ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕಿನ ವಿಶೇಷತೆ ಏನು?

ಕನ್ನಡ ಸಿನಿಮಾವನ್ನು ಹಾಲಿವುಡ್ ರೆಂಜ್‍‍ನಲ್ಲಿ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಕಿಂಗ್ ಸ್ಟಾರ್ 'ಯಶ್' ಅಭಿನಯದ ಕೆಜಿಎಫ್ ಸಿನಿಮಾ ಇದೇ ಡಿಸೆಂಬರ್ 21ರಂದು ದೇಶಾದ್ಯಂತ ಬಿಡುಗಡೆಗೊಳ್ಳುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳಿಗೆ ಕಾರಣವಾಗುತ್ತಿದೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಕೆಜಿಎಫ್ ಸಿನಿಮಾದ ಚಿತ್ರೀಕರಣವನ್ನು ವರ್ಷಾನುಗಟ್ಟಲೇ ಶ್ರಮ ವಹಿಸಿ ನಿರ್ಮಿಸಲಾಗಿದ್ದು, ಮುಂದಿನ ತಿಂಗಳು ತೆರೆ ಕಾಣಲಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಟ್ರೈಲರ್ ಕೂಡಾ ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಯೂಟ್ಯೂಬ್‍ನಲ್ಲೂ ಮಿಲಿಯನ್ ಗಟ್ಟಲೆ ವ್ಯೂಸ್ ಪಡೆದುಕೊಂಡು ದಾಖಲೆ ಸೃಷ್ಠಿಸಿದೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಒಟ್ಟಿನಲ್ಲಿ ಟಾಲಿವುಡ್ ಚಿತ್ರ ನಿರ್ದೆಶಕ ಎಸ್.ಎಸ್.ರಾಜಮೌಳಿ ಅವರು ಭಾರತೀಯ ಸಿನಿಮಾ ರಂಗಕ್ಕೆ ಕೊಡುಗೆಯಾಗಿ ನೀಡಿದ 'ಬಾಹುಬಲಿ' ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡುವ ತಾಕತ್ತು ನಮ್ಮ ಯಶ್ ಅಭಿನಯದ ಕೆಜಿಎಫ್ ಸಿನಿಮಾಗೆ ಮಾತ್ರ ಇದೆ ಎಂಬ ಚರ್ಚೆಗಳ ಬಗ್ಗೆ ನಾವೀಗಾಗಲೇ ಕಾಣುತ್ತಿದ್ದೇವೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಆದ್ರೆ ಇಂದಿನ ಈ ಲೇಖನದಲ್ಲಿ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೈಲರ್ ಹಾಗು ಪೋಸ್ಟರ್‌ಗಳಲ್ಲಿ ಭಾರೀ ಸದ್ದು ಮಾಡಿರುವ ಕಸ್ಟಮ್ ಬೈಕಿನ ಬಗ್ಗೆ ಮಾಹಿತಿ ನೀಡಲಿದ್ದೇವೆ. ರಾಕಿಂಗ್ ಸ್ಟಾರ್ ಜತೆಗೆ ಕಾಣಿಸಿಕೊಂಡ ಈ ಬೈಕ್ ಕೂಡಾ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಹೌದು, ಕೆಜಿಎಫ್ ಸಿನಿಮಾದ ಟ್ರೈಲರ್ ಹಾಗು ಪೋಸ್ಟರ್‍‍ಗಳಲ್ಲಿ ಯಶ್​​ ತಮ್ಮ ಬೈಕ್​​ ಮೇಲೆ ಕಡಕ್​ ಆಗಿ ಕುಳಿತು ಎಲ್ಲರ ಗಮನ ಸೆಳೆದಿದ್ರು. ಆ ಬೈಕ್​ ಕೂಡ ಎಲ್ಲರನ್ನು ತಮ್ಮತ್ತ ಅಟ್ರಾಕ್ಟ್​​ ಮಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಈ ಬೈಕಿನ ವಿನ್ಯಾಸವೇ ಹಾಗಿದೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟರು ಬಳಸುವ ಬೈಕ್, ಕಾರುಗಳು ಪ್ರೇಕ್ಷಕರಿಗೆ ಸಖತ್ ಸ್ಪೆಷಲ್ ಆಗುತ್ತದೆ. ಆ ಬೈಕ್, ಕಾರುಗಳು ಮುಂದೆ ದೊಡ್ಡ ಟ್ರೆಂಡ್ ಸೃಷ್ಟಿ ಮಾಡುತ್ತದೆ. ಅದೇ ರೀತಿ ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ 'ಕೆ ಜಿ ಎಫ್' ಸಿನಿಮಾಗಾಗಿ ಯಶ್ ಅವರಿಗಾಗಿ ಒಂದು ವಿಶೇಷ ಬೈಕ್ ಬಗ್ಗೆ ಪ್ಲಾನ್ ಮಾಡಿದ್ದರು.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಸುಮಾರು 70 ಮತ್ತು 80ರ ದಶಕದಲ್ಲಿದ್ದ ಕ್ಲಾಸಿಕ್ ಬೈಕ್ ವಿನ್ಯಾಸವನ್ನ ಹೊಂದಿರುವ ಈ ಮಾಡಿಫೈಡ್ ಬೈಕ್ ಯಾವುದು.? ಯಶ್ ಅವರ ಸಿನಿಮಾದಲ್ಲಿ ಕಾಣಿಸಿಕೊಂಡ ಈ ಬೈಕ್ ಹೇಗೆ ರೆಡಿ ಆಯ್ತು.? ಇದನ್ನು ತಯಾರು ಮಾಡಿದವರು ಯಾರು? ಎಂಬ ಕುತೂಹಲಕಾರಿ ವಿಷಯಗಳು ಸದ್ಯ ರಿವೀಲ್ ಆಗಿವೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಬೈಕ್ ರೆಡಿ ಮಾಡಿದ್ದು ಯಾರು.?

'ಕೆ ಜಿ ಎಫ್' ಸಿನಿಮಾದಲ್ಲಿ ಯಶ್ ಅವರಿಗೆ ವಿಶೇಷ ಬೈಕ್ ರೆಡಿ ಮಾಡಿರುವುದು ಭುವನ್ ಗೌಡ. ಭುವನ್ 'ಕೆ ಜಿ ಎಫ್' ಸಿನಿಮಾ ಸಿನಿಮಾಟೋಗ್ರಾಫರ್ ಕೂಡಾ ಆಗಿದ್ದು, ಚಿತ್ರಕ್ಕಾಗಿ ಒಂದು ಬೈಕ್ ಡಿಸೈನ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಸೊಗಸಾಗಿರುವ ಈ ಬೈಕ್ ಈಗ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಅಸಲಿಗೆ ಈ ಮಾಡಿಫೈಡ್ ಬೈಕ್ ಯಾವುದು.?

ಭುವನ್‍‍ರವರು ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 500ಸಿಸಿ ಬೈಕ್ ತೆಗೆದುಕೊಂಡು ಅದರ ಎಂಜಿನ್ ಮಾತ್ರ ಬಳಸಿಕೊಂಡು ಮಾಡಿಫೈ ಮಾಡಿಸಿದ್ದಾರೆ. ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ನಲ್ಲಿರುವ ಬೇಗ್ ಎನ್ನುವ ಗ್ಯಾರೇಜ್ ನಲ್ಲಿ ಬೈಕಿಗೆ ಹೊಸ ರೂಪ ನೀಡಲಾಗಿದೆ. ಈ ಕೆಲಸದಲ್ಲಿ ಭುವನ್ ಅವರಿಗೆ ಬೇಗ್ ಮತ್ತು ಆಕಾಶ್ ಇಬ್ಬರೂ ಸಾಥ್ ನೀಡಿದ್ದಾರೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಬೆರಗಾದ ಯಶ್

ಬೈಕ್ ರೆಡಿ ಆದ ಬಳಿಕ ಭುವನ್ ಅದನ್ನು 'ಕೆ ಜಿ ಎಫ್' ಚಿತ್ರೀಕರಣದ ಸೆಟ್ ಗೆ ತೆಗೆದುಕೊಂಡು ಹೋದರಂತೆ. ಆಗ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಬೈಕ್ ನೋಡಿ ಆಶ್ವರ್ಯಗೊಂಡಿದ್ದಾರೆ. ಬೈಕ್ ಡಿಸೈನ್ ಅನ್ನು ಇಬ್ಬರೂ ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಕಲ್ಪನೆಯಂತೆ ಬೈಕ್ ಸಿದ್ಧಗೊಂಡಿದ್ದು, ಬೈಕ್ ನೋಡಿದ ತಕ್ಷಣ ಕುತೂಹಲ ತಾಳಲಾರದೆ ಯಶ್ ಅದರ ಮೇಲೆ ಹತ್ತಿ ಸವಾರಿ ಮಾಡಿದ್ದಾರೆ.

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಕೆಜಿಎಫ್ ಸಿನಿಮಾದ ಚೀತ್ರಿಕರಣ ಬಹಳ ನಿಧಾನವಾಗಿ ನಡೆದ ವಿಷಯ ನಮಗೆಲ್ಲಾ ತಿಳಿದೆ ಇದೆ ಆದರೆ ಈ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ ಬೈಕ್ ಅನ್ನು ಮಾಡಿಫೈ ಮಾಡಲು ಸುಮಾರು ಆರು ತಿಂಗಳ ಸಮಯ ತೆಗೆದುಕೊಳ್ಳಲಾಗಿದೆ ಎಂದರೆ ನೀವು ನಂಬಲೇಬೇಕು.

MOST READ: ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಯಶ್ ಜೊತೆ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ರಾಕಿ ಬೈಕ್‍ನ ವಿಶೇಷತೆ ಏನು.?

ಒಟ್ಟಿನಲ್ಲಿ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ 'ಕೆಜಿಎಫ್' ಸಿನಿಮಾ ಎಷ್ಟು ದಾಖಲೆಗಳನ್ನ ಬ್ರೇಕ್ ಮಾಡಲಿದೆ ಮತ್ತು ಈ ಸಿನಿಮಾ ಯಶ್ ಕೆರಿಯರ್‌ಗೆ ಯಾವ ರೀತಿಯ ತಿರುವು ನೀಡಲಿದೆ ಎಂಬುವುದನ್ನ ಕಾಯ್ದು ನೋಡಬೇಕಿದೆ.

More from DriveSpark

Article Published On: Thursday, November 29, 2018, 11:54 [IST]
English summary
Yashs KGF Movie Bike Is Designed By Cinematographer Bhuvan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+