನಷ್ಟವನ್ನು ಅನುಭವಿಸುತ್ತಿವೆ.

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಈ ದೇಶಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಾರಿ ಅಭಿವೃದ್ಧಿಯನ್ನು ಹೊಂದಿವೆ ಎಂಬುದನ್ನು ಗಮನಿಸಬೇಕು. ಆದರೆ ಮಹಾಮಾರಿ ಕರೋನಾ ವೈರಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ಈ ರೋಗ ಬರದಂತೆ ತಡೆಯುವುದೇ ಇದಕ್ಕಿರುವ ಮದ್ದು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಇದರ ಬಗ್ಗೆ ಚಿಂತಿಸದ ಜನರು ರಸ್ತೆಗಳಲ್ಲಿ ವಿನಾಕಾರಣ ಅಲೆದಾಡುತ್ತಿದ್ದಾರೆ. ಇದು ಸರ್ಕಾರದ ಉದ್ದೇಶವನ್ನು ಹಾಳುಮಾಡುವುದರ ಜೊತೆಗೆ ಕರೋನಾ ವೈರಸ್ ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತದೆ.

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಈ ಕಾರಣಕ್ಕೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೊರಬರುವವರ ಮೇಲೆ ಪೊಲೀಸರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಲಾಠಿ ಚಾರ್ಜ್ ಮಾಡುವುದರ ಜೊತೆಗೆ, ಪ್ರಕರಣ ದಾಖಲಿಸಿ, ದಂಡ ವಿಧಿಸುತ್ತಿದ್ದಾರೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಇದರ ಜೊತೆಗೆ ಬ್ಯಾನರ್ ಹಿಡಿದು ನಿಲ್ಲುವುದು, ಕಸಗುಡಿಸುವುದು, ಹಣೆ ಮೇಲೆ ಮಾರ್ಕ್ ಹಾಕುವಂತಹ ವಿನೂತನ ಶಿಕ್ಷೆಗಳನ್ನು ನೀಡುತ್ತಿದ್ದಾರೆ. ರಸ್ತೆಯಲ್ಲಿ ವಿನಾಕಾರಣ ಸಂಚರಿಸುವ ವಾಹನ ಚಾಲಕರಿಗೆ ಶಿಕ್ಷೆ ವಿಧಿಸಲು ತಮಿಳುನಾಡು ಪೊಲೀಸರು ನವೀನ ತಂತ್ರವನ್ನು ಬಳಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಅವಶ್ಯಕತೆಯಿಲ್ಲದೆ ಹೊರಗೆ ಅಲೆದಾಡುವ ಯುವಕರ ವಾಹನಗಳ ಮುಂಭಾಗ ಹಾಗೂ ಹಿಂಭಾಗಗಳಲ್ಲಿ ಬಣ್ಣವನ್ನು ಬಳಿಯಲಾಗುತ್ತಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಅವರು ಪ್ರತಿದಿನ ವಿವಿಧ ಬಣ್ಣಗಳನ್ನು ರಸ್ತೆಗಿಳಿಯುವ ವಾಹನಗಳ ಮೇಲೆ ಸಿಂಪಡಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಫೆಂಡರ್‌ಗಳ ಮೇಲೆ ಬಣ್ಣ ಬಳಿಯುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಅನಗತ್ಯವಾಗಿ ಹೊರಗೆ ಬಂದಿದ್ದಾರೆ ಎಂದು ಕಂಡುಬಂದಲ್ಲಿ, ಅಂತಹ ವಾಹನದ ಮೇಲೆ ಒಂದು ಡಾಟ್ ಇಡಲಾಗುತ್ತದೆ. ಒಟ್ಟು ಐದು ರೀತಿಯ ಬಣ್ಣದಲ್ಲಿ ಡಾಟ್ ಇಡಲಾಗುತ್ತದೆ. ಸದ್ಯಕ್ಕೆ ಹಳದಿ ಬಣ್ಣವನ್ನು ಬಳಿಯುತ್ತಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ಈ ರೀತಿಯ ಡಾಟ್ ಅನ್ನು ಐದು ಬಾರಿ ಇಟ್ಟರೆ, ಅಂತಹ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಪೊಲೀಸರು ಹೇಳಿದ್ದಾರೆ. ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ಜಾರಿಗೆ ತರಲು ಸೇಲಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳಿಗೆ ಬಿತ್ತು ಪೇಂಟ್..!

ದೇಶದ ಉಳಿದ ಭಾಗಗಳಲ್ಲಿಯೂ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಂತಹ ಕ್ರಮಗಳ ಮಧ್ಯೆ, ಸೇಲಂ ಪೊಲೀಸರ ವಿನೂತನ ಕ್ರಮ ಸ್ವಾಗತಾರ್ಹ. ಇನ್ನು ಮುಂದಾದರೂ ಅನಗತ್ಯವಾಗಿ ಜನರು ಹೊರಬರುವುದು ತಪ್ಪುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Salem cops paints vehicles which violates lockdown. Read in Kannada.
Story first published: Saturday, April 11, 2020, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X