ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಅಪಘಾತಗಳಿಗೆ ಸಂಬಂಧಿಸಿದ ಹಲವಾರು ವೀಡಿಯೊಗಳು ಇಂಟರ್ ನೆಟ್'ನಲ್ಲಿ ಸಿಗುತ್ತವೆ. ಈ ಸಾಲಿಗೆ ಹೊಸ ವೀಡಿಯೊವೊಂದು ಸೇರ್ಪಡೆಯಾಗಿದೆ. ಇತರ ಅಪಘಾತ ವೀಡಿಯೊಗಳಂತೆ ಈ ವೀಡಿಯೊದಲ್ಲಿರುವ ದೃಶ್ಯಗಳು ಸಹ ರಸ್ತೆಬದಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಇನ್ನೇನು ಅಪಘಾತ ಸಂಭವಿಸಲಿದೆ ಎಂಬುದನ್ನು ಗ್ರಹಿಸಿದ ಸ್ಕೂಟರ್ ಸವಾರ ತನ್ನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೇರಳದಲ್ಲಿ ನಡೆದ ಈ ಘಟನೆಯ ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊ ವೈರಲ್ ಆಗುತ್ತಿದೆ.

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಸ್ಕೂಟರ್ ಸವಾರ ಸಿಗ್ನಲ್'ನಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ ಈ ಘಟನೆ ಕೇರಳದ ಇರಿಂಜಲಕುಡ ಪ್ರದೇಶದಲ್ಲಿ ನಡೆದಿದೆ. ಅಪಘಾತಕ್ಕೆ ಕೆಲವು ಸೆಕೆಂಡುಗಳ ಮುನ್ನ ಆಟೋ ಹಾಗೂ ಸ್ಕೂಟರ್ ರಸ್ತೆ ದಾಟಲು ಕಾಯುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಹೀಗೆ ಕಾಯುವ ವೇಳೆ ಸ್ಕೂಟರ್ ಸವಾರ ಏಕಾಏಕಿ ಮುಂದೆ ಚಲಿಸುತ್ತಾನೆ. ತಕ್ಷಣವೇ ವೇಗವಾಗಿ ಬಂದ ಮಿನಿ ಟ್ರಕ್ ಡಿವೈಡರ್ ಮೇಲೆ ಏರಿ ಅಲ್ಲಿದ್ದ ಲೈಟ್ ಕಂಬಕ್ಕೆ ಗುದಿಯುತ್ತದೆ.

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಮಿನಿ ಟ್ರಕ್ ಬರುವುದನ್ನು ನೋಡದೆ ಯುವಕ ಆ ಸ್ಥಳದಲ್ಲಿಯೇ ಉಳಿದಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆಗಳಿದ್ದವು. ಮಿನಿ ಟ್ರಕ್ ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದನ್ನು ಗಮನಿಸಿದ ಸ್ಕೂಟರ್ ಸವಾರ ಅಲ್ಲಿಂದ ತೆರಳಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಇದರಿಂದಾಗಿ ಯಾವುದೇ ಗಾಯಗಳಿಲ್ಲ. ಮಿನಿ ಟ್ರಕ್ ಡಿವೈಡರ್'ಗೆ ಗುದ್ದಿ ನೆಲಕ್ಕೆ ಉರುಳಿದ ನಂತರ ಸಿಗ್ನಲ್'ನಲ್ಲಿ ಕಾಯುತ್ತಿದ್ದ ಸ್ಕೂಟರ್ ಸವಾರ ಅದೇ ಜಾಗಕ್ಕೆ ಮರಳಿ, ಮಿನಿ ಟ್ರಕ್'ನಲ್ಲಿದ್ದವರ ನೆರವಿಗೆ ಧಾವಿಸುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಈ ಘಟನೆ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿಗಳು, ಯುವಕ ನಿಜಕ್ಕೂ ಅದೃಷ್ಟಶಾಲಿ. ಈ ಕಾರಣಕ್ಕೆ ಅವನು ದೊಡ್ಡ ಅಪಘಾತದಿಂದ ಪಾರಾಗಿದ್ದಾನೆ ಎಂದು ಹೇಳಿದ್ದಾರೆ. ಅಪಘಾತದಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಮಿನಿ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಗಣನೀಯವಾಗಿ ಹೆಚ್ಚುತ್ತಿವೆ. ವಾಹನ ಚಾಲಕರ ನಿರ್ಲಕ್ಷ್ಯವೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಇದರ ಜೊತೆಗೆ ಹದಗೆಟ್ಟ ರಸ್ತೆಗಳು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಸ್ಕೂಟರ್ ಸವಾರ

ಇದರ ಪರಿಣಾಮವಾಗಿ ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಅಪಘಾತಗಳು ಸಂಭವಿಸುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲು ಹಾಕುತ್ತಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಹಲವಾರು ತೆಗೆದುಕೊಳ್ಳುತ್ತಿದೆ.

ಮೂಲ: ಆವೂ ವೀಡಿಯೊಸ್ / ಯೂಟ್ಯೂಬ್

Most Read Articles

Kannada
English summary
Scooterist misses major accident in traffic signal. Read in Kannada.
Story first published: Tuesday, March 30, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X