Shivamogga: ಶಿವಮೊಗ್ಗ-ತಿರುಪತಿ ವಿಮಾನ ಸೇವೆ ಆರಂಭ, ಪ್ರಯಾಣದ ಅವಧಿ 1 ಗಂಟೆ.. ಟಿಕೆಟ್ ದರ ಕಡಿಮೆ!

ಮಲೆನಾಡಿನ ಜನರು ಇನ್ಮುಂದೆ ಬೇರೆ ರಾಜ್ಯಗಳ ಪ್ರವಾಸಕ್ಕೆ ಸುಲಭವಾಗಿ ಹೋಗಬಹುದು. ಸ್ಟಾರ್ ಏರ್ (Star Air) ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ (Kuvempu Airport, Shivamogga)ದಿಂದ, ಹೈದರಾಬಾದ್ (Hyderabad), ತಿರುಪತಿ (Tirupati) ಮತ್ತು ಗೋವಾ (Goa)ಕ್ಕೆ ಇಂದಿನಿಂದ (ಮಂಗಳವಾರ) ವಿಮಾನ ಸೇವೆಯನ್ನು ಆರಂಭಿಸಿದೆ.

ಸ್ಟಾರ್ ಏರ್ ತನ್ನ ಹೊಸ ಎಂಬ್ರಾರ್ ಇ175 (Embraer E175) ವಿಮಾನದೊಂದಿಗೆ ಈ ಸೇವೆ ಒದಗಿಸುತ್ತಿದೆ. ಹೈದರಾಬಾದ್‌ಗೆ ವಿಮಾನ ಸೌಲಭ್ಯ ಲಭ್ಯವಿರುವುದರಿಂದ ವ್ಯಾಪಾರ - ವಹಿವಾಟು ಬೆಳವಣಿಗೆಯಾಗಿತ್ತದೆ. ತಿರುಪತಿಗೆ ಸಂಪರ್ಕ ಕಲ್ಪಿಸಿರುವುದರಿಂದ ವೆಂಕಟೇಶ್ವರ ಸ್ವಾಮಿಯ ದೇಗುಲ ಹಾಗೂ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತದೆ. ಗೋವಾಕ್ಕೆ ಸೇವೆ ಶುರು ಮಾಡಿರುವುದರಿಂದ ಅಲ್ಲಿನ ಕಡಲತೀರಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಹಾಯವಾಗಲಿದೆ ಎಂದು ಸ್ಟಾರ್ ಏರ್ ಮೂಲಗಳು ಹೇಳಿವೆ.

Shivamogga: ಶಿವಮೊಗ್ಗ-ತಿರುಪತಿ ವಿಮಾನಸೇವೆ ಆರಂಭ, ಪ್ರಯಾಣದ ಅವಧಿ 1 ಗಂಟೆ.. ಟಿಕೆಟ್ ದರ ಭಾರೀ ಕಡಿಮೆ!

ಸ್ಟಾರ್ ಏರ್ ಸಂಸ್ಥೆಯ ಎಂಬ್ರಾರ್ ಇ175 (Embraer E175) ವಿಮಾನ ಸಾಕಷ್ಟು ಅತ್ಯಾಧುನಿಕವಾಗಿದ್ದು, ಜನರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ಈ ವಿಮಾನ ಎರಡು ದರ್ಜೆಯ ಆಸನ ವ್ಯವಸ್ಥೆಯನ್ನು ಹೊಂದಿದೆ. ಅವುಗಳೆಂದರೆ, 12 - ಲಗ್ಸುರಿ ಬ್ಯುಸಿನೆಸ್ ಕ್ಲಾಸ್, 64 - ಎಕಾನಾಮಿಕ್ ಕ್ಲಾಸ್. ಇವು ಹೆಚ್ಚು ವಿಶಾಲವಾಗಿವೆ. ವಿಮಾನದಲ್ಲಿ ಊಟದ ವ್ಯವಸ್ಥೆಯೂ ಇದೆ.

ಈ ಬಗ್ಗೆ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಸೋಮವಾರ ಪೋಸ್ಟ್ ಮಾಡಿದ್ದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು, 'ಶಿವಮೊಗ್ಗ ವಿಮಾನ ನಿಲ್ದಾಣ ಈಗ ಮತ್ತೊಂದು ಮೈಲಿಗಲ್ಲಿಗೆ ಸಜ್ಜಾಗಿದೆ. ಇದೇ ನವೆಂಬರ್ 21ರಿಂದ (ಮಂಗಳವಾರ) ಶಿವಮೊಗ್ಗದಿಂದ 3 ಹೊಸ ಮಾರ್ಗಗಳಲ್ಲಿ (ಗೋವಾ, ತಿರುಪತಿ, ಹೈದರಾಬಾದ್‌) ವಿಮಾನ ಸಂಚಾರ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ ಸಮಸ್ತರೂ ಇದರ ಸದುಪಯೋಗ ಪಡೆಯುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

Shivamogga: ಶಿವಮೊಗ್ಗ-ತಿರುಪತಿ ವಿಮಾನಸೇವೆ ಆರಂಭ, ಪ್ರಯಾಣದ ಅವಧಿ 1 ಗಂಟೆ.. ಟಿಕೆಟ್ ದರ ಭಾರೀ ಕಡಿಮೆ!

ಸ್ಟಾರ್ ಏರ್ ವೈಬ್‌ಸೈಟ್ ಪ್ರಕಾರ, ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 12:25ಕ್ಕೆ ಸಂಚಾರ ಆರಂಭಿಸುವ ವಿಮಾನ ಮಧ್ಯಾಹ್ನ 1:30ಕ್ಕೆ ಶಿವಮೊಗ್ಗಕ್ಕೆ ಬರುತ್ತದೆ. ಪ್ರಯಾಣದ ಅವಧಿಯು ಸುಮಾರು 1 ಗಂಟೆಯಿದೆ. ಶಿವಮೊಗ್ಗದಿಂದ ಸಂಜೆ 4:30 ರಿಂದ ಹೊರಡುವ ವಿಮಾನ ಸಂಜೆ 5.35ಕ್ಕೆ ಹೈದರಾಬಾದ್ ತಲುಪುತ್ತದೆ. ಪ್ರಯಾಣದ ಅವಧಿ 1 ಗಂಟೆ 5 ನಿಮಿಷವಷ್ಟೇ.

ಶಿವಮೊಗ್ಗದಿಂದ ಮಧ್ಯಾಹ್ನ 1:55ಕ್ಕೆ ಸಂಚಾರ ಆರಂಭಿಸುವ ವಿಮಾನ, ಮಧ್ಯಾಹ್ನ 2:45ಕ್ಕೆ ಗೋವಾ ತಲುಪುತ್ತದೆ. ಅಲ್ಲಿಂದ (ಗೋವಾ) ಮಧ್ಯಾಹ್ನ 3:15ಕ್ಕೆ ಹೊರಟು ಸಂಜೆ 4:05ಕ್ಕೆ ಶಿವಮೊಗ್ಗಕ್ಕೆ ಬರಲಿದೆ. ಪ್ರಯಾಣದ ಅವಧಿ 50 ನಿಮಿಷಗಳು ಟಿಕೆಟ್ ದರಗಳು ರೂ.1,999 ರಿಂದ ಆರಂಭವಾಗಲಿದೆ. ಆದರೆ, ಸೀಟುಗಳ ಲಭ್ಯತೆ ಆಧಾರದ ಮೇಲೆ ವ್ಯತ್ಯಯವಾಗಬಹುದು. ಗೋವಾ ಬಿಟ್ಟು, ಹೈದರಾಬಾದ್ ಹಾಗೂ ತಿರುಪತಿಗೆ ಶಿವಮೊಗ್ಗದಿಂದ ಬಸ್‌ನಲ್ಲಿ ಪ್ರಯಾಣಿಸಿದರೆ, 10 ಗಂಟೆ ಹೆಚ್ಚು ಸಮಯಾವಕಾಶಬೇಕು.

ಶಿವಮೊಗ್ಗದಿಂದ ಈ ಮೂರು ಸ್ಥಳಗಳಿಗೆ ವಿಮಾನಯಾನ ಸೇವೆ ಆರಂಭವಾಗುವುದರಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ. ಸೋಗಾನೆಯಲ್ಲಿರುವ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ ನಗರದಿಂದ 8.8 ಕಿ.ಮೀ ಹಾಗೂ ಭದ್ರಾವತಿಯಿಂದ 8.2 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣದಲ್ಲಿ ಇಲ್ಲಿನ ಸಿಬ್ಬಂದಿ, ಗಂಟೆಗೆ ಬರೋಬ್ಬರಿ 300 ಪ್ರಯಾಣಿಕರನ್ನು ನಿಭಾಯಿಸುವಷ್ಟು ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಸುಸಜ್ಜಿತವಾಗಿದೆ.

ಕೇಂದ್ರ ಸರ್ಕಾರ ಉಡಾನ್ ಯೋಜನೆ ಅಡಿ 662.38 ಎಕರೆ ಪ್ರದೇಶದಲ್ಲಿ ರೂ.450 ಕೋಟಿ ವ್ಯಯಿಸಿ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ಮಿಸಿದೆ. ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ನಂತರ, ರಾಜ್ಯದ ಅತಿ ಉದ್ದದ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬೋಯಿಂಗ್ 737 ಮತ್ತು ಏರ್‌ಬಸ್ A320 ನಂತಹ ದೊಡ್ಡ ವಿಮಾನಗಳನ್ನು ಇಲ್ಲಿ ಲ್ಯಾಂಡ್ ಮಾಡಬಹುದು.

ಶಿವಮೊಗ್ಗದಿಂದ ಗೋವಾ, ತಿರುಪತಿ ಹಾಗೂ ಹೈದರಾಬಾದ್‌ ಮಾರ್ಗದಲ್ಲಿ ವಿಮಾನಸೇವೆ ಆರಂಭಿಸುವುದು ಮಲೆನಾಡು ಭಾಗದ ಜನರಿಗೆ ಸಂತೋಷ ತಂದಿದೆ. ಕಮ್ಮಿ ಖರ್ಚಿನಲ್ಲಿ ದೂರದ ಸ್ಥಳಗಳಿಗೆ ಆರಾಮದಾಯವಾಗಿ ಪ್ರಯಾಣಿಸಬಹುದು. ಜೊತೆಗೆ ಪ್ರಯಾಣದ ಅವಧಿಯೂ ತುಂಬಾ ಕಡಿಮೆಯಾಗಲಿದೆ. ಈ ವಿಮಾನ ಸೇವೆಯಿಂದ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

Article Published On: Tuesday, November 21, 2023, 10:39 [IST]
English summary
Shivamogga star air flights to tirupati hyderabad goa low cost ticket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+