ಪಾಕ್, ಚೀನಾಗೆ ಚಳ್ಳೆ ಹಣ್ಣು ತಿನ್ನಿಸಿ ಗುಟ್ಟಾಗಿ ಐಎನ್‌ಎಸ್ ಅರಿಹಂತ್ ನಿಯೋಜಿಸಿದ ಭಾರತ
ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಗೌಪ್ಯವಾಗಿ ಐಎನ್ ಎಸ್ ವಿಕ್ರಾಂತ್ ಸಾಗರದಲ್ಲಿ ನಿಯೋಜಿಸಲಾಗಿದೆ.
ದಕ್ಷಿಣ ಏಷ್ಯಾ ಸಾಗರ ವಲಯದಲ್ಲಿ ಪ್ರಭುತ್ವ ಸಾಧಿಸಲು ಹೊರಟಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಭಾರತ ತಕ್ಕ ಉತ್ತರವನ್ನೇ ನೀಡಿದೆ. ಭಾರತವು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಅತ್ಯಂತ ಗೌಪ್ಯವಾಗಿ ಅಣು ಶಕ್ತಿ ಚಾಲಿತ ಅತ್ಯಾಧುನಿಕ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿ ಯುದ್ಧ ನೌಕೆಯನ್ನು ನಿಯೋಜಿಸುವ ಮೂಲಕ ಸಾಗರದಲ್ಲಿ ಪ್ರಭುತ್ವವನ್ನು ಸಾಧಿಸಿದೆ. ಇದು ಭಾರತದತ್ತ ಟೊಂಕು ಕಟ್ಟಿ ನಿಂತಿರುವ ಇತ್ತ ದೇಶಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಐಎನ್ಎಸ್ ಅರಿಹಂತ್ ಭಾರತದ ಅಣು ಶಕ್ತಿ ಚಾಲಿತ ಅತ್ಯಾಧುನಿಕ ಜಲಾಂತರ್ಗಾಮಿ ಯುದ್ಧ ನೌಕೆಯಾಗಿದೆ. ಸುಧಾರಿತ ತಂತ್ರಜ್ಞಾನ ನೌಕೆ ಅಥವಾ ಅಡ್ವಾನ್ಸ್ಡ್ ಟೆಕ್ನಾಲಜಿ ವೆಸಲ್ ಯೋಜನೆಯಡಿಯಲ್ಲಿ ಬಾರತದ ಮೊದಲ ಸ್ವದೇಶಿ ನಿರ್ಮಿತ ಪರಮಾಣ ಜಲಾಂತರ್ಗಾಮಿ ನೌಕೆ ಇದಾಗಿದೆ.

ಈ ಹಿಂದೆ ಕಾರ್ಗಿಲ್ ಯುದ್ಧ ವಿಜಯ ದಿವಸದ ಶುಭ ಸಂದರ್ಭದಲ್ಲಿ 2009 ಜುಲೈ 26ರಂದು ಅಂದಿನ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪತ್ನಿ ಗುರ್ಶರನ್ ಕೌರ್ ಅವರು ಐಎನ್ ಎಸ್ ಹರಿಹಂತ್ ಯುದ್ಧ ನೌಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಭಾರತ ನೌಕಾ ಸೇನೆಯನ್ನು ಸೇರುವ ಮೊದಲು ವ್ಯಾಪಕ ಸಮರಾಭ್ಯಾಸ ಮತ್ತು ಪ್ರಯೋಗ ಪರೀಕ್ಷೆಗಳಿಗೆ ಒಳಗಾಗಿದೆ.

6 ಸಾವಿರ ಟನ್ ತೂಕದ ಜಲಾಂತರ್ಗಾಮಿ ಯುದ್ಧ ನೌಕೆ ಸೇರ್ಪಡೆಯೊಂದಿಗೆ ಭಾರತ ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಪಡೆದಂತಾಗಿದೆ.

ಅರಿಹಂತ್ ಎಂಬ ಸಂಸ್ಕೃತ ಪದವು 'ವೈರಿಗಳ ಹಂತಕ' ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಸಾಗರಿಕ ಎನ್ನುವ ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸುವ ಕ್ಷಿಪಣಿಗಳನ್ನು ಕೊಂಡೊಯ್ಯಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಇದನ್ನು ಕ್ಷಿಪಣಿ ಉಡ್ಡಯನ ಜಲಾಂತರ್ಗಾಮಿ ನೌಕೆ ಎಂದೂ ಕರೆಯಲಾಗುತ್ತದೆ.

ವಿಶಾಖಪಟ್ಟಣದ ಶಿಪ್ ಬಿಲ್ಡಿಂಗ್ ಕೇಂದ್ರದಲ್ಲಿ ಸುಧಾರಿತ ತಂತ್ರಜ್ಞಾನ ನೌಕೆ ಯೋಜನೆಯಡಿಯಲ್ಲಿ ಅರಿಹಂತ್ ಶ್ರೇಣಿಯ ಪರುಮಾಣು ಚಾಲಿತ ಜಲಾಂತರ್ಗಾಮಿ ಯುದ್ಧ ನೌಕೆಯನ್ನು ನಿರ್ಮಿಸಲಾಗಿದೆ.

2016 ಫೆಬ್ರವರಿ 23ರಂದು ಕಾರ್ಯಾಚರಣೆಗೆ ಸಿದ್ಧಗೊಂಡಿರುವ ಐಎನ್ ಎಸ್ ಅರಿಹಂತ್, 2016 ಆಗಸ್ಟ್ ತಿಂಗಳಲ್ಲಿ ಸೇವೆಯನ್ನು ಆರಂಭಿಸಿದೆ ಎಂದು ನಿಕಟು ಮೂಲಗಳು ಖಚಿತಪಡಿಸಿದೆ.

ಭಾರತೀಯ ನೌಕಾಪಡೆಯ ರಹಸ್ಯ ಸುಧಾರಿತ ತಂತ್ರಜ್ಞಾನ ನೌಕೆ ಯೋಜನೆಯಡಿಯಲ್ಲಿ ಅಕುಲಾ ಶ್ರೇಣಿಯ ಜಲಾಂತರ್ಗಾಮಿ ತಳಹದಿಯಲ್ಲಿ ನಿರ್ಮಿಸಲಾಗಿದೆ.

ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಪನ್ನವಾಗಿರುವ ಐಎನ್ ಎಸ್ ಅರಿಹಂತ್ ನ 100ರಷ್ಟು ಸಿಬ್ಬಂದಿಗಳಿಗೆ ರಷ್ಯಾದ ವಿಶೇಷ ತಜ್ಞರು ತರಬೇತಿಯನ್ನು ನೀಡಿದ್ದಾರೆ.

ಇದರೊಂದಿಗೆ ಭಾರತ ಸಹ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿ ಉಡಾವಣಾ ತಂತ್ರಜ್ಞಾನ ಹೊಂದಿರುವ (ನ್ಯೂಕ್ಲಿಯರ್ ಟ್ರಯಾಡ್) ವಿಶ್ವದ ಕೆಲವೇ ಕೆಲವು ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಸೇರಿಕೊಂಡಿದೆ.

ಇಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಮೆರಿಕ ಜೊತೆಗೆ ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳು ಮಾತ್ರ ಹೊಂದಿದೆ.

ಐಎನ್ ಎಸ್ ಹರಿಹಂತ್ ಲಂಬವಾಗಿ ಗುರಿಯಿಡಬಹುದಾದ ನಾಲ್ಕು ಲಾಂಚ್ ಟ್ಯೂಬ್ ಗಳನ್ನು ಪಡೆದಿದೆ. ಪ್ರತಿಯೊಂದು ಲಾಂಚ್ ಟ್ಯೂಬ್ ನಲ್ಲಿ ತಲಾ ಮೂರರಂತೆ ಒಟ್ಟು 12 ಕೆ ಸಿರೀಸ್ ಕ್ಷಿಪಣಿಯನ್ನು ಪ್ರಯೋಗಿಸಬಹುದಾಗಿದೆ.

ಕಿರಿದಾದ ಕೆ-15 ಕ್ಷಿಪಣಿ ಅಥವಾ ದೊಡ್ಡದಾದ ಕೆ-4 ಸಿರೀಸ್ ಮಿಸೈಲ್ ಗಳನ್ನು ಅರಿಹಂತ್ ಕೊಂಡೊಯ್ಯಲಾಗಿದೆ. ಕೆ-4 ಕ್ಷಿಪಣಿಗಳು 3,500 ಕೀ.ಮೀ. ವ್ಯಾಪ್ತಿಯ ವರೆಗೂ ಗುರಿಯಿಡಲು ಸಮರ್ಥವೆನಿಸಿಕೊಂಡಿದೆ.

2016 ಆಗಸ್ಟ್ ತಿಂಗಳಲ್ಲಿ ಬಹಳ ಗೌಪ್ಯವಾಗಿಟ್ಟುಕೊಂಡು ಐಎನ್ ಎಸ್ ಅರಿಹಂತ್ ಯುದ್ಧ ನೌಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಗೆ ಸೇವೆಗೆ ನಿಯುಕ್ತಿಗೊಳಿಸಿದ್ದಾರೆ.

ಆದರೆ ಐಎನ್ ಎಸ್ ಹರಿಹಂತ್ ಪರಮಾಣು ಶಕ್ತಿಯ ಜಲಾಂತರ್ಗಾಮಿ ನೌಕೆಯನ್ನು ನಾವಿಕ ಪಡೆದೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆ ಈ ವರದಿಯನ್ನು ದೃಢಪಡಿಸಿಲ್ಲ ಅಥವಾ ತಳ್ಳಿ ಹಾಕಿಲ್ಲ.

ಐಎನ್ ಎಸ್ ಅರಿಹಂತ್ ಹಂತ ಹಂತವಾಗಿ ತನ್ನ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿತ್ತು. ಇದು ಮೇಲ್ಭಾಗದಲ್ಲಿ 22.28 ಹಾಗೂ ಸಮುದ್ರಾಳದಲ್ಲಿ 44 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಅತಿ ಹೆಚ್ಚು ಒತ್ತಡವನ್ನುಂಟು ಮಾಡುವ 83 ಮೆಗಾವ್ಯಾಟ್ (111,305 ಅಶ್ವಶಕ್ತಿ) ಲೈಟ್ ವಾಟರ್ ರಿಯಾಕ್ಟರ್ ಗಳಿಂದ ಐಎನ್ ಎನ್ ಅರಿಹಂತ್ ನಿಯಂತ್ರಿಸ್ಪಡುತ್ತದೆ.

ಅರಿಹಂತ್ ಶ್ರೇಣಿಯಲ್ಲಿ ಇನ್ನೂ ನಾಲ್ಕು ಜಲಾಂತರ್ಗಾಮಿ ನೌಕೆಗಳನ್ನು ಭಾರತ ನಿರ್ಮಿಸಲಿದೆ. ತನ್ಮೂಲಕ ಭಾರತ ಉಪಖಂಡದ ಸುತ್ತಲೂ ಸಾಗರ ಪರಿಧಿಯಲ್ಲಿ ಭದ್ರ ರಕ್ಷಣಾ ಕೋಟೆಯನ್ನು ನಿರ್ಮಿಸಲಿದೆ. ಇದರೊಂದಿಗೆ ಮುಂಬೈನಂತಹ ಉಗ್ರ ದಾಳಿ ಇನ್ನು ಮರುಕಳಿಸಲಾರದು.

ಇವನ್ನೂ ಓದಿ
01. ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು
02. ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು
03. ಚೀನಾ ಮಿಸೈಲ್ ಪರೀಕ್ಷೆ; ಭಾರತದಲ್ಲೂ ಮಡುಗಟ್ಟಿದ ಆತಂಕ


Click it and Unblock the Notifications








