ಹೊಸ ಐಷಾರಾಮಿ ರೇಂಜ್ ರೋವರ್ ಕಾರು ಖರೀದಿಸಿದ ಸಲ್ಮಾನ್ ಖಾನ್: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ಅಥವಾ ವಿವಾದಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಕಾರುಗಳ ಕಲೆಕ್ಷನ್ ದೊಡ್ಡ ಸದ್ದನ್ನೇ ಮಾಡುತ್ತವೆ. ಅದರಲ್ಲೂ ರೇಂಜ್ ರೋವರ್ ಎಸ್‍ಯುವಿ ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ಕಾರುಗಳಲ್ಲಿ ಪ್ರಮುಖ ಮಾದರಿಯಾಗಿದೆ.
ನಮ್ಮ ದೇಶದ ಹಾಗೂ ಜಗತ್ತಿನ ಬಹುತೇಕ ಪ್ರತಿಯೊಬ್ಬ ಸೆಲೆಬ್ರಿಟಿಗಳು ಬಳಿ ರೇಂಜ್ ರೋವರ್ (Range Rover) ಅನ್ನು ಹೊಂದಿರುತ್ತಾರೆ. ಇತ್ತೀಚೆಗೆ ಮತ್ತೊಂದು ಸೆಲೆಬ್ರಿಟಿ ಸಲ್ಮಾನ್ ಖಾನ್ ಅವರು ಹೊಸ ರೇಂಜ್ ರೋವರ್ ಎಸ್‍ಯುವಿಯನ್ನು ಖರೀದಿಸಿದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್. 4.4 ಕೋಟಿ ಮೌಲ್ಯದ ತನ್ನ ಹೊಚ್ಚಹೊಸ ರೇಂಜ್ ರೋವರ್ ಎಸ್ವಿ ಲಾಂಗ್ ವೀಲ್‌ಬೇಸ್‌ನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ಸಲ್ಮಾನ್ ಖಾನ್ ತಮ್ಮ ಹೊಚ್ಚಹೊಸ ರೇಂಜ್ ರೋವರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೀಡಿಯೊವನ್ನು ಶೋಶಾ ತಮ್ಮ ಪುಟದಲ್ಲಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸೂಪರ್‌ಸ್ಟಾರ್‌ನ ಹೊಸ ರೇಂಜ್ ರೋವರ್ ನಿರ್ಗಮನ ಗೇಟ್‌ಗೆ ಆಗಮಿಸುವುದರ ಮೂಲಕ ವೀಡೀಯೊ ಪ್ರಾರಂಭವಾಗುತ್ತದೆ. ಸಲ್ಮಾನ್ ಖಾನ್ ಅವರ ಹೊಸ ರೇಂಜ್ ರೋವರ್ ಅನ್ನು ಅವರ ಪೊಲೀಸ್ ಎಸ್ಕಾರ್ಟ್ ವಾಹನ ಕೂಡ ನೋಡಬಹುದು.
ನಂತರ ಅವರು ಗೇಟ್‌ಗೆ ತೆರಳಿ ಅಲ್ಲಿ ಜನಪ್ರಿಯ ರಾಜಕಾರಣಿ ಬಾಬಾ ಸಿದ್ದಿಕ್ ಮತ್ತು ಅವರ ಮಗ ಜೀಶಾನ್ ಅವರನ್ನು ಭೇಟಿಯಾದರು. ಸಲ್ಮಾನ್ ಖಾನ್ ಅವರು ಹೊಸ ತಲೆಮಾರಿನ ರೇಂಜ್ ರೋವರ್‌ನ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬ ಕುತೂಹಲ ನಿಮಗೆ ಇರಬಹುದು. ಅದಕ್ಕೆ ಉತ್ತರ, ಈ ಸೂಪರ್ ಸ್ಟಾರ್ ರೇಂಜ್ ರೋವರ್ ಎಸ್ವಿ ಲಾಂಗ್-ವೀಲ್ಬೇಸ್ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಈ ನಿರ್ದಿಷ್ಟ ಮಾದರಿಯು 3.0-ಲೀಟರ್ ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದ್ದು, ಇದು ಗರಿಷ್ಠ 503 bhp ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಲ್ಮಾನ್ ಖಾನ್ ತಮ್ಮ ರೇಂಜ್ ರೋವರ್ SV LWB ಗಾಗಿ ಪೋರ್ಟೋಫಿನೋ ಬ್ಲೂ ನ ಕ್ಲಾಸಿ ಶೇಡ್ ಅನ್ನು ಆಯ್ಕೆ ಮಾಡಿದ್ದಾರೆ. ಈ ನಿರ್ದಿಷ್ಟ ಮಾದರಿಗೆ ರೂ.4.4 ಕೋಟಿ ಆನ್ ರೋಡ್ ಬೆಲೆ ಹೊಂದಿದೆ.
ಸಲ್ಮಾನ್ ಖಾನ್ ಅವರ ರೇಂಜ್ ರೋವರ್ SV LWB SV ಎಸ್‍ಯುವಿಯು ಗ್ರಿಲ್ ಮತ್ತು ಮುಂಭಾಗದ ಬಂಪರ್, ಡಿಜಿಟಲ್ LED ಹೆಡ್‌ಲೈಟ್‌ಗಳು, 22-ಇಂಚಿನ ಡೈಮಂಡ್-ಟರ್ನ್ಡ್ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು, ಅಲ್ಯೂಮಿನಿಯಂ ಟ್ರೆಡ್‌ಪ್ಲೇಟ್‌ಗಳು, ಇಲ್ಯುಮಿನೇಟೆಡ್ SV ಸ್ಕ್ರಿಪ್ಟ, ಅಲ್ಯೂಮಿನಿಯಂ ಪೆಡಲ್‌ಗಳು, ನಾಲ್ಕು-ವಲಯ ಕಂಟ್ರೋಲ್ ಅನ್ನು ಹೊಂದಿದೆ.

ಈ ಹೊಸ ರೇಂಜ್ ರೋವರ್ ಎಸ್‍ಯುವಿಯ ಮುಂಭಾಗದ ಸೆಂಟರ್ ಕನ್ಸೋಲ್ ರೆಫ್ರಿಜರೇಟರ್ ವಿಭಾಗ, ಮತ್ತು ಹಲವಾರು ಇತರ ವೈಶಿಷ್ಟ್ಯಗಳನ್ನು ಕೂಡ ಹೊಂದಿವೆ. ಇನ್ನು ಈ ಕಾರಿನ ಪ್ರಮುಖ ಹೈಲೈಟ್ ಎಂದರೆ ಅದರ 24-ವೇ ಹೀಟೆಡ್ ಮತ್ತು ಕೂಲ್ಡ್ ಎಕ್ಸಿಕ್ಯುಟಿವ್ ರಿಯರ್ ಸೀಟುಗಳು ಆಗಿದ್ದು, ಇದು 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 13.1-ಇಂಚಿನ ಹಿಂಭಾಗದ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಳನ್ನು ಸಹ ಪಡೆಯುತ್ತದೆ.
ಅಲ್ಲದೆ, ಇದು ಮೆರಿಡಿಯನ್ 3D ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಸಲ್ಮಾನ್ ಖಾನ್ ರೇಂಜ್ ರೋವರ್ ಪ್ರೇಮಿ. ಅವರು ಈ ಎಸ್‍ಯುವಿಯ ವಿವಿಧ ತಲೆಮಾರುಗಳನ್ನು ಹೊಂದಿದ್ದಾರೆ. ಈ ಮಾದರಿಯ ಮೊದಲು, ಅವರು ರೇಂಜ್ ರೋವರ್ ಆಟೋಬಯೋಗ್ರಫಿ ಲಾಂಗ್-ವೀಲ್ಬೇಸ್ ಅನ್ನು ಹೊಂದಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








