ಆತಂಕ: ಭಾರತದಲ್ಲಿ ರಸ್ತೆ ಅಪಘಾತಕ್ಕೆ ಪ್ರತಿ ಗಂಟೆಗೆ 17 ಮಂದಿ ಸಾವು

ಭಾರತದಲ್ಲಿ ರಸ್ತೆ ಅಪಘಾತ ಸಂಬಂಧಿತ ಸಾವಿನ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCBR) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2021ರಲ್ಲಿ ದೇಶದಲ್ಲಿ ಗಂಟೆಗೆ ಸುಮಾರು 46 ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಅಪಘಾತಕ್ಕೆ ಕಾರಣಗಳು, ಅದನ್ನು ತಡೆಯಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿಸಲಾಗಿದೆ.

ಮರ್ಸಿಡಿಸ್-ಬೆನ್ಜ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಇಂಡಿಯಾ (MBRDI) ತನ್ನ 3ನೇ ಆವೃತ್ತಿಯ ಸುರಕ್ಷಿತ ರಸ್ತೆ ಶೃಂಗಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಭಾಗವಾಗಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. NCBRನ ವರದಿಯ ಪ್ರಕಾರ, 2021ರಲ್ಲಿ 4,03,116 ತೀವ್ರ ರಸ್ತೆ ಅಪಘಾತಗಳು ಸಂಭವಿಸಿವೆ. ರಸ್ತೆ ಅಪಘಾತಗಳು 3,71,884 ಜನರು ತೀವ್ರವಾಗಿ ಗಾಯಗೊಂಡಿದ್ದು,1,55,622 ಸಾವುಗಳಿಗೆ ಕಾರಣವಾಗಿದೆ. ಅಲ್ಲದೆ, ದೇಶದಲ್ಲಿ 2021ರಲ್ಲಿ ಪ್ರತಿ ಗಂಟೆಗೆ ಸುಮಾರು 17 ರಸ್ತೆ ಅಪಘಾತ-ಸಂಬಂಧಿತ ಸಾವುಗಳು ದಾಖಲಾಗಿವೆ.

ಆತಂಕ: ಭಾರತದಲ್ಲಿ ರಸ್ತೆ ಅಪಘಾತಕ್ಕೆ ಪ್ರತಿ ಗಂಟೆಗೆ 17 ಮಂದಿ ಸಾವು

NCBR ವರದಿಯ ದತ್ತಾಂಶಗಳ ಮಾಹಿತಿಯನ್ನು ಉಲ್ಲೇಖಿಸಿ, ಮರ್ಸಿಡಿಸ್-ಬೆನ್ಜ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಇಂಡಿಯಾ ಕೂಡ ಈ ರಸ್ತೆ ಅಪಘಾತಗಳಿಗೆ ಕೆಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಭಾರತದಲ್ಲಿ ಶೇಕಡ 5 ರಷ್ಟು ಹೆದ್ದಾರಿಗಳಲ್ಲಿ ಬರೊಬ್ಬರಿ 60% ಸಾವು-ನೋವುಗಳು ದಾಖಲಾಗುತ್ತದೆ ಎಂದು ವರದಿ ಹೇಳುತ್ತದೆ. ಇದಕ್ಕೆ ಕೆಟ್ಟ ರಸ್ತೆಗಳು, ಅಸಮರ್ಪಕ ನಿರ್ವಹಣೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಸೇರಿದಂತೆ ಹಲವಾರು ಕಾರಣಗಳಿವೆ. ಇಷ್ಟೇ ಅಲ್ಲದೆ, ವಾಸ್ತವವಾಗಿ, ಅತಿ ವೇಗದ ಚಾಲನೆಯಿಂದ ಒಟ್ಟು ರಸ್ತೆ ಅಪಘಾತದಲ್ಲಿ
ಶೇಕಡ 60 ರಷ್ಟು ಸಂಭವಿಸಿವೆ.

ಮರ್ಸಿಡಿಸ್-ಬೆನ್ಜ್ ಈ ಶೃಂಗಸಭೆಯಲ್ಲಿ 2020ರ ಕೆಲವು ಮಾಹಿತಿಯನ್ನು ಸಹ ಹಂಚಿಕೊಂಡಿದೆ. ಓವರ್‌ಲೋಡ್ ಮಾಡಿದ ವಾಹನಗಳಿಂದ ಉಂಟಾದ ಅಪಘಾತಗಳಿಂದ 10,416 ಸಾವುಗಳು ವರದಿಯಾಗಿದೆ. ಇದಲ್ಲದೆ, 2020ರಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ, 15,146 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತವೆ. ಈ ಗಂಭೀರ ಡೇಟಾವನ್ನು ಪರಿಗಣನೆಗೆ ತೆಗೆದುಕೊಂಡಿರುವ ಮರ್ಸಿಡಿಸ್-ಬೆನ್ಜ್ 'ಸುಸ್ಥಿರತೆಯ ಕಡೆಗೆ ಮುನ್ನಡೆಸುವ ಸುರಕ್ಷತೆ' ಎಂಬ ಪ್ರಮುಖ ವಿಷಯದೊಂದಿಗೆ ಹೈ-ಡೆಸಿಬಲ್ ರಸ್ತೆ ಸುರಕ್ಷತಾ ಅಭಿಯಾನವನ್ನು ಪ್ರಾರಂಭಿಸುತ್ತಿದ್ದು, ಭಾರತದಲ್ಲಿ ಸುರಕ್ಷಿತ ರಸ್ತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಕಂಪನಿ ಹೊಂದಿದೆ.

ವಾಹನ ಚಲಾಯಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ:
ವಿವಿಧ ರಸ್ತೆಗಳಲ್ಲಿ ನಿಗದಿತ ವೇಗದ ಮಿತಿಗಳಲ್ಲಿ ಚಾಲನೆ ಮಾಡಿರಿ. ವೇಗ ರೋಮಾಂಚನಕಾರಿ. ಆದರೆ, ನಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಇದರಿಂದ ನಮ್ಮ ಕುಟುಂಬಗಳು ಅನಾಥವಾಗಬಹುದು ಎಂಬುದನ್ನು ಯಾವಾಗಲೂ ನೆನಪಿಡಿ. ಬೈಸಿಕಲ್, ಬೈಕ್ ಹಾಗೂ ಕಾರುಗಳನ್ನು ಚಾಲನೆ ಮಾಡುವ ಮೊದಲು ಯಾವಾಗಲೂ ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಇತರೆ ಸುರಕ್ಷತಾ ಸಾಧನಗಳನ್ನು ಬಳಕೆ ಮಾಡುವುದನ್ನು ಎಂದಿಗೂ ಮರೆಯದಿರಿ.

ಮದ್ಯಪಾನ ಮಾಡಬೇಡಿ, ಮೊಬೈಲ್ ಬಳಸಬೇಡಿ:
ಮದ್ಯಪಾನ ಮಾಡಿ ಎಂದಿಗೂ ವಾಹನಗಳನ್ನು ಚಲಾಯಿಸಬೇಡಿ. ಕೇವಲ ಎರಡು ಪೆಗ್‌ ಹಾಕಿದ ನಂತರ ನೀವು ಪೆನ್ನು ಸರಿಯಾಗಿ ಹಿಡಿಯಲು ಸಾಧ್ಯವಿಲ್ಲ. ಡ್ರೈವಿಂಗ್ ವೀಲ್ ಹಿಡಿದುಕೊಳ್ಳಲು ಸಾಧ್ಯವೇ... ನಿಮ್ಮನ್ನು ನೀವೇ ಪ್ರಶ್ನೆಮಾಡಿಕೊಳ್ಳಿ. ಅಲ್ಲದೆ, ಚಾಲನೆ ಮಾಡುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಅನ್ನು ಎಂದಿಗೂ ಬಳಸಬೇಡಿ. ರಸ್ತೆಯಲ್ಲಿ ಮೊಬೈಲ್ ಕರೆ ನಿಮ್ಮ ಜೀವನದ ಕೊನೆಯ ಕರೆ' ಆಗಬಹುದು ಎಂದು ಯಾವಾಗಲೂ ನೆನಪಿಡಿ.

ಟ್ರಾಫಿಕ್ ನಿಯಮ ಪಾಲಿಸಿ, ವಿಶ್ರಾಂತಿ ತೆಗೆದುಕೊಳ್ಳಿರಿ:
ನೀವು ರಸ್ತೆಗೆ ಬರುವ ಮೊದಲು ಟ್ರಾಫಿಕ್ ಚಿಹ್ನೆಗಳು, ಸಿಗ್ನಲ್‌ಗಳು ಮತ್ತು ಸಂಚಾರ ಸುರಕ್ಷತೆ ನಿಯಮಗಳನ್ನು ತಿಳಿದುಕೊಳ್ಳಿ. 'ರಸ್ತೆ ಸುರಕ್ಷತಾ ನಿಯಮಗಳು ಅಪಘಾತಗಳನ್ನು ತಪ್ಪಿಸಲು ಉತ್ತಮ ಸಾಧನಗಳಾಗಿವೆ' ದಿರ್ಘವಧಿಯಾಗಿ ವಾಹನಗಳನ್ನು ಡ್ರೈವ್ ಮಾಡಬೇಡಿರಿ. ಪ್ರತಿ 2 ಗಂಟೆಗಳ ನಿರಂತರ ಚಾಲನೆಯ ನಂತರ ಕೊಂಚ ವಿಶ್ರಾಂತಿ ತೆಗೆದುಕೊಳ್ಳಲು ಪ್ರಯ್ನತ್ನಿಸಿ. 'ಮನುಷ್ಯ ಮನುಷ್ಯನೇ ಹೊರತು ಯಾವುದೇ ಯಂತ್ರವಲ್ಲ' ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Seventeen people die every hour in road accidents in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X