ಸಿಕ್ಸ್ ಪ್ಯಾಕ್ ವೀರ ಸಲ್ಲು ಬಾಡಿಗೆ ತಕ್ಕ ಲಗ್ಷುರಿ ಬಸ್
ಬಾಲಿವುಡ್ ಸಿನೆಮಾವನ್ನು ಬಹಳ ನಿಕಟವಾಗಿ ವೀಕ್ಷಿಸುವವ ಪ್ರೇಕ್ಷಕರ ಗಮನಕ್ಕೆ ವಿಚಾರವೊಂದು ಹೊಳಿದಿರಬಹುದು. ದಶಕಗಳ ಹಿಂದಿದ್ದ ಸಲ್ಮಾನ್ ಖಾನ್ ಈಗಲೂ ತಮ್ಮ ದಷ್ಟಪುಷ್ಟವಾದ ದೇಹವನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಸಲ್ಲು ಚಿರ ಯೌವನದ ರಹಸ್ಯ ಏನೇ ಆಗಿರಲಿ; ಹಿಂದಿ ಚಿತ್ರರಂಗದಲ್ಲಿ ಎಲ್ಲ ತರಹದ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಅದರಲ್ಲೂ ಸಲ್ಮಾನ್ ತನ್ನದೇ ಆದ ವಿಶೇಷ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಪರದೆಯಲ್ಲಿ ಹಲವಾರು ಮಂದಿಗೆ ಮನರಂಜನೆ ನೀಡುತ್ತಿರುವ ಸಲ್ಮಾನ್ ಖಾಸಗಿ ಬದುಕು ಮಾತ್ರ ಹಲವಾರು ಏರುಬೀಳುಗಳಿಂದ ಕೂಡಿರುವುದಂತೂ ಅಷ್ಟೇ ಸತ್ಯ.
ಇತ್ತೀಚೆಗಷ್ಟೇ ಕೆಟ್ಟು ಹೋಗಿದ್ದ ರೇಂಜ್ ರೋವರ್‌ನಿಂದ ಕುಪಿತಗೊಂಡಿದ್ದ ಸಲ್ಮಾನ್ ಟ್ವಿಟರ್‌ನಲ್ಲಿ ಈ ದುಬಾರಿ ಕಾರು ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದ ಹಾಗೆ ಇಂದಿನ ಈ ಲೇಖನದಲ್ಲಿ ಸಲ್ಮಾನ್ ಲಗ್ಷುರಿ ವ್ಯಾನಿಟಿ ವ್ಯಾನ್ ಬಗ್ಗೆ ಚರ್ಚಿಸಲಿದ್ದೇವೆ.
ಶಾರೂಕ್ ಅದ್ದೂರಿ ಬಸ್ಸಲ್ಲಿ ಅಂತದ್ದೇನಿದೆ?

ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ತರಹನೇ ಸಲ್ಮಾನ್ ಸಹ ತನ್ನ ಖಾಸಗಿ ಬಳಕೆಗಾಗಿ ಐಷಾರಾಮಿ ವ್ಯಾನಿಟಿ ವ್ಯಾನ್‌ವೊಂದನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ವಿಶೇಷವೆಂದರೆ ಶಾರೂಕ್ ರೀತಿಯಲ್ಲಿಯೇ ದೇಶದ ಅತಿದೊಡ್ಡ ಕಸ್ಟಮೈಸ್ಡ್ ಕಂಪನಿಯಾಗಿರುವ ದಿಲೀಪ್ ಚಾಬ್ರಿಯಾ ಅವರ ಡಿಸಿ ಡಿಸೈನ್ ಸಲ್ಮಾನ್ ವಾಹನವನ್ನು ವಿನ್ಯಾಸಗೊಳಿಸಿರುವುದು.

ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ವ್ಯಾನ್‌ನೊಳಗೆ ವಿಶಾಲವಾದ ಸ್ಥಳಾವಕಾಶ ಕೊಡಲಾಗಿದೆ. ಇನ್ನೊಂದೆಡೆ ಸಲ್ಮಾನ್ ಅವರ ಫೋಟೊ ನೋಡಬಹುದು.

ವ್ಯಾನ್‌ನ ಒಳಗಡೆ ಶೌಚಾಲಯ ಮುಂತಾದ ಸೌಕರ್ಯಗಳಿವೆ. ಹಾಗೆಯೇ ವಿಶ್ರಾಂತಿ ಕೊಠಡಿ ಸಹ ಲಗತ್ತಿಸಲಾಗಿದೆ.

ನಿಮ್ಮ ಮಾಹಿತಿಗಾಗಿ ಪ್ರಮುಖವಾಗಿಯೂ ಔಟ್ ಡೋರ್ ಶೂಟಿಂಗ್‌ಗಾಗಿ ಸಲ್ಮಾನ್ ಈ ವಾಹನವನ್ನು ಬಳಕೆ ಮಾಡುತ್ತಾರೆ.

ಇನ್ನು ವ್ಯಾನ್‌ನಲ್ಲಿ ಆಧುನಿಕ ಸೌಲಭ್ಯಗಳನ್ನು ಆಳವಡಿಸಲಾಗಿದೆ. ಇದು ವಿಶಿಷ್ಟ ಡಿಸಿ ಡಿಸೈನ್ ಟಚ್ ಪಡೆದುಕೊಂಡಿದೆ.

ಹಾಗೆಯೇ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಆಗ್ನಿ ಶಾಮಕ ಯಂತ್ರ ಸಹ ಆಳವಡಿಸಲಾಗಿದೆ.

ಇದು ಸಲ್ಮಾನ್ ಅವರ ವ್ಯಾನಿಟಿ ಬೆಡ್ ರೂಂ. ಆದರೆ ಸೂಕ್ಷ್ಮವಾಗಿ ಗಮನಿಸಿದ್ದರಷ್ಟೇ ಗೋಡೆಯಲ್ಲಿ ಸಲ್ಮಾನ್ ಚಿತ್ರವನ್ನು ಗಮನಿಸಬಹುದು.

ಹಾಗಿದ್ದರೂ ಯಾವ ಸಂಸ್ಥೆಗೆ ಸೇರಿದ ಬಸ್ಸನ್ನು ಕಸ್ಟಮೈಸ್ಡ್ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಡಿಸಿ ಡಿಸೈನ್‌ಗೆ ಈ ಎಲ್ಲ ವಿಚಾರಗಳು ಮಹತ್ವವೆನಿಸುವುದಿಲ್ಲ.

ಇನ್ನು ಸಿನೆಮಾ ಸ್ಟಾರ್ ಅಂದ ಮೇಲೆ ಮೇಕಪ್ ಡೆಸ್ಕ್‌ನ ಅವಶ್ಯಕತೆ ಇದ್ದೇ ಇರುತ್ತದೆ. ಹೌದು ವಿಶೇಷ ಲೈಟಿಂಗ್ಸ್‌ನಿಂದ ಸಜ್ಜೀಕರಿಸಲಾದ ಸಲ್ಮಾನ್ ಮೆಕಪ್ ಡೆಸ್ಕ್ ಇದಾಗಿದೆ.

ಇದು ಸಲ್ಮಾನ್ ಖಾನ್ ಬಸ್ಸಿನ ಇನ್ನೊಂದು ಮನೋಹರ ನೋಟವಾಗಿದೆ.

ಅಷ್ಟಕ್ಕೂ ಶಾರೂಕ್ ಬಳಿಯಿರುವ ಬಸ್ಸು
ಯಾವುದು? ವಿವರಗಳಿಗಾಗಿ ಕ್ಲಿಕ್ಕಿಸಿ...


Click it and Unblock the Notifications








