ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುನ್ನತ್ ಹೊಸ ಸೂಪರ್ ಕಾರನ್ನು ಖರೀದಿಸಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಲ್ಲಿ ಕೆಲವು ಸೂಪರ್ ಹಿಟ್‌ ಹಾಡುಗಳನ್ನು ಇವರು ನೀಡಿದ್ದಾರೆ. ಗಾಯಕನು ತನ್ನ ಬಹುಮುಖ ಆಯ್ಕೆಯ ಹಾಡುಗಳಿಂದ ಜನಪ್ರಿಯರಾಗಿದ್ದಾರೆ ಮತ್ತು ಅವರ ಪ್ರತಿಯೊಂದು ಹಾಡು ಬ್ಲಾಕ್‌ಬಸ್ಟರ್ ಆಗುವುದರಲ್ಲಿ ಆಶ್ಚರ್ಯವೇನಿಲ್ಲ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಗಾಯಕ ಕೆಕೆ ಹೆಚ್ಚು ಕಾರುಗಳ ಕ್ರೇಜ್ ಅನ್ನು ಹೊಂದಿದ್ದಾರೆ. ಇತ್ತೀಚೆಗೆ ಕೆಕೆ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರನ್ನು ಖರೀದಿಸಿದ್ದಾರೆ. ಈ ಸೂಪರ್ ಕಾರು ಸ್ಮಾಶಿಂಗ್ ಮೆಟಾಲಿಕ್ ಟ್ಯಾಂಗೋ ರೆಡ್ ಬಣ್ಣವನ್ನು ಹೊಂದಿದೆ, ಆಡಿ ಡೀಲರ್‌ಶಿಪ್ ನಿಂದ ಹೊಸ ಸೂಫರ್ ಕಾರಿನ ವಿತರಣೆ ಪಡೆಯುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಗಾಯಕ ಕೆಕೆ ಅವರು ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಮರಾಠಿ, ಗುಜರಾತಿ ಮತ್ತು ಹಿಂದಿ ಮುಂತಾದ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರು ಅತ್ಯುತ್ತಮ ಭಾರತೀಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಆದರೆ ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಕೆಕೆ ಅವರು ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರನ್ನು ಖರೀದಿಸಲು ತನ್ನ ಆಡಿ ಆರ್8 ಕಾರನ್ನು ಮಾರಾ ಮಾಡಿದ್ದಾರೆ. ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಬೆಲೆಯು ಕ್ಸ್ ಶೋರೂಂ ಪ್ರಕಾರ ರೂ,1.07 ಕೋಟಿಯಾಗಿದೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಗಾಯಕ ಒಂದು ದಶಕದಷ್ಟು ಹಳೆಯದಾದ ಆಡಿ ಆರ್8 ಕಾರನ್ನು ಬದಲಿಸಲು ಉತ್ತಮ ಸಮಯವಾಗಿತ್ತು. ಇದನ್ನು ಬದಲಿಸಿ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಎಂಬ ಪವರ್ ಫುಲ್ ಸೂಪರ್ ಕಾರನ್ನು ಆಯ್ಕೆಮಾಡಿಕೊಂಡಿದ್ದಾರೆ. ಗಾಯಕನು ಕೆಲವು ವಾರಗಳ ಹಿಂದೆ ತನ್ನ ಗ್ಯಾರೇಜ್‌ನಿಂದ ಆಡಿ ಆರ್8 ಕಾರು ನಿರ್ಗಮಿಸಿದೆ ಎಂದು Instagram ನಲ್ಲಿ ಪೋಸ್ಟ್ ಮಾಡಿದ್ದರು.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಗಾಯಕ ಖರೀದಿಸಿದ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಬಗ್ಗೆ ಹೇಳುವುದಾದರೆ, ಇದು ನಾರ್ಡೊ ಗ್ರೇ, ಟರ್ಬೊ ಬ್ಲೂ, ಟ್ಯಾಂಗೋ ರೆಡ್, ಮಿಥೋಸ್ ಬ್ಲ್ಯಾಕ್, ಗ್ಲೇಸಿಯರ್ ವೈಟ್, ನವರಾ ಬ್ಲೂ, ಸೊನೊಮಾ ಗ್ರೀನ್ ಮತ್ತು ಡೇಟೋನಾ ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿವೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನಲ್ಲಿ ವಿ6 2.9-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬ್ರಾಂಡ್‌ನ ಕ್ವಾಟ್ರೊ ಪರ್ಮನೆಂಟ್ ಆಲ್-ವೀಲ್ ಡ್ರೈವ್ ಮೂಲಕ ಸೆಲ್ಫ್-ಲಾಕಿಂಗ್ ಸೆಂಟರ್ ಡಿಫರೆನ್ಷಿಯಲ್‌ನೊಂದಿಗೆ ಎಲ್ಲಾ ನಾಲ್ಕು ವ್ಭೀಲ್ ಗಳೊಂದಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಈ ಎಂಜಿನ್ ನೊಂದಿಗೆ 6,700 ಆರ್‌ಪಿಎಂನಲ್ಲಿ 443 ಬಿಹೆ‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 3.9 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು ಸ್ಪೋರ್ಟ್ಸ್ ಸಸ್ಪೆಂಕ್ಷನ್ ಮತ್ತು ವರ್ಧಿತ ಕಾರ್ಯಕ್ಷಮತೆಗಾಗಿ ಆರ್ಎಸ್ ಸ್ಟೀಲ್ ಬ್ರೇಕ್ ಅನ್ನು ಒಳಗೊಂಡಿದೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹನಿಕಾಬ್ ಗ್ರಿಲ್‌ನೊಂದಿಗೆ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದು ಸೆಡಾನ್‌ನ ಅಗ್ರೇಸಿವ್ ಲುಕ್ ಅನ್ನು ಹೆಚ್ಚಿಸಲು ಆಕ್ಟಿವ್ ಏರೋ ಮತ್ತು ಅಗ್ರೇಸಿವ್ ಬಂಪರ್ ಅನ್ನು ಒಳಗೊಂಡಿದೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಇದರೊಂದಿಗೆ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, 19 ಇಂಚಿನ ಅಲಾಯ್ ವ್ಹೀಲ್ ಗಳು ಹಿಂಭಾಗದ ಸ್ಪಾಯ್ಲರ್ ಫ್ರೇಮ್‌ಲೆಸ್ ಮತ್ತು ಎಲ್ಇಡಿ ಪ್ರೊಜೆಕ್ಷನ್ ಲ್ಯಾಂಪ್ ಗಳನ್ನು ಹೊಂದಿವೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನ ಒಳಭಾಗದಲ್ಲಿ ಪರ್ಫಾರ್ಮೆನ್ಸ್ ಸಲೂನ್ ಅನ್ನು ಅಲ್ಕಾಂಟರಾ ಮತ್ತು ಲೆದರ್ ನಲ್ಲಿ ಡ್ಯಾಶ್ ಬೋರ್ಡ್ ಮೇಲೆ ಮತ್ತು ಕ್ಯಾಬಿನ್ ಅಡ್ಡಲಾಗಿ ಅಲ್ಯೂಮಿನಿಯಂ ಹೊದಿಕೆಯನ್ನು ಹಾಕಲಾಗಿದೆ. ಇನ್ನು ಈ ಕಾರಿನಲ್ಲಿ ಸ್ಪೋರ್ಟ್ ಸೀಟುಗಳು, ಮೂರು-ಸ್ಪೋಕ್ ಲೆದರ್ ಸ್ಟೀರಿಂಗ್ ವೀಲ್, ಪ್ಯಾಡಲ್ ಶಿಫ್ಟರ್‌ಗಳು, ಸ್ಟೇನ್ಲೆಸ್ ಸ್ಟೀಲ್ ಪೆಡಲ್‌ಗಳು ಮತ್ತು ಫುಟ್‌ರೆಸ್ಟ್ ಆರ್‌ಎಸ್ ಸ್ಕಫ್ ಪ್ಲೇಟ್‌ಗಳನ್ನು ಹೊಂದಿವೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಈ ಕಾರಿನ ಡ್ರೈವಿಂಗ್ ಡೈನಾಮಿಕ್ಸ್ ಅನ್ನು ಸುಧಾರಿಸಲು, ಸ್ಫೋರ್ಟ್ಸ್ ಸೀಟುಗಳು ಮಸಾಜ್ ಕಾರ್ಯದೊಂದಿಗೆ ನ್ಯೂಮ್ಯಾಟಿಕ್ ಹೊಂದಾಣಿಕೆ ಮತ್ತು ಡ್ರೈವರ್ ಸೀಟ್ ಹೊಂದಾಣಿಕೆ ಸೆಟ್ಟಿಂಗ್‌ಗಳಿಗೆ ಮೆಮೊರಿಯನ್ನು ಹೊಂದಿದೆ. ಈ ಕಾರಿನಲ್ಲಿರುವ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಆಫಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಇನ್ನು ಮೂರು--ಜೋನ್ ಏರ್ ಕಂಡೀಷನಿಂಗ್ ಆಂಬಿಯೆಂಟ್, ಲೈಟಿಂಗ್ (ಸಿಂಗಲ್ ಕಲರ್) ಕ್ರೂಸ್ ಕಂಟ್ರೋಲ್ ಸಿಸ್ಟಮ್, ಪವರ್ಡ್ ಟೈಲ್‌ಗೇಟ್, ಪನೋರಮಿಕ್ ಸನ್ ರೂಓ, 10-ಸ್ಪೀಕರ್ ಆಡಿಯೋ ಸಿಸ್ಟಂ ಮತ್ತು ಎಂಎಂಐ ನ್ಯಾವಿಗೇಷನ್ ಪ್ಲಸ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಸುರಕ್ಷತಾ ಪೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 6 ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಆಂಟಿ ಥೀಫ್ಟ್ ಬೋಲ್ಟ್‌ಗಳು, ಹೋಲ್ಡ್ ಅಸಿಸ್ಟ್, ಟೋ-ಡಿಮ್ಮಿಂಗ್ ರಿಯರ್-ವ್ಯೂ ಮಿರರ್, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಬಿಎಸ್ ಜೊತೆ ಇಬಿಡಿಯನ್ನು ಹೊಂದಿರುತ್ತದೆ.

ಹಳೆಯ ಕಾರು ಮಾರಾಟ ಮಾಡಿ ಕೋಟಿ ಮೌಲ್ಯದ ಹೊಸ ದುಬಾರಿ ಕಾರು ಖರೀದಿಸಿದ ಖ್ಯಾತ ಗಾಯಕ

ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಪೀಚರ್ಸ್ ಗಳನ್ನು ಹೊಂದಿದೆ. ಈ ಆಡಿ ಆರ್‌ಎಸ್5 ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ 63 ಎಎಂಜಿ ಮತ್ತು ಬಿಎಂಡಬ್ಲ್ಯು ಎಂ3 ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Singer krishnakumar kunnath buys brand new audi rs5 sportback details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X