ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಕಳೆದ ವರ್ಷ ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಗ್ರಾಹಕ ತಂತ್ರಜ್ಞಾನ ಉತ್ಪನ್ನ ತಯಾರಕರಿಂದ ಚಿಪ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಯಿತು. ಚಿಪ್ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬೇಡಿಕೆಗೆ ತಕ್ಕಂತೆ ಬದಲಾಯಿಸಿದವು.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಆಟೋ ಉದ್ಯಮವು ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಮೈಕ್ರೋಚಿಪ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಯಿತು. ಈ ಸಂದರ್ಭದಲ್ಲಿ ಚಿಪ್ ತಯಾರಕ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಚಿಪ್ ಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಸಾಕಷ್ಟು ಸಮಸ್ಯೆ ಎದುರಾಯಿತು. ಚಿಪ್ ಬಿಕ್ಕಟ್ಟು ಆರಂಭವಾದ ನಂತರ ಸ್ಥಳೀಯವಾಗಿ ಚಿಪ್ ಉತ್ಪಾದನಾ ಘಟಕಗಳನ್ನು ತೆರೆಯುವ ಬಗ್ಗೆ ಚರ್ಚೆಗಳಾದವು.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಸೆಮಿಕಂಡಕ್ಟರ್ ಚಿಪ್ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಇತ್ತೀಚೆಗೆ ರೂ. 76 ಸಾವಿರ ಕೋಟಿಗಳ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್ಐ ಯೋಜನೆ) ಘೋಷಿಸಿದೆ. ಈಗ ಹೊಸದಾಗಿ ಅನುಮೋದಿಸಲಾದ ಪಿಎಲ್ಐ ಯೋಜನೆಯಿಂದಾಗಿ ಚಿಪ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಗಳಿವೆ. ಮುಂದಿನ 2 - 3 ವರ್ಷಗಳಲ್ಲಿ ದೇಶಿಯ ಅಗತ್ಯಕ್ಕಾಗಿ ಸೆಮಿಕಂಡಕ್ಟರ್'ಗಳ ಉತ್ಪಾದನೆಯನ್ನು ದೇಶದಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗಿದೆ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಚಿಪ್ ಉತ್ಪಾದನಾ ಉದ್ಯಮದಲ್ಲಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಮುಂದಿನ ವರ್ಷದ ಜನವರಿಯಿಂದ ಪಿ‌ಎಲ್‌ಐ ಯೋಜನೆಯಡಿ ಅರ್ಜಿಗಳನ್ನು ತೆಗೆದುಕೊಳ್ಳಲಿದೆ. ಅನುಮೋದಿತ ಪಿಎಲ್‌ಐ ಯೋಜನೆಯು ಮುಂದಿನ ಐದರಿಂದ ಆರು ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗಾಗಿ ರೂ. 76,000 ಕೋಟಿಗಳ ಹೂಡಿಕೆಯನ್ನು ಕಲ್ಪಿಸುತ್ತದೆ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು, ವಿನ್ಯಾಸ ಹಾಗೂ ಪ್ಯಾಕೇಜಿಂಗ್ ಕಂಪನಿಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಅನುಮೋದಿಸಲ್ಪಡಲಿವೆ. ಇನ್ನು 2 - 3 ವರ್ಷಗಳಲ್ಲಿ ಸುಮಾರು 10 - 12 ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ವೈಷ್ಣವ್ ಜೈನ್ ಹೇಳಿದ್ದಾರೆ. ಈ ಅವಧಿಯಲ್ಲಿ ಸುಮಾರು 50 - 60 ಡಿಸೈನಿಂಗ್ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂದು ಅವರು ಹೇಳಿದರು.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಪ್ರಪಂಚದಾದ್ಯಂತ ವಾಹನ ಉದ್ಯಮವು ಬಿಡಿಭಾಗಗಳ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಚಿಪ್ ತಯಾರಿಕೆಗಾಗಿ ಪಿ‌ಎಲ್‌ಐ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ದೇಶದ ಆಟೋ ಮೊಬೈಲ್ ಉದ್ಯಮಕ್ಕೆ ಸಾಕಷ್ಟು ನೆರವಾಗುವ ನಿರೀಕ್ಷೆಗಳಿವೆ. ಕೋವಿಡ್ ಸಾಂಕ್ರಾಮಿಕದ ನಂತರ ಚಿಪ್ ಬೇಡಿಕೆಯು ಗಗನಕ್ಕೇರಿದೆ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಸೆಮಿಕಂಡಕ್ಟರ್‌ಗಳೆಂದರೇನು?

ಸೆಮಿಕಂಡಕ್ಟರ್‌ಗಳು ಸಿಲಿಕಾನ್‌ನಿಂದ ಮಾಡಿದ ಎಲೆಕ್ಟ್ರಾನಿಕ್ ಚಿಪ್‌ಗಳಾಗಿವೆ. ಕಾರುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಲ್ಲಿನ ಕರೆಂಟ್ ಅನ್ನು ನಿಯಂತ್ರಿಸಲು ಇವು ಸಹಾಯ ಮಾಡುತ್ತವೆ. ಈಗ ಸೆಮಿಕಂಡಕ್ಟರ್‌ಗಳು ಕಾರುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಕಾರುಗಳು ಸೆಮಿಕಂಡಕ್ಟರ್‌ಗಳನ್ನು ಹೊಂದಿವೆ. ಸೆಮಿಕಂಡಕ್ಟರ್‌ಗಳಿಲ್ಲದೇ ಕಾರುಗಳನ್ನು ಹೈಟೆಕ್ ಮಾಡಲು ಸಾಧ್ಯವಿಲ್ಲ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಡಿಸ್ ಪ್ಲೇ ಪ್ಯಾನೆಲ್‌, ನ್ಯಾವಿಗೇಷನ್, ಲೈಟ್‌, ಪವರ್ ಸ್ಟೀಯರಿಂಗ್ ಹಾಗೂ ಬಹುತೇಕ ಎಲ್ಲಾ ಸ್ವಯಂಚಾಲಿತ ಫೀಚರ್ ಗಳಿಗಾಗಿ ಕಾರ್‌ಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಬಳಸಲಾಗುತ್ತದೆ. ಚಿಪ್ ಕೊರತೆಯಿಂದಾಗಿ ಆಟೋಮೊಬೈಲ್ ಉದ್ಯಮದಲ್ಲಿ ಸೆಮಿಕಂಡಕ್ಟರ್‌ಗಳಿಗೆ ಕೊರತೆ ಎದುರಾಗಿದೆ. ಇದರಿಂದ ಕಾರುಗಳನ್ನು ನಿಗದಿತ ಸಂಖ್ಯೆಯಲ್ಲಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಸೆಮಿಕಂಡಕ್ಟರ್ ಕೊರತೆಗೆ ಕಾರಣಗಳು

ಸೆಮಿಕಂಡಕ್ಟರ್‌ಗಳನ್ನು ನೂರಾರು ವಿವಿಧ ರೀತಿಯ ಚಿಪ್‌ಗಳಿಂದ ತಯಾರಿಸಲಾಗುತ್ತದೆ. ಸದ್ಯಕ್ಕೆ ಉತ್ತಮ ಗುಣಮಟ್ಟದ ಚಿಪ್‌ಗಳನ್ನು Qualcomm Inc ಹಾಗೂ Intel Corp ನಂತಹ ಕಂಪನಿಗಳು ಪೂರೈಸುತ್ತವೆ. ಆದರೆ ಕರೋನಾ ಸಾಂಕ್ರಾಮಿಕವು ಕಂಪನಿಗಳ ಚಿಪ್‌ ಪೂರೈಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಸೆಮಿಕಂಡಕ್ಟರ್‌ಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಇದಲ್ಲದೆ ಸ್ಮಾರ್ಟ್‌ಫೋನ್‌, ಟಿವಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸೆಮಿಕಂಡಕ್ಟರ್‌ಗಳ ಬಳಕೆ ಹೆಚ್ಚಾಗಿದೆ, ಇದರಿಂದ ಉತ್ಪಾದನಾ ಕಂಪನಿಗಳು ನಿರೀಕ್ಷಿತ ಪ್ರಮಾಣದಲ್ಲಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕಾರುಗಳಲ್ಲಿ ಬಳಸುವ ಕೆಲವು ಸೆಮಿಕಂಡಕ್ಟರ್ ಚಿಪ್‌ಗಳ ಬೆಲೆ ಹೆಚ್ಚಾಗಿದೆ. ಕಾರುಗಳಲ್ಲಿರುವ ಡಿಸ್ ಪ್ಲೇ ಡ್ರೈವರ್ ಚಿಪ್‌ಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಇದನ್ನು ಟೆಲಿವಿಷನ್‌, ಲ್ಯಾಪ್‌ಟಾಪ್‌, ಕಾರು ಹಾಗೂ ವಿಮಾನಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಪವರ್ ಮ್ಯಾನೇಜ್‌ಮೆಂಟ್ ಚಿಪ್‌ಗಳಿಗೆ ಕೊರತೆ ಎದುರಾಗಿದೆ. ಇದರಿಂದ ಫೋರ್ಡ್ ಮೋಟಾರ್, ನಿಶಾನ್, ಫೋಕ್ಸ್‌ವ್ಯಾಗನ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಉತ್ಪಾದನೆಯನ್ನು ಕಡಿತಗೊಳಿಸಬೇಕಾಗಿದೆ. ಅಂದಾಜಿನ ಪ್ರಕಾರ, ಈ ಚಿಪ್‌ನ ಪೂರೈಕೆಯ ಕೊರತೆಯಿಂದಾಗಿ, ವಿಶ್ವದ ಕಾರು ಉದ್ಯಮವು ಈ ವರ್ಷ 60 ಶತಕೋಟಿ ಡಾಲರ್ ನಷ್ಟು ಅನುಭವಿಸಿದೆ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಪಿಎಲ್‌ಐ ಯೋಜನೆ ಬಗ್ಗೆ:

ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪಿಎಲ್‌ಐ ಯೋಜನೆಯನ್ನು ಆರಂಭಿಸಿದೆ. ದೇಶಿಯ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಸೆಮಿಕಂಡಕ್ಟರ್ ಚಿಪ್'ಗಳು

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ 2020 - 21ರ ಬಜೆಟ್‌ನಲ್ಲಿ 13 ಉದ್ಯಮ ವಲಯಗಳಿಗೆ ರೂ. 1.97 ಲಕ್ಷ ಕೋಟಿಗಳ ಪಿಎಲ್‌ಐ ಯೋಜನೆಯನ್ನು ಘೋಷಿಸಿತ್ತು. ಇದರಲ್ಲಿ ಆಟೋ ಮೊಬೈಲ್ ಉದ್ಯಮಕ್ಕೆ ಸುಮಾರು ರೂ. 57 ಸಾವಿರ ಕೋಟಿ ಘೋಷಿಸಲಾಗಿದೆ. ಭಾರತದಲ್ಲಿಯೇ ಸೆಮಿ ಕಂಡಕ್ಟರ್ ಉತ್ಪಾದನೆಯಾಗುವುದರಿಂದ ವಿದೇಶಗಳ ಮೇಲಿನ ಅವಲಂಬನೆ ತಪ್ಪಲಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Article Published On: Thursday, December 23, 2021, 14:50 [IST]
English summary
Semiconductor chips to be produced in india in next couple of years details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+