ಬಿಎಂಡಬ್ಲ್ಯು ಹೊಸ ಬೈಕ್ ಖರೀದಿ ವೇಳೆ ದೊಡ್ಮನೆ ಹುಡುಗನ ಈ ಕಾರ್ಯವನ್ನು ಮೆಚ್ಚಲೇಬೇಕು..!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡುವ ಪ್ರತಿ ಸಿನಿಮಾಗಳಲ್ಲೂ ಯಾವುದಾದ್ರು ಒಂದು ಸಾಮಾಜಿಕ ಕಳಕಳಿಯ ಸಂದೇಶ ಇದ್ದೆ ಇರುತ್ತೆ. ಹಾಗೆಯೇ ಅವರು ಮಾಡುವ ವ್ಯಯಕ್ತಿಕ ಕೆಲಸಗಳಲ್ಲೂ ಕೂಡಾ ಎನಾದ್ರು ವಿಶೇಷ ಇದ್ದೆ ಇರುತ್ತೆ ಎನ್ನುವುದಕ್ಕೆ ಬಿಎಂಡಬ್ಲ್ಯು ಬೈಕ್ ಖರೀದಿ ವೇಳೆ ಪುನೀತ್ ರಾಜಕುಮಾರ್ ಅವರು ಮಾಡಿದ ಆ ಒಂದು ಅಭಿಯಾನ ಅಂದ್ರೆ ತಪ್ಪಾಗುದಿಲ್ಲ.

ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿರುವ ಟಸ್ಕರ್ ಬಿಎಂಡಬ್ಲ್ಯು ಮೊಟೊರಾಡ್ ಬೈಕ್ ಡೀಲರ್‌ಶಿಪ್‌ಗೆ ಭೇಟಿ ನೀಡಿದ್ದ ನಟ ಪುನೀತ್ ರಾಜಕುಮಾರ್ ಅವರು ಬಿಎಂಡಬ್ಲ್ಯು ಸಂಸ್ಥೆಯ ಹೊಚ್ಚ ಹೊಸ ಜಿ 310 ಆರ್ ಬೈಕ್ ಖರೀದಿ ಮಾಡಿದ್ದಲ್ಲದೇ, ಇದೇ ವೇಳೆ ಸಂಚಾರಿ ನಿಯಮ ಕುರಿತಾಗಿ ಮಾಡಿದ ಒಂದು ಸಣ್ಣ ಅಭಿಯಾನವು ಆ ಸಂದರ್ಭಕ್ಕೆ ಅರ್ಥಪೂರ್ಣವಾಗಿತ್ತು.

ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಕೀ ಪಡೆದುಕೊಂಡ ನಂತರ ನಟ ಪುನೀತ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಚಾರಿ ಪೊಲೀಸರೊಂದಿಗೆ ಸೇರಿ ವಾಹನ ಸವಾರಿಗೆ ಒಂದೊಳ್ಳೆ ಸಂದೇಶವನ್ನು ನೀಡಿದರು. ಸಂಚಾರಿ ನಿಯಮವನ್ನು ತಪ್ಪದೆ ಪಾಲಿಸಿ ಮತ್ತು ಬೈಕ್ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯ ಬಳಕೆ ಮಾಡಿ ಅಂತಾ ಮನವಿ ಮಾಡಿದ್ರು.

ಇದಕ್ಕೆ ಸಾಥ್ ನೀಡಿದ ಟಸ್ಕರ್ ಬಿಎಂಡಬ್ಲ್ಯು ಮೊಟೊರಾಡ್ ಉದ್ಯೋಗಿಗಳು ಸಹ ಪುನೀತ್ ರಾಜಕುಮಾರ್ ಮನವಿಯೆಂತೆ ಟ್ರಾಫಿಕ್ ನಿಯಮ ಪಾಲನೆ ಕುರಿತಾದ ಅಭಿಯಾನಕ್ಕೆ ಸಹಕರಿಸುವ ಮೂಲಕ ಹೊಸ ಬೈಕ್ ಖರೀದಿಯ ಸಂದರ್ಭಕ್ಕೆ ಮತ್ತಷ್ಟು ಮೆರಗು ನೀಡಿದ್ದು ಮಾತ್ರ ಸುಳ್ಳಲ್ಲ.

ಇನ್ನು ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಇದೇ ಮೊದಲ ಬಾರಿಗೆ ಮೆಡ್ ಇನ್ ಇಂಡಿಯಾ ಅಭಿಯಾನದಡಿ ಅಗ್ಗದ ಬೆಲೆಯಲ್ಲಿ ತನ್ನ ಅಡ್ವೆಂಚರ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊತ್ತುಬಂದಿರುವ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳಿಗೆ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಂಡುಬರುತ್ತಿದೆ.

ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ನಟ ಪುನೀತ್ ರಾಜಕುಮಾರ್ ಅವರು ಸ್ಪೀಡ್ ಫೈಟರ್ ವೈಶಿಷ್ಟ್ಯತೆ ಹೊಂದಿರುವ ಜಿ 310 ಆರ್ ಬೈಕ್ ಖರೀದಿಸಿದ್ದಾರೆ.

ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಬೈಕ್ ಉತ್ಪನ್ನಗಳನ್ನ ಅಭಿವೃದ್ಧಿ ಮಾಡಿರುವ ಬಿಎಂಡಬ್ಲ್ಯು ಸಂಸ್ಥೆಯು ಬೈಕ್‌ಗಳ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದ್ದು, ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

ಜಿಎಸ್ ಅಂದ್ರೆ ಜರ್ಮನ್ ಭಾಷೆಯಲ್ಲಿ Gelände/Straße(ರೋಡ್ ಮತ್ತು ಆಪ್ ರೋಡ್) ಎಂಬುವುದಾಗಿದ್ದು, ಹೊಸದಾಗಿ ಭಾರತದಲ್ಲಿ ಬಿಡುಗಡೆಗೊಂಡಿರುವ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಸಹ ಇದೇ ಆಧಾರದ ಮೇಲೆ ಸಿದ್ದವಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ನಿರ್ಮಾಣ ಮಾಡಲಾಗಿದೆ.
MOST READ: ಕಿಸೆಯಲ್ಲಿ 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಈಗ 4 ಕೋಟಿ ಬೆಲೆಯ ಬೆಂಟ್ಲಿ ಒಡೆಯ

ಜಾಗತಿಕವಾಗಿ ಮಾರಾಟವಾಗುತ್ತಿರುವ ಆರ್‌ಎಸ್80 ಜಿಎಸ್ ಬೈಕ್‌ಗಳು 800ಸಿಸಿ ಎಂಜಿನ್ ಪ್ರೇರಣೆ ಹೊಂದಿದ್ದು, ಭಾರತದಲ್ಲಿ ಆಪ್ ರೋಡ್ ಬೈಕ್ ಮಾರಾಟ ವಿಭಾಗದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳನ್ನು 313ಸಿಸಿ ಎಂಜಿನ್ ಮಾದರಿಯೊಂದಿಗೆ ನಿರ್ಮಾಣ ಮಾಡಲಾಗಿದೆ.

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್‌ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.

ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ನೋಡಬಹುದಾಗಿದೆ.
MOST READ: ಜಾವಾ ನಂತರ ಯಜ್ಡಿ ಬೈಕ್‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಒಟ್ಟಿನಲ್ಲಿ ಈ ವರ್ಷದ ಬಹುನೀರಿಕ್ಷಿತ ಬೈಕ್ ಮಾದರಿಗಳೆಂದೇ ಬಿಂಬಿತವಾಗಿದ್ದ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ ಇದೀಗ ಗ್ರಾಹಕರ ಕೈಗೆ ಸೇರಿದ್ದು, ಅದರಲ್ಲೂ ಪುನೀತ್ ರಾಜಕುಮಾರ್ ಈ ವಿನೂತನ ಬೈಕ್ ಮಾಡಿದ್ದು ಮತ್ತೊಂದು ಆಕರ್ಷಣೆ ಎನ್ನಬಹುದು.


Click it and Unblock the Notifications








