Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 7 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Movies
ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ
- News
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
- Sports
ಐಪಿಎಲ್ 2021: ಈ ಬಾರಿಯ ಆವೃತ್ತಿಯ ಕೆಲ ಗಮನಾರ್ಹ ಬದಲಾವಣೆಗಳು
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸರಣಿ ಅಪಘಾತಕ್ಕೆ ಕಾರಣವಾಯ್ತು ಶಿಲ್ಪಾ ಶೆಟ್ಟಿ ಪತಿಗೆ ಸೇರಿದ ಐಷಾರಾಮಿ ಕಾರು
ಕಳೆದ ಭಾನುವಾರ ಬೆಂಗಳೂರಿನಲ್ಲಿ ಸರಣಿ ಅಪಘಾತವೊಂದು ಸಂಭವಿಸಿದೆ. ಅಪಘಾತದ ನಂತರ ಕಾರು ಚಾಲಕನು ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಕಾರಿನ ನೋಂದಣಿ ಸಂಖ್ಯೆಯ ಮೂಲಕ ತನಿಖೆ ನಡೆಸುತ್ತಿದ್ದಾರೆ.

ಅಪಘಾತಕ್ಕೆ ಕಾರಣವಾದ ಆಡಿ ಆರ್ 8 ಐಷಾರಾಮಿ ಕಾರು ಬಾಲಿವುಡ್ ನ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರಿಗೆ ಸೇರಿದ್ದು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅವರು ಎರಡು ತಿಂಗಳ ಹಿಂದೆಯೇ ಈ ಕಾರನ್ನು ಕಾರು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಕಾರಿನ ದಾಖಲೆಗಳು ಇನ್ನೂ ರಾಜ್ ಕುಂದ್ರಾ ಅವರ ಹೆಸರಿನಲ್ಲಿಯೇ ಇವೆ. ಇದರಿಂದಾಗಿ ಪೊಲೀಸರಿಗೆ ಸಮಸ್ಯೆಯನ್ನು ಬಗೆಹರಿಸಲು ತೊಂದರೆ ಎದುರಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಎಂಹೆಚ್ -02 ಬಿಪಿ -0010 ಹೊಂದಿರುವ ಈ ಐಷಾರಾಮಿ ಕಾರಿನ ಸದ್ಯದ ಮಾಲೀಕರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ಸರಣಿ ಅಪಘಾತವು ಕಳೆದ ಭಾನುವಾರ ಮಧ್ಯಾಹ್ನ 2.45ರ ಸುಮಾರಿಗೆ ಸಂಭವಿಸಿದೆ. ಈ ಅಪಘಾತದಿಂದಾಗಿ ಆಟೋ ಹಾಗೂ ಹಲವು ದ್ವಿಚಕ್ರ ವಾಹನಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸಂಬಂಧ ಗಾಯಾಳುಗಳಿಂದ ದೂರು ಸ್ವೀಕರಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿಯ ಪತಿಯಿಂದ ಐಷಾರಾಮಿ ಕಾರು ಖರೀದಿಸಿದ್ದ ಬಿಟಿಎಂ 2ನೇ ಹಂತದ ನಿವಾಸಿ ಮೊಹಮ್ಮದ್ ಸದ್ದಾಂ (27) ಎಂಬ ಕಾರು ಡೀಲರ್'ನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಪಘಾತದ ಸಮಯದಲ್ಲಿ ತಾನು ಕಾರಿನಲ್ಲಿದ್ದುದಾಗಿ ಆತ ಒಪ್ಪಿಕೊಂಡಿದ್ದು, ಪರಿಸ್ಥಿತಿ ಹದಗೆಟ್ಟಿದ್ದರಿಂದ ಸ್ಥಳದಿಂದ ಪರಾರಿಯಾಗಿದ್ದಾಗಿ ತಿಳಿಸಿದ್ದಾನೆ. ಅಪಘಾತಕ್ಕೆ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಮಹಮ್ಮದ್ ಸದ್ದಾಂ ಭಾರತದ ವಿವಿಧ ಕಾರು ಡೀಲರ್ ಗಳೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಆತ ರಾಜ್ ಕುಂದ್ರಾರವರ ಆಡಿ ಆರ್ 8 ಐಷಾರಾಮಿ ಕಾರ್ ಅನ್ನು ಮುಂಬೈನ ಕಾರು ಮಾರಾಟಗಾರರ ಮೂಲಕ ಖರೀದಿಸಿದ್ದಾನೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರಿನ ಆರಂಭಿಕ ಬೆಲೆ ರೂ.2.30 ಕೋಟಿಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.3 ಕೋಟಿಗಳಿಗಿಂತ ಹೆಚ್ಚು ಎಂಬುದು ಗಮನಾರ್ಹ. ಈ ಅಪಘಾತದಲ್ಲಿ ಕಾರಿನ ಮುಂಭಾಗವು ಸಂಪೂರ್ಣವಾಗಿ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.