25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯಾ ದೇಶವು ಎಷ್ಟೇ ಮುಂದುವರಿದರೂ ಧರ್ಮದ ಕಟ್ಟುಪಾಡುಗಳಿಂದಾಗಿ ಅಲ್ಲಿನ ಪ್ರತಿಯೊಬ್ಬ ಮುಸ್ಲಿಂ ಮಹಿಳೆಯರು ಸಮಾನತೆಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ.

By Praveen

ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯಾ ದೇಶವು ಎಷ್ಟೇ ಮುಂದುವರಿದರೂ ಧರ್ಮದ ಕಟ್ಟುಪಾಡುಗಳಿಂದಾಗಿ ಅಲ್ಲಿನ ಪ್ರತಿಯೊಬ್ಬ ಮುಸ್ಲಿಂ ಮಹಿಳೆಯರು ಸಮಾನತೆಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಅಂತಯೇ 25 ವರ್ಷಗಳ ಹಿಂದೆ ಮಹಿಳೆಯರ ಮೇಲೆ ವಿಧಿಸಲಾಗಿದ್ದ ಕಾರು ಚಾಲನೆಯ ಮೇಲಿನ ನಿರ್ಬಂಧವನ್ನು ಇದೀಗ ತೆಗೆದುಹಾಕಲಾಗಿದೆ.

25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಕಳೆದ 25 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರು ಕಾರು ಚಾಲನೆ ಮಾಡುವುದು ಧರ್ಮದ ಕಟ್ಟುಪಾಡುಗಳಿಗೆ ವಿರುದ್ಧ ಎಂದು ತೀರ್ಪು ನೀಡಿದ್ದ ಅಂದಿನ ಸೌದಿ ಸರ್ಕಾರವು, ಕಾರು ಚಾಲನೆಯ ಮೇಲೆ ನಿರ್ಬಂಧ ವಿಧಿಸಿತ್ತು.

25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಆದ್ರೆ ಬದಲಾದ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ವ್ಯವಸ್ಥೆ ಅಡಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿರುವ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರು ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಗೆ ಅವಕಾಶ ನೀಡಿದ್ದಾರೆ.

25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಕಾರು ಚಾಲನೆಗೆ ಅವಕಾಶ ನೀಡುವಂತೆ ಅಲ್ಲಿನ ಮಹಿಳೆಯರು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಫಲವಾಗಿ ಈ ಅವಕಾಶ ಸಿಕ್ಕಿದ್ದು, ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರ ದಿಟ್ಟ ನಿರ್ಧಾರಕ್ಕೆ ಇಡಿ ವಿಶ್ವ ಸಮುದಾಯವೇ ಪ್ರಸಂಶೆ ವ್ಯಕ್ತಪಡಿಸಿದೆ.

25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಹೀಗಾಗಿ ಹೊಸ ಕಾನೂನು ಮುಂದಿನ 30 ದಿನಗಳಲ್ಲಿ ಅಧಿಕೃತವಾಗಿ ಜಾರಿ ಬರುತ್ತಿದ್ದು, ಇನ್ಮುಂದೆ ಮಸ್ಲಿಂ ಮಹಿಳೆಯರು ಸೌದಿ ರಾಷ್ಟ್ರಗಳಲ್ಲಿ ಸ್ವತಂತ್ರವಾಗಿ ಕಾರು ಚಾಲನೆ ಮಾಡಬಹುದಾಗಿದೆ ಎಂದು ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಪ್ರಕಟನೆ ಹೊರಡಿಸಿದ್ದಾರೆ.

25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಈ ಹಿನ್ನೆಲೆ ಮುಸ್ಲಿಂ ಮಹಿಳೆಯರು ಸೌದಿ ದೊರೆಯ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದು, ಧರ್ಮದ ಹೆಸರಿನಲ್ಲಿ ಇಷ್ಟು ದಿನಗಳ ಕಾಲ ಕಾರು ಚಾಲನೆಗೆ ವಿಧಿಸಿದ್ದ ನಿರ್ಬಂಧದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

25 ವರ್ಷಗಳ ನಂತರ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಾರು ಚಾಲನೆಯ ಭಾಗ್ಯ..!!

ಒಟ್ಟಿನಲ್ಲಿ 25 ವರ್ಷಗಳ ನಂತರ ಸೌದಿ ಮಹಿಳೆಯರ ಪರವಾಗಿ ಅಲ್ಲಿನ ಸರ್ಕಾರ ಮಹತ್ವದ ತೀರ್ಪು ಒಂದನ್ನು ಪ್ರಕಟಿಸಿದ್ದು, ಮಹಿಳೆ ಮತ್ತು ಪುರಷರ ನಡುವಿನ ಸಮಾನತೆಗಾಗಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಕೈಗೊಂಡ ಕ್ರಮ ವಿಶ್ವದ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದ್ದಾರೆ ಎನ್ನಬಹುದು.

Most Read Articles

Kannada
English summary
Read in Kannada about Saudi Arabia will lift its ban on women drivers. Click for More Details...
Story first published: Thursday, September 28, 2017, 11:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X