ಜನಪ್ರಿಯ ಜಾವಾ ಬೈಕ್ ಖರೀದಿಸಿದ ಲೆಜೆಂಡ್ ಸಿಂಗರ್ ಕೈಲಾಶ್ ಖೇರ್: ಸ್ಪೆಷಲ್ ಪೂಜೆ

ಭಾರತೀಯ ಜಾನಪದ ಸಂಗೀತ, ಸೂಫಿ ಸಂಗೀತ, ಘಜಲ್ ಹಾಡುಗಳು ಇವುಗಳನ್ನು ಅರೆದು ಕುಡಿದ ಮಾಂತ್ರಿಕ ಕೈಲಾಶ್ ಖೇರ್ (Kailash Kher) ಎಂಬ ಗಾಯಕ ಆಗಿದ್ದಾರೆ. ಇದೀಗ ಕೈಲಾಶ್ ಖೇರ್ ಅವರು ಹೊಸ ಜಾವ ಬೈಕ್ ಅನ್ನು ಖರೀದಿಸಿದ್ದಾರೆ. ಇವರು ಹೊಸ ಬೈಕನ್ನು ಜಾವ ಡೀಲರ್‌ಶಿಪ್‌ ನಲ್ಲಿ ಡೆಲಿವರಿ ಪಡೆಯುವ ವೀಡಿಯೋವನ್ನು ಶೇರ್ ಮಾಡಿದ್ದಾರೆ.

ಜಾವಾ ಪೆರಾಕ್ (Jawa Perak) ಭಾರತದಲ್ಲಿ ಮಾರಾಟವಾಗುವ ಫ್ಯಾಕ್ಟರಿ-ಕಸ್ಟಮ್ ಬಾಬರ್‌ಗಳಲ್ಲಿ ಒಂದಾಗಿದೆ. ಈ ಜಾವಾ ಪೆರಾಕ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.13 ಲಕ್ಷವಾಗಿದೆ. ಈ ಬೈಕಿನ ಬಣ್ಣಕ್ಕೆ ಹೊಂದಿಕೆಯಾಗುವ ತೆರೆದ ಮುಖದ ಹೆಲ್ಮೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಾವಾ ಪೆರಾಕ್ ಬಾಬಾರಿ ಶೈಲಿಯ ಅತ್ಯಂತ ಉತ್ತಮ ಬೈಕ್ ಆಗಿದೆ.

Singer Kailash Kher Buys Jawa Perak

ಕೈಲಾಶ್ ಖೇರ್ ಅವರು ಖ್ಯಾತ ಹಿನ್ನೆಲೆ ಗಾಯಕನಾಗಿದ್ದಾರೆ. ಅವರು ರಬ್ಬಾ ಇಷ್ಕ್ ನಾ ಹೋವೇ' ಹಾಡು ಭಾರೀ ಹಿಟ್ ಆಗಿತ್ತು. ಅವರ ಮಂಗಲ್ ಪಾಂಡೆ, ಕಾರ್ಪೊರೇಟ್, ಸಲಾಂ ಏ ಇಷ್ಕ್, ಚಾಂದಿನಿ ಚೌಕ್ ಟು ಚೀನಾ, ಕಾಲ್, ಟ್ರಾಫಿಕ್ ಸಿಗ್ನಲ್ ಮೊದಲಾದ ಸಿನಿಮಾಗಳಲ್ಲಿ ಖೈಲಾಸ್ ಹಾಡಿದ ಅಷ್ಟೂ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಅಷ್ಟೇ ಅಲ್ಲ ಅವರು ಹಲವು ಹಾಡುಗಳನ್ನು ಬರೆದರು. ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ.

ಇಂದು ಅವರು ಭಾರತದ ಅತೀ ಹೆಚ್ಚು ಬೇಡಿಕೆಯ ಗಾಯಕರಲ್ಲಿ ಒಬ್ಬರು. ಇನ್ನು ಅವರು ಖರೀದಿಸಿದ ಜಾವಾ ಪೆರಾಕ್ ಬೈಕ್ ಬಗ್ಗೆ ಹೇಳುವುದಾದರೆ, ಈ ಜಾವಾ ಪೆರಾಕ್ ತನ್ನ ಸ್ಟೈಲಿಂಗ್ ಅನ್ನು ಮೂಲ ಪೆರಾಕ್ ಬೈಕಿನಿಂದ ಎರವಲು ಪಡೆದುಕೊಂಡಿದೆ. ಮೂಲ ಪೆರಾಕ್ ಬೈಕ್ ಅನ್ನು 1946 ರಲ್ಲಿ ಪ್ರದರ್ಶಿಸಲಾಯಿತು. ಈ ಬೈಕ್ ತನ್ನ ರೆಟ್ರೊ ವಿನ್ಯಾಸವನ್ನು ಇನ್‌ಸ್ಟ್ರುಮೆಂಟ್ ಕನ್ಸೋಲ್‌ಗೆ ಹಾಗೆಯೇ ಈಗಿನ ಬೈಕಿನಲ್ಲಿ ನೀಡಿದೆ.

Singer Kailash Kher Buys Jawa Perak

ಜಾವಾ ಪೆರಾಕ್ ಬೈಕಿನಲ್ಲಿ 334 cc ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 30.22 bhp ಮತ್ತು 32.74 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕ್ ಒಂದೇ ಬಣ್ಣದಲ್ಲಿ ಲಭ್ಯವಿದೆ. ಇದು ಮ್ಯಾಟ್ ಬ್ಲ್ಯಾಕ್ ಪೇಂಟ್ ಸ್ಕೀಮ್ ಮತ್ತು ಕಾಂಟ್ರಾಸ್ಟ್ ಬ್ರೌನ್ ಸೀಟ್‌ನೊಂದಿಗೆ ಲಭ್ಯವಿದೆ.

ಫ್ಲೋಟಿಂಗ್ ಸೀಟ್ ಮಾರುಕಟ್ಟೆಯಲ್ಲಿ ಎಲ್ಲಕ್ಕಿಂತ ವಿಶಿಷ್ಟವಾದ ನೋಟವನ್ನು ನೀಡುತ್ತದೆ. ಬಾಬರ್‌ ಶೈಲಿಯ ವಿಶಿಷ್ಟವಾದ ಜಾವಾ ಪೆರಾಕ್ ಬೈಕ್ ಉದ್ದವಾದ ವ್ಹೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್ ಅನ್ನು ಹೊಂದಿದೆ. ಅದರ ಬಾರ್-ಎಂಡ್ ರೌಂಡ್ ಮೀರರ್ ಗಳು, ಫ್ಲೋಟಿಂಗ್ ಶೈಲಿಯ ಸಿಂಗಲ್-ಪೀಸ್ ಸೀಟ್, ಅಂಡರ್ ಸೀಟ್ ಟೈಲ್ ಲ್ಯಾಂಪ್, ಫೆಂಡರ್‌ಗಳು ಮತ್ತು ಡ್ಯುಯಲ್ ಸ್ಲ್ಯಾಷ್-ಕಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

Singer Kailash Kher Buys Jawa Perak

ಇನ್ನು ಜಾವಾ ಪೆರಾಕ್ ಬೈಕಿನಲ್ಲಿ ಓಲ್ಡ್ ಸ್ಕೋಲ್ ವಿನ್ಯಾಸದ ರೌಂಡ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಪಡೆಯುತ್ತದೆ ಇನ್ನು ಜಾವಾ ಪೆರಾಕ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಈ ಜಾವಾ ಪೆರಾಕ್ ಬೈಕ್ 175 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 14 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕಿನಲ್ಲಿ 18-17-ಇಂಚಿನ ಸ್ಪೋಕ್ ವ್ಹೀಲ್ ಅನ್ನು ಹೊಂದಿವೆ. ಜಾವಾ ಪೆರಾಕ್ ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 26, 2024, 12:01 [IST]
English summary
Singer kailash kher buys new jawa perak bobber details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+