ಬಿಎಡಬ್ಲ್ಯು 5 ಸಿರೀಸ್ ಕಾರಿನ ಒಡತಿ ಸಂಜನಾ
ಕನ್ನಡದ ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾಗಿಂದು ಜನ್ಮದಿನದ ಸಂಭ್ರಮ. ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಸಂಜನಾ ಇದೀಗ ನೂತನ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಅಂದ ಹಾಗೆ ಸಂಜನಾ ಬಿಳಿ ಬಣ್ಣದ ಬಿಎಂಡಬ್ಲ್ಯು 5 ಸಿರೀಸ್ ಸೆಡಾನ್ ಕಾರಿನ ಒಡತಿಯಾಗಿದ್ದಾಳೆ. ಇದರ ದರ ಬರೋಬ್ಬರಿ 50 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಅಂತೆಯೇ ಇಂದಿನ ಈ ಲೇಖನದಲ್ಲಿ ಸಂಜನಾಳ ಬಿಎಂಡಬ್ಲ್ಯು ಕಾರಿನ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ಬಿಎಂಡಬ್ಲ್ಯು 5 ಸಿರೀಸ್ ಎಕ್ಸ್‌ಕ್ಲೂಟಿವ್ ಸೆಡಾನ್ ಕಾರು ಅದ್ಭುತ ಚಾಲನಾ ಅನುಭವ ನೀಡುತ್ತದೆ. ಹಾಗೆಯೇ ಚೂಪಾದ ರನ್ನಿಂಗ್ ಲೈಟ್ಸ್ ಹಾಗೂ ಬಾಡಿ ವಿನ್ಯಾಸ ಹೆಚ್ಚು ಆಕರ್ಷಣೆಯನ್ನು ಪಡೆದಿದೆ

ಒಟ್ಟು ಐದು ವೆರಿಯಂಟ್‌ಗಳಲ್ಲಿ ಬಿಎಂಡಬ್ಲ್ಯು 5 ಸಿರೀಸ್ ಕಾರುಗಳು ಲಭ್ಯವಿದೆ. ಇವುಗಳೆಲ್ಲವೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಅವುಗಳೆಂದರೆ
- ಬಿಎಂಡಬ್ಲ್ಯು 5 ಸಿರೀಸ್ 535ಐ (ಪೆಟ್ರೋಲ್)
- ಬಿಎಂಡಬ್ಲ್ಯು 5 ಸಿರೀಸ್ 520ಡಿ (ಡೀಸೆಲ್)
- ಬಿಎಂಡಬ್ಲ್ಯು 5 ಸಿರೀಸ್ 525ಡಿ (ಡೀಸೆಲ್)
- ಬಿಎಂಡಬ್ಲ್ಯು 5 ಸಿರೀಸ್ 530ಡಿ (ಡೀಸೆಲ್)
- ಬಿಎಂಡಬ್ಲ್ಯು 5 ಸಿರೀಸ್ 520ಐ (ಪೆಟ್ರೋಲ್)
- ಬಿಎಂಡಬ್ಲ್ಯು 5 ಸಿರೀಸ್ 535ಐ (ಪೆಟ್ರೋಲ್)- 11 kmpl
- ಬಿಎಂಡಬ್ಲ್ಯು 5 ಸಿರೀಸ್ 520ಡಿ (ಡೀಸೆಲ್)- 18 kmpl
- ಬಿಎಂಡಬ್ಲ್ಯು 5 ಸಿರೀಸ್ 525ಡಿ (ಡೀಸೆಲ್)- 16 kmpl
- ಬಿಎಂಡಬ್ಲ್ಯು 5 ಸಿರೀಸ್ 530ಡಿ (ಡೀಸೆಲ್)- 9 kmpl
- ಬಿಎಂಡಬ್ಲ್ಯು 5 ಸಿರೀಸ್ 520ಐ (ಪೆಟ್ರೋಲ್)- 11 kmpl
- ಬಿಎಂಡಬ್ಲ್ಯು 5 ಸಿರೀಸ್ 535ಐ (ಪೆಟ್ರೋಲ್)- 63.04 ಲಕ್ಷ ರು.
- ಬಿಎಂಡಬ್ಲ್ಯು 5 ಸಿರೀಸ್ 520ಡಿ (ಡೀಸೆಲ್)- 43.85 ಲಕ್ಷ ರು.
- ಬಿಎಂಡಬ್ಲ್ಯು 5 ಸಿರೀಸ್ 525ಡಿ (ಡೀಸೆಲ್)- 46.31 ಲಕ್ಷ ರು.
- ಬಿಎಂಡಬ್ಲ್ಯು 5 ಸಿರೀಸ್ 530ಡಿ (ಡೀಸೆಲ್)- 54.47 ಲಕ್ಷ ರು.
- ಬಿಎಂಡಬ್ಲ್ಯು 5 ಸಿರೀಸ್ 520ಐ (ಪೆಟ್ರೋಲ್)- 42.24 ಲಕ್ಷ ರು.
- 1995 cc, ಡೀಸೆಲ್, 184 ಬಿಎಚ್‌ಪಿ @ 4000 ಆರ್‌ಪಿಎಂ ಪವರ್,
- 1995 cc, ಡೀಸೆಲ್, 217 ಬಿಎಚ್‌ಪಿ @ 4400 ಆರ್‌ಪಿಎಂ ಪವರ್,
- 1997 cc, ಪೆಟ್ರೋಲ್, 201 ಬಿಎಚ್‌ಪಿ @ 6300 ಆರ್‌ಪಿಎಂ ಪವರ್,
- 2497 cc, ಪೆಟ್ರೋಲ್, 201 ಬಿಎಚ್‌ಪಿ @ 6300 ಆರ್‌ಪಿಎಂ ಪವರ್,
- 2979 cc, ಪೆಟ್ರೋಲ್, 306 ಬಿಎಚ್‌ಪಿ @ 5800 ಆರ್‌ಪಿಎಂ ಪವರ್,
- 2993 cc, ಡೀಸೆಲ್, 258 ಬಿಎಚ್‌ಪಿ @ 4000 ಆರ್‌ಪಿಎಂ ಪವರ್,

ಮೈಲೇಜ್

ದರ ಮಾಹಿತಿ ಎಕ್ಸ್ ಶೋ ರೂಂ ಬೆಂಗಳೂರು

ಎಂಜಿನ್

5 ಸೀಟರ್
ಐದು ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ಸಿಟ್ಟಿಂಗ್ ವ್ಯವಸ್ಥೆಯಿದೆ. ಹಾಗೆಯೇ ಐದು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ.
ಗೇರ್ ಬಾಕ್ಸ್: 8 ಸ್ಪೀಡ್, ಆಟೋಮ್ಯಾಟಿಕ್, ಪವರ್ ಸ್ಟೀರಿಂಗ್

ಐಷಾರಾಮಿ ಕಾರು ಪ್ರಿಯರಿಗೆ ಬಿಎಂಡಬ್ಲ್ಯು 5 ಸಿರೀಸ್ ಉತ್ತಮ ಆಯ್ಕೆಯಾಗಿರಲಿದೆ. ಇದು ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಭಾರತೀಯ ರಸ್ತೆಗೆ 2007ನೇ ಇಸವಿಯಲ್ಲಿ ಲಗ್ಗೆಯಿಟ್ಟಿದ್ದ ಬಿಎಂಡಬ್ಲ್ಯು 5 ಸಿರೀಸ್ ಈಗಗಾಲೇ ಹಲವು ಬಾರಿ ಪರಿಷ್ಕೃತ ರೂಪ ಪಡೆದುಕೊಂಡಿದೆ. ಇದು ಡಿ ಪ್ಲಸ್ ಲಗ್ಷುರಿ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡಿದೆ.

ಇನ್ನು ಮನರಂಜನೆಗಾಗಿ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, 6 ಸಿಡಿ ಬದಲಾಯಿಸಬಹುದಾದ ಸಿಟಿ ಮ್ಯೂಸಿಕ್ ಸಿಸ್ಟಂ, ಹೈ ಫೈ ಲೌಡ್ ಸ್ಪೀಕರ್, ಸೆಂಟ್ರಲ್ ಕನ್ಸೋಲ್‌ಗೆ ವುಡನ್ ಟಚ್, ಸನ್ ರೂಫ್, ರಿಯರ್ ಸೈಡ್ ವಿಂಡೋ ಹಾಗೂ ಅನೇಕ ಫೀಚರ್‌ಗಳನ್ನು ಹೊಂದಿದೆ.

ಹ್ಯಾಡ್ಲಿಂಗ್ ಹಾಗೂ ಸುರಕ್ಷತೆ
ಇದರ ಎಲೆಕ್ಟ್ರಾನಿಕ್ ಚಾಸೀಸ್ ಕಂಟ್ರೋಲ್ ಸಿಸ್ಟಂ ಲಗತ್ತಿಸಲಾಗಿದ್ದು, ಡ್ರೈವಿಂಗ್ ಹೆಚ್ಚು ಸುಖಕರವಾಗಲಿದೆ. ಹಾಗೆಯೇ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್‌ಗಳಂತಹ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗಿದೆ.


Click it and Unblock the Notifications








