ವಿಶ್ವದ ಮೊದಲ ಬೆಳ್ಳಿಯ ಬೈಕ್
ಆಟೋಟ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಅನುಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ನೀಡಿ ಗೌರವಿಸಲಾಗುತ್ತದೆ. ಇದು ಲೋಹಗಳಲ್ಲಿ ಚಿನ್ನದ ಬಳಿಕ ಬೆಳ್ಳಿಯ ಬೇಡಿಕೆಯನ್ನು ಗುರುತಿಸಿಕೊಳ್ಳುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೇ ಚಿನ್ನದ ಬೈಕ್ ಕುರಿತು ಮಾಹಿತಿ ನೀಡಿದ್ದೆವು. ಸದ್ಯ ಭಾರತದ ಪ್ರಖ್ಯಾತ ಉದ್ಯಮ ಸಂಸ್ಥೆಗಳು ಚಿನ್ನ ಹಾಗೂ ಬೆಳ್ಳಿಯ ಬೈಕ್ ತಯಾರಿಸುವುದರಲ್ಲೇ ಕಾರ್ಯಮಗ್ನವಾಗಿದೆ.
ಇದಕ್ಕೊಂದು ಸೇರ್ಪಡೆಯೆಂಬಂತೆ ದೇಶದ ಪ್ರಮುಖ ಬೆಳಿ ಉತ್ಪಾದಕ ಹಾಗೂ ರಫ್ತು ಸಂಸ್ಥೆಯಾಗಿರುವ ಸಿಲ್ವರ್ ಎಂಪೊರಿಯಂ ಅತಿ ನೂತನ ಬೆಳ್ಳಿಯ ಬೈಕ್ ತಯಾರಿಸಿದೆ. ಇತರ ಬೈಕ್‌ಗಿಂತಲೂ ವಿಶಿಷ್ಟ ಶೈಲಿಯನ್ನು ಹೊಂದಿರುವ ಈ ಬೈಕ್‌ನಲ್ಲಿ ದೇಶದ ರಸ್ತೆಗಳ ರಾಜ ರಾಯಲ್ ಎನ್‌ಫೀಲ್ಡ್‌ನ ಸಿಂಗಲ್ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ.

ಬೆಳ್ಳಿಯಿಂದ ತಯಾರಾದ ಬೈಕ್
ವಿಶ್ವದಲ್ಲೇ ನೈಜ ಬೆಳ್ಳಿಯಿಂದ ತಯಾರಾದ ಮೊದಲ ಬೈಕೆಂಬ ಖ್ಯಾತಿಗೆ ಈ ಬೈಕ್ ಪಾತ್ರವಾಗಿದೆ. ಮುಂಬೈನಲ್ಲಿ ಸಾಗಿದ ಅಂತರಾಷ್ಟ್ರೀಯ ಆಭರಣ ಶೋದಲ್ಲಿ ಇದನ್ನು ಪ್ರದರ್ಶಿಸಲಾಗಿದೆ.

ದರ ಮಾಹಿತಿ
ಬೆಳ್ಳಿಯಿಂದ ತಯಾರಾದ ಬೈಕ್ ಎಂದಾಕ್ಷಣ ಇದರ ದರದ ಬಗ್ಗೆ ತಿಳಿಯುವ ಕುತೂಹಲ ಮೂಡುತ್ತದೆ. ಅಂದ ಹಾಗೆ ಇದು 50,000 ರು.ಗಳಿಂದ ಹಿಡಿದು 1 ಕೋಟಿ ರು.ಗಳ ವರೆಗೆ ದುಬಾರಿಯೆನಿಸಿದೆ.

ಶ್ರೀಮಂತರಿಗಾಗಿ
ಪ್ರಮುಖವಾಗಿಯೂ ದೇಶದ ಗಣ್ಯ ವ್ಯಕ್ತಿಗಳನ್ನು ಗುರಿಯಾರಿಸಿ ಈ ಬೈಕ್ ತಯಾರಿಸಲಾಗಿದೆ. ಹಾಗೆಯೇ ಇದರ ವಿನ್ಯಾಸ ರೂಪಿಸಲು ಆರು ತಿಂಗಳುಗಳಷ್ಟು ಸಮಯ ತಗಲಿದೆ.

ಕಸ್ಟಮೈಸ್ಡ್ ಬೈಕ್
ಇನ್ನು ನಿಮಗೆ ಬೇಕಾದ್ದಲ್ಲಿ ಬೆಳ್ಳಿಯ ಬೈಕ್‌ಗಾಗಿ ಬುಕ್ ಮಾಡಬಹುದಾಗಿದೆ. ಅಲ್ಲದೆ ನಿಮ್ಮ ಇಚ್ಛೆಗಾನುಸಾರವಾಗಿ ಕಸ್ಟಮೈಸ್ಡ್ ಮಾಡುವ ಅವಕಾಶವಿದೆ.

ನಾವು ಹಿಂದೆ ಪರಿಚಯಿಸಿರುವ ಚಿನ್ನದ ಬೈಕಿದು. ಇದು ಕೇವಲ ಶೋ ಪೀಸ್ ಮಾತ್ರವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ ದೇಶದ ಮೊದಲ ಚಿನ್ನದ ಬೈಕ್


Click it and Unblock the Notifications