ರೂ.3.5 ಕೋಟಿ ಮೌಲ್ಯ ತಮ್ಮ ಹೊಸ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ಬಾಲಿವುಡ್ ಸೆಲಬ್ರಿಟಿಗಳು ಆಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಗಾಗ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇವುಗಳಲ್ಲಿ ಹೆಚ್ಚಿನವು ಅವರ ಅಥವಾ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಒಡೆತನದಲ್ಲಿದೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿರುವ ಕಾರು ಹೊಚ್ಚಹೊಸ ಮರ್ಸಿಡಿಸ್-ಮೇಬ್ಯಾಕ್ GLS 600 ಆಗಿದೆ.

Shilpa Shetty

"ಕಾರ್ಸ್ ಫಾರ್ ಯೂ" ಚಾನೆಲ್‌ನ YouTube ವೀಡಿಯೊದಲ್ಲಿ ಶಿಲ್ಪಾ ಶೆಟ್ಟಿ ಹೊಸ ಬಿಳಿ ಮರ್ಸಿಡಿಸ್-ಮೇಬ್ಯಾಕ್ GLS 600 ಎಸ್‍ಯುವಿಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ನಂತರ ನಟಿ ಎಸ್‍ಯುವಿಯಿಂದ ಇಳಿದು ವಿಮಾನ ನಿಲ್ದಾಣವನ್ನು ಪ್ರವೇಶಿಸುತ್ತಾರೆ. ಮೊದಲ ಬಾರಿಗೆ ಶಿಲ್ಪಾ ಈ ಹೊಸ GLS 600 ನೊಂದಿಗೆ ಕಾಣಿಸಿಕೊಂಡಿದೆ,.ಇದು ಪ್ರಸ್ತುತ ಮರ್ಸಿಡಿಸ್ ಬೆಂಝ್ ಸರಣಿಯ ಅತ್ಯಂತ ದುಬಾರಿ ಎಸ್‍ಯುವಿಯಾಗಿದೆ.

ಕರ್ನಾಟಕ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಜನಪ್ರಿಯ ನಟಿಗಳಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟೆ ನಂತರ ಬಾಲಿವುಡ್‌ಗೆ ತೆರಳಿದ್ದರು. ನಂತರ ಬಾಲಿವುಡ್‌ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಭಾರೀ ಜನಪ್ರಿಯತೆಯನ್ನು ಗಳಿಸಿದ್ದರು. ಇನ್ನು ಶಿಲ್ಪಾ ಶೆಟ್ಟಿ ಕಾಣಿಸಿಕೊಂಡ ಹೊಸ ಮರ್ಸಿಡಿಸ್-ಮೇಬ್ಯಾಕ್ GLS 600 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2021 ರಲ್ಲಿ ಬಿಡುಗಡೆಗೊಂಡಿತು.

Shilpa Shetty

ಮರ್ಸಿಡಿಸ್ ಬೆಂಝ್ ಕಂಪನಿಯು Mercedes Maybach GLS600 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ 2021 ರಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಮರ್ಸಿಡಿಸ್-ಮೇಬ್ಯಾಕ್ ಕಾರಿಗೆ ಬುಕಿಂಗ್ ಅನ್ನು ತೆರೆದ ತಕ್ಷಣ, ಅದು ಸಂಪೂರ್ಣವಾಗಿ ಬುಕ್ ಆಗುತ್ತದೆ. Mercedes-Maybach ಕಾರುಗಳ CBU ಮಾದರಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರಿಂದ, ಭಾರತದ ಮಾರುಕಟ್ಟೆಗೆ ಬರುವ ವಾಹನದ ಕೆಲವೇ ಸೀಮಿತ ಯುನಿಟ್ ಗಳಾಗಿವೆ.

ಈ ಕಾರನ್ನು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಖರೀದಿಸಿದ್ದಾರೆ. ಇದೀಗ ಹಿರಿಯ ನಟಿ ನೀತು ಸಿಂಗ್ ಅವರು ಕೂಡ ಅತ್ಯಂತ ಜನಪ್ರಿಯವಾದ Mercedes-Maybach GLS600 ಕಾರನ್ನು ಇತ್ತೀಚೆಗೆ ಖರೀದಿಸಿದ್ದರು. ಇನ್ನು ಅವರ ಮಗ ರಣಬೀರ್ ಕಪೂರ್ ಕೂಡ Mercedes-AMG G63 SUV ಅನ್ನು ಹೊಂದಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ದಂಪತಿಗಳು ಒಂದೇ ಕ್ಯಾವನ್‌ಸೈಟ್ ಬ್ಲೂ ಶೇಡ್‌ನಲ್ಲಿ ಅಲ್ಟ್ರಾ ಬಣ್ಣದ Mercedes Maybach GLS600 ಕಾರನ್ನು ಹೊಂದಿದ್ದಾರೆ.

ಈ ಮರ್ಸಿಡಿಸ್-ಮೇಬ್ಯಾಕ್ GLS600 ಕಾರಿನ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ. ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಒಳಗೊಂಡಿವೆ.

ಈ ಐಷಾರಾಮಿ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ. ಈ ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

More from DriveSpark

Article Published On: Wednesday, April 5, 2023, 14:11 [IST]
English summary
Shilpa shetty spotted in luxury mercedes maybach gls600 suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+