ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

By Nagaraja

ನೀರು ಹಕ್ಕಿಗಳು (seagull) ಬೆಳ್ಳಕ್ಕಿ ತರಹನೇ ದೊಡ್ಡದಾದ ದೇಹ, ಉದ್ದವಾದ ಕಾಲುಗಳೂ ಹಾಗೂ ಕುತ್ತಿಗೆಯನ್ನು ಹೊಂದಿರುತ್ತದೆ. ಆದರೆ ಮೋಟಾರು ರೇಸಿಂಗ್ ಟ್ರ್ಯಾಕ್‌ನಲ್ಲಿ ನಡೆದ ಆಕಸ್ಮಾತ್ ದುರ್ಘಟನೆವೊಂದಕ್ಕೆ ಚೆಂದದ ನೀರು ಹಕ್ಕಿಯೊಂದು ಬಲಿಯಾದ ಘಟನೆ ವರದಿಯಾಗಿದೆ.

ಪರಿಸರ ಸ್ನೇಹಿಗಳಿಗಂತೂ ಈ ವೀಡಿಯೋ ತುಂಬಾ ಬೇಸರದ ಸನ್ನಿವೇಶಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ಸಾಗಿದ ಮೊಟೊ ಗ್ರ್ಯಾನ್ ಪ್ರಿಯಲ್ಲಿ ಇದು ನಡೆದಿದೆ. ವೀಡಿಯೋ ಹಾಗೂ ವಿವರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

ಆಸ್ಟ್ರೇಲಿಯನ್ ಮೊಟೊಜಿಪಿ ಅರ್ಹತಾ ಸುತ್ತಿನ ರೇಸಿಂಗ್ ವೇಳೆ ನೀರು ಹಕ್ಕಿಯೊಂದು ಅವಘಡಕ್ಕೆ ಸಿಲುಕಿತ್ತು.

ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

ಜಾರ್ಜ್ ಲಾರೆನ್ಜೊ ಎಂಬ ರೇಸ್ ಚಾಲಕ ತಮ್ಮ ಬೈಕ್‌ನಲ್ಲಿ ಶರವೇಗದಲ್ಲಿ ಚಲಿಸುತ್ತಿದ್ದರಲ್ಲದೆ ಸಮೀಪ ಸ್ಪರ್ಧಿಗಿಂತಲೂ ಉತ್ತಮ ಆವೇಗ ಕಾಯ್ದುಕೊಳ್ಳುವುದರಲ್ಲಿ ಗಮನ ಕೇಂದ್ರತರಾಗಿದ್ದರು.

ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

ಈ ಸಂದರ್ಭದಲ್ಲಿ ರೇಸ್ ಟ್ರ್ಯಾಕ್‌ನಲ್ಲಿ ಚಕ್ಕಂದವಾಡುತ್ತಿದ್ದ ಶ್ವೇತ ವರ್ಣದ ನೀರು ಹಕ್ಕಿಯ ಕಿವಿಯಲ್ಲಿ ಮೋಟಾರು ಬೈಕ್ ಆಗಮನವಾಗುವ ರುಯಿಂ ರುಯಿಂ ಶಬ್ದ ಗುಣು ಗುಟ್ಟಲು ತೊಡಗಿತು.

ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

ಅಪಾಯವನ್ನರಿತ ಹಕ್ಕಿ ಇನ್ನೇನು ಜಾಗ ಖಾಲಿ ಮಾಡುತ್ತಿರುವಂತೆಯೇ ಶರವೇಗದಲ್ಲಿ ಆಗಮಿಸಿದ ಬೈಕ್‌ ರೇಡಿಯರ್‌ನೊಳಗೆ ಸಿಕ್ಕಿಹಾಕಿಕೊಂಡಿತ್ತು. ನಿಮ್ಮ ಮಾಹಿತಿಗಾಗಿ, ಕಾರಿನಂತಹ ರೇಡಿಯರ್‌ಗಳನ್ನು ಗರಿಷ್ಠ ನಿರ್ವಹಣೆಯ ರೇಸಿಂಗ್ ಬೈಕ್‌ಗಳಿಗೂ ಆಳವಡಿಸಲಾಗುತ್ತದೆ.

ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

ಆದರೆ ಚಾಲಕ ಮಾತ್ರ ವೇಗ ಕಡಿಮೆ ಮಾಡುವ ಗೋಜಿನಲ್ಲಿರಲಿಲ್ಲ. ಇನ್ನೇನು ಕ್ಷಣಾರ್ಧದಲ್ಲಿ ಹಕ್ಕಿ ಪ್ರಾಣ ಕಳೆದುಕೊಂಡಿದೆ.

ಹೀಗೊಂದು ದುರ್ಘಟನೆ; ರೇಸಿಂಗ್ ಬಿಸಿಗೆ ನೀರು ಹಕ್ಕಿ ಬಲಿ

ಕೊನೆಗೂ ಅರ್ಹತಾ ಸುತ್ತಿನ ರೇಸಿಂಗ್‌ನಲ್ಲಿ ಮೊದಲಿಗರೆನಿಸಿಕೊಳ್ಳಲು ರೇಸರ್ ಯಶಸ್ವಿಯಾಗಿದ್ದಾರೆ. ಅಷ್ಟೇ ಯಾಕೆ ಮೊದಲ ಲ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಕ್ಕಿ ಕೊನೆಯ ಸುತ್ತಿನ ವರೆಗೂ ಬೈಕ್‌ನಲ್ಲೇ ಸಿಕ್ಕಿಬಿದ್ದಿತ್ತು. ಒಟ್ಟಿನಲ್ಲಿ ಜೀವ ಕಳೆದುಕೊಂಡ ನೀರು ಹಕ್ಕಿಗೆ ಕಿಂಚಿತ್ತು ಬೆಲೆಯಿಲ್ಲದಂತಾಗಿದೆ.

ವೀಡಿಯೊ ವೀಕ್ಷಿಸಿ

More from DriveSpark

Article Published On: Friday, October 25, 2013, 12:45 [IST]
English summary
Seagull Gets Sucked Into Lorenzo’s Bike During Australian MotoGP
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+