ಯಮಹಾ ಬೈಕ್‌ನಲ್ಲಿ ಸೂಪರ್ ಹಿಟ್ ಸಿನಿಮಾ ಸಾಂಗ್ ಶೂಟಿಂಗ್: ಆ ತಪ್ಪು ಮಾಡಬಾರದಿತ್ತು ಎಂದ ಶಾರುಖ್ ಖಾನ್

ಬಾಲಿವುಡ್ ನಟ ಶಾರುಖ್ ಖಾನ್ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಯಸ್ಸು 57 ಆದರೂ ತಮ್ಮ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಸದ್ಯ, ಅಟ್ಲಿ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ 'ಜವಾನ್' ಹಾಗೂ ರಾಜ್​ಕುಮಾರ್​ ಹಿರಾನಿ ನಿರ್ದೇಶಿಸುತ್ತಿರುವ 'ಡಂಕಿ'​ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಶಾರುಖ್ ಖಾನ್ ನಟನೆಯ ಮೊದಲ ಸಿನಿಮಾ, 'ದೀವಾನಾ' ರಿಲೀಸ್ ಆಗಿ ಈ ಜೂನ್​ 25ಕ್ಕೆ ಬರೋಬ್ಬರಿ 31 ವರ್ಷಗಳಾಗಿವೆ. ಈ ಚಿತ್ರದ ಕುರಿತಂತೆ ಅವರ ಅಭಿಮಾನಿಗಳು ಹಾಗೂ ಸಿನಿರಸಿಕರು ಈಗಲೂ ಮಾತನಾಡುತ್ತಾರೆ. 1992ರ ಜೂನ್​ 25ರಂದು ತೆರೆಕಂಡಿದ್ದ ಈ ಸಿನಿಮಾ ಅಂದಿನ ಕಾಲಕ್ಕೆ ಭರ್ಜರಿ ಹಿಟ್ ಆಗಿ, ಶಾರುಖ್ ಖಾನ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಂಡಿತ್ತು.

ಯಮಹಾ ಬೈಕ್‌ನಲ್ಲಿ ಸೂಪರ್ ಹಿಟ್ ಸಿನಿಮಾ ಸಾಂಗ್ ಶೂಟಿಂಗ್: ಆ ತಪ್ಪು ಮಾಡಬಾರದಿತ್ತು ಎಂದ ಶಾರುಖ್ ಖಾನ್

ಈ ಚಿತ್ರದ ಮೂಲಕವೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಶಾರುಖ್ ಖಾನ್, ತಮ್ಮ ಸಿನಿಮಾ ವೃತ್ತಿ ಬದುಕಿನಲ್ಲಿ 31 ವರ್ಷಗಳನ್ನು ಅನೇಕ ಏಳು, ಬೀಳುಗಳ ನಡುವೆ ಯಶಸ್ವಿಯಾಗಿ ಪೂರೈಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೀಗ, ಟ್ವಿಟರ್ ನಲ್ಲಿ ಫ್ಯಾನ್ ಕೇಳಿರುವ ಪ್ರಶ್ನೆಗೆ ಶಾರುಖ್ ನೀಡಿರುವ ಉತ್ತರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ದೀವಾನಾ ಸಿನಿಮಾದ 'ಕೋಯಿ ನಾ ಕೋಯಿ ಚಾಹಿಯೇ..' ಹಾಡಿನ ತುಣುಕನ್ನು ಹಂಚಿಕೊಂಡಿರುವ ಅಭಿಮಾನಿ, 'ನಿಮ್ಮ ಎಂಟ್ರಿ ಸೀನ್ ನೋಡಿದಾಗ ಏನನಿಸುತ್ತದೆ ಸರ್?. 31 ವರ್ಷ ಕಳೆದಿದ್ದರೂ ಈ ಸೀನ್ ನಮಗೆ ತುಂಬಾ ಸಂತೋಷ ನೀಡುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಹಾಡಿನಲ್ಲಿ ಶಾರುಖ್ ಖಾನ್ ತಮ್ಮ ಸಹಕಲಾವಿದರೊಂದಿಗೆ 'ಯಮಹಾ ಎಡಿಎಸ್' ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೇ ಹಾಡುತ್ತಾ ಹೋಗುವುದನ್ನು ಕಾಣಬಹುದು.

ಅಭಿಮಾನಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನಟ ಶಾರುಖ್ ಖಾನ್, ವಿಷಾದ ವ್ಯಕ್ತಪಡಿಸಿದ್ದು, 'ಹೆಲ್ಮೆಟ್ ಧರಿಸಬೇಕಿತ್ತು' ಎಂದು ಹೇಳಿದ್ದಾರೆ. ಹಲವು ನಟರು, ಸಿನಿಮಾಗಳಲ್ಲಿ ಬೈಕ್ ರೈಡ್ ದೃಶ್ಯವನ್ನು ಚಿತ್ರೀಕರಿಸುವಾಗ ಹೆಲ್ಮೆಟ್ ಹಾಕುವುದಿಲ್ಲ. ಇಂತಹ ದೃಶ್ಯಗಳಿರುವ ಪೋಸ್ಟರ್ ನೋಡಿದರೆ, ಅಭಿಮಾನಿಗಳು ಈ ರೀತಿಯ ಸಾಹಸಗಳಿಗೆ ಕೈಹಾಕಬಹುದು ಎಂದು ಪೊಲೀಸರು, ಸಿನಿಮಾ ತಂಡಗಳಿಗೆ ಎಚ್ಚರಿಕೆ ನೀಡಿರುವ ಎಷ್ಟೋ ನಿದರ್ಶನಗಳನ್ನು ನೋಡಿದ್ದೇವೆ.

ಮೇಲಾಗಿ ಸಿನಿಮಾ ಚಿತ್ರೀಕರಣ ಮಾಡುವ ವೇಳೆ, ವಿವಿಧ ಬಗೆಯ ಸೆಟ್ ಗಳನ್ನು ಹಾಕಿ, ಮುನ್ನೆಚ್ಚರಿಕೆ ತೆಗೆದುಕೊಂಡು ಬೈಕ್ ಸ್ಟಂಟ್ ಅಂತಹ ದೃಶ್ಯಗಳನ್ನು ಚಿತ್ರಿಕರಿಸಲಾಗುತ್ತದೆ. ಆದರೆ, ಇದನ್ನು ಅರಿಯದೆ ಕೆಲವರು, ಈ ರೀತಿಯ ಸಾಹಸವನ್ನು ಪ್ರದರ್ಶಿಸಲು ಹೋಗಿ, ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಇದರಿಂದಾಗಿ ಸಿನಿಮಾಗಳಲ್ಲಿ ಬೈಕ್ ದೃಶ್ಯಗಳನ್ನು ಶೂಟಿಂಗ್ ಮಾಡುವಾಗ ನಟರು ಹೆಲ್ಮೆಟ್ ಧರಿಸಿ, ತಮ್ಮನ್ನು ಫಾಲೋ ಮಾಡುವವರಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಪ್ರಗತಿಪರರು ಒತ್ತಾಯಿಸುತ್ತಾರೆ.

ಇದೇ ಕಾರಣಕ್ಕೂ ಏನೋ ಶಾರುಖ್ ಖಾನ್ ಅವರು, 'ದೀವಾನಾ' ಚಿತ್ರದ ಹಾಡಿನ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದಕ್ಕೆ ವಿಷಾದ ವ್ಯಕ್ತಪಡಿಸಿ, ಹೆಲ್ಮೆಟ್ ಹಾಕುವಂತೆ ಹೇಳಿದ್ದಾರೆ ಅನಿಸುತ್ತದೆ. ರಸ್ತೆಯಲ್ಲಿ ಯಾವುದೇ ದ್ವಿಚಕ್ರ ವಾಹನ ಓಡಿಸಬೇಕಾದರೆ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇದಿಷ್ಟೇ ಅಲ್ಲದೆ, ಮದ್ಯಪಾನ ಅಥವಾ ಫೋನ್ ನಲ್ಲಿ ಮಾತನಾಡಿಕೊಂಡು ಬೈಕ್ ಅಥವಾ ಸ್ಕೂಟರ್ ಓಡಿಸಬೇಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 27, 2023, 15:05 [IST]
English summary
Shah rukh khan regrets not wearing helmet deewana film song details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+