ಆಡಂಬರವಿಲ್ಲದೆ ಸಿಂಪಲ್ ಟೊಯೋಟಾ ಕಾರು ಖರೀದಿಸಿದ ಜನಪ್ರಿಯ ನಟ

ಭಾರತೀಯ ಚಿತ್ರರಂಗ ಕೇವಲ ಒಂದು ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ, ತಮಿಳು, ತೆಲುಗು, ಮರಾಠಿ ಹೀಗೆ ಹತ್ತಾರು ಭಾಷಗಳಿಂದ ಸಿನಿಮಾಗಳು ಬರುತ್ತವೆ. ನಮ್ಮ ಕನ್ನಡಿಗರು ಕೂಡ ಬಹುತೇಕ ಎಲ್ಲಾ ಭಾಷೆಗಳ ಸಿನಿಮಾಗಳನ್ನು ನೋಡುತ್ತಾರೆ. ನಮ್ಮಲ್ಲಿ ಬಹುತೇಕರು ಬಾಲಿವುಡ್‌ನಿಂದ ಹಿಡಿದು ಮಾಲಿವುಡ್ ವರೆಗೆ ಭಾಷೆಯನ್ನು ಮೀರಿ ಸಿನಿಮಾಗಳನ್ನು ಆನಂದಿಸುವವರಿದ್ದಾರೆ.

ನಮ್ಮಲ್ಲಿ ಹಲವರು 2016 ರಲ್ಲಿ ಬಿಡುಗಡೆಯಾದ ಸನಮ್ ತೇರಿ ಕಸಮ್ ಎಂಬ ಸಿನಿಮಾವನ್ನು ನೋಡಿರುತ್ತೀರ. ಇದು ದೊಡ್ಡ ತಾರಾಗಣವಿಲ್ಲದೇ ಸೈಲೆಂಟ್ ಆಗಿ ಬಂದು ಹಲವರ ಮನಗೆದ್ದ ಬಾಲಿವುಡ್ ಸಿನಿಮಾ, ಆದರೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಇಂದಿಗೂ ಈ ಸಿನಿಮಾಗೆ ಪ್ರತ್ಯೇಕ ಸ್ಥಾನವಿದೆ. ಸಿನಿಮಾದ ನಾಯಕ ನಟ ಹರ್ಷವರ್ಧನ್ ರಾಣೆ ಮತ್ತು ನಟಿ ಮಾವ್ರಾ ಹೊಕಾನೆ ಇನ್ನೂ ಯುವಕರಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.

sanam-teri-kasam-fame-actor-harshvardhan-rane-buys-innova-hycross

ಹೃದಯವಂತ ನಟ ಹರ್ಷವರ್ಧನ್: ಹಲವು ಏಳುಬೀಳುಗಳ ನಡುವೆ ಹರ್ಷವರ್ಧನ್ 2010 ರಲ್ಲಿ ತೆಲುಗು ಚಿತ್ರವೊಂದರ ಮೂಲಕ ಪಾದಾರ್ಪಣೆ ಮಾಡಿದರು, ಆದರೆ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಹಿಂದಿ ಸಿನಿಮಾವಾದ ಸನಮ್ ತೇರಿ ಕಸಮ್ ಆಗಿತ್ತು. ಹರ್ಷವರ್ಧನ್ ಅವರು ತಮ್ಮ ಐಷಾರಾಮಿ ಬೈಕ್ ಅನ್ನು ಮಾರಾಟ ಮಾಡಿ ಕೋವಿಡ್ ಸಮಯದಲ್ಲಿ ಉಂಟಾದ ಆಮ್ಲಜನಕದ ಕೊರತೆಯನ್ನು ನೀಗಿಸಲು ಹಣವನ್ನು ನೀಡುವ ಮೂಲಕ ಹಲವರ ಹೃದಯ ಗೆದ್ದಿದ್ದರು.

ಹೊಸ ಕಾರು ಖರೀದಿ: ಹರ್ಷವರ್ಧನ್ ರಾಣೆ ಈಗ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಖರೀದಿಸಿದ್ದಾರೆ. ಬಿಳಿ ಬಣ್ಣದ ಆಯ್ಕೆಯನ್ನು ಹೊಂದಿರುವ ಹೈಕ್ರಾಸ್‌ನ ಹೈಬ್ರಿಡ್ ಟಾಪ್-ಎಂಡ್ ವೇರಿಯೆಂಟ್ ಅನ್ನು ಮನೆಗೆ ತಂದಿದ್ದಾರೆ. ಇದರ ಪೆಟ್ರೋಲ್ ಆಟೋಮ್ಯಾಟಿಕ್ ಹೈಕ್ರಾಸ್ ಬೆಲೆ 18.55 ಲಕ್ಷ ರೂ.ಗಳಿಂದ ಆರಂಭವಾಗಿ 19.45 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ದೆಹಲಿ) ಇದೆ.

sanam-teri-kasam-fame-actor-harshvardhan-rane-buys-innova-hycross

ಮತ್ತೊಂದೆಡೆ, ಇನ್ನೋವಾ ಹೈಕ್ರಾಸ್‌ನ ಹೈಬ್ರಿಡ್ ಆವೃತ್ತಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 25.03 ಲಕ್ಷದಿಂದ ರೂ. 29.99 ಲಕ್ಷಗಳಾಗಿದೆ. ಹೊಸ ಹೈಬ್ರಿಡ್ ಎಂಜಿನ್ ಸೇರ್ಪಡೆಯೊಂದಿಗೆ ಇನ್ನೋವಾ ಹೈಕ್ರಾಸ್ ಅನ್ನು ಪೆಟ್ರೋಲ್ ಮತ್ತು ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಹೈಕ್ರಾಸ್‌ನ ಹೈಬ್ರಿಡ್ ಅಲ್ಲದ ಆವೃತ್ತಿಯು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 172 bhp ಪವರ್ ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜಪಾನಿನ ವಾಹನ ತಯಾರಕ ಟೊಯೊಟಾ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ನು ಸಹ ನೀಡುತ್ತದೆ. ಅಂದರೆ ವಾಹನದಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಲಭ್ಯವಿರುವುದಿಲ್ಲ. ಆದರೆ, ಕಂಪನಿಯು ಪ್ರತಿ ಲೀಟರ್‌ಗೆ 16.13 ಕಿ.ಮೀ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

sanam-teri-kasam-fame-actor-harshvardhan-rane-buys-innova-hycross

ಉನ್ನತ ಮಾದರಿಗಳಲ್ಲಿ ಪೆಟ್ರೋಲ್ ಎಂಜಿನ್ 2.0-ಲೀಟರ್ ನಾಲ್ಕು ಸಿಲಿಂಡರ್ ಅಟ್ಕಿನ್ಸನ್ ಸ್ಟ್ರಾಂಗ್ ಹೈಬ್ರಿಡ್ ಘಟಕವಾಗಿದ್ದು, ಎಲೆಕ್ಟ್ರಿಕ್ ಬ್ಯಾಟರಿಯೊಂದಿಗೆ ಜೋಡಿಸಲಾಗಿದೆ. ಇದು 184 bhp ಪವರ್ ಮತ್ತು 205 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು ಇ-ಸಿವಿಟಿ ಇ-ಡ್ರೈವ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಹೈಬ್ರಿಡ್ ಆಗಿರುವುದರಿಂದ, ಇನ್ನೋವಾ ಹೈಕ್ರಾಸ್ 23.24 kmpl ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 30, 2024, 16:10 [IST]
English summary
Sanam teri kasam fame actor harshvardhan rane buys innova hycross
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+