ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಭಾರತೀಯ ಚಿತ್ರರಂಗ ಕಂಡ ಯಶಸ್ವಿ ಹಿನ್ನೆಲೆ ಗಾಯಕರಲ್ಲಿ ಸೋನು ನಿಗಮ್ ಕೂಡ ಒಬ್ಬರು. ಹಿಂಪಾದ ಧ್ವನಿಯಿಂದ ಸಂಗೀತಪ್ರೇಮಿಗಳ ಹೃದಯದಲ್ಲಿ ಮನದಲ್ಲಿ ಮನೆ ಮಾಡಿರುವ ಗಾಯಕ ಸೋನು ನಿಗಮ್​ಗೆ ಬಾಲಿವುಡ್​ ಹಾಡುಗಳು ತಂದುಕೊಟ್ಟಷ್ಟೇ ಜನಪ್ರಿಯತೆ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದಾಗಲೂ ಲಭ್ಯವಾಗಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ, ಅಸ್ಸಾಮಿ, ಬೆಂಗಾಲಿ, ಮರಾಠಿ, ತುಳು, ಒರಿಯಾ, ನೇಪಾಳಿ, ಇಂಗ್ಲೀಷ್ ಇನ್ನೂ ಕೆಲವು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲೂ ಅವರ ಧ್ವನಿಗೆ ಚಿತ್ರಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಭಾರತೀಯ ಚಿತ್ರರಂಗ ಕಂಡ ಅದ್ಭುತ ಗಾಯಕ ಸೋನು ನಿಗಮ್‌ ಹಿಂಪಾದ ಧ್ವನಿಯಿಂದ ಎಷ್ಟು ಗಮನ ಸೆಳೆಯುತ್ತಾರೋ ಅಷ್ಟೇ ತಮ್ಮ ನೇರ ನುಡಿಯಿಂದ ಹಲವು ಬಾರಿ ಸುದ್ದಿಯಾಗಿದ್ದರು. ಆದರೆ ಈ ಬಾರಿ ಹೊಸ ಪ್ರೀಮಿಯಂ ಕಿಯಾ ಕಾರ್ನಿವಲ್ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಮುಂಬೈನ ಡೀಲರ್‌ಶಿಪ್‌ನಲ್ಲಿ ಸೋನು ನಿಗಮ್ ಹೊಚ್ಚ ಹೊಸ ಕಾರಿನ ವಿತರಣೆಯನ್ನು ಪಡೆದಿದ್ದಾರೆ. ಕಾರ್ನಿವಲ್ ಭಾರತದಲ್ಲಿ ವಾಹನ ತಯಾರಕರ ಪ್ರಮುಖ ಕೊಡುಗೆಯಾಗಿದೆ ಈ ಹೊಸ ಕಿಯಾ ಕಾರ್ನಿವಲ್ ಎಂಪಿವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.24.95 ಲಕ್ಷವಾಗಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಗಾಯಕ ಸೋನು ನಿಗಮ್ ಅವರು ಯಾವ ರೂಪಾಂತರವನ್ನು ಆರಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಉನ್ನತ ಶ್ರೇಣಿಯ ಏಳು ಸೀಟುಗಳ ಆವೃತ್ತಿಯು ವಿಐಪಿ ಸೀಟುಗಳೊಂದಿಗೆ ಬರುತ್ತದೆ. ಇದು ಪ್ರಥಮ ದರ್ಜೆ ಶೈಲಿಯ ಸೌಕರ್ಯಕ್ಕಾಗಿ ಮಧ್ಯಮ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟುಗಳನ್ನು ಇರಿಸುತ್ತದೆ. ಕಾರ್ನಿವಲ್ ಅನ್ನು 2021ರ ಮಾದರಿ ವರ್ಷಕ್ಕೆ ಈ ವರ್ಷದ ಆರಂಭದಲ್ಲಿ ನವೀಕರಿಸಲಾಗಿದೆ ಮತ್ತು ಬಾಹ್ಯ ಸೂಕ್ಷ್ಮವಾದ ನವಿಕರಣ ಪಡೆದಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಭಾರತದಲ್ಲಿ ಮಾರಾಟವಾಗುವ ಕಾರ್ನಿವಲ್ ಮಾದರಿಯು ಅಂತರರಾಷ್ಟ್ರೀಯ ಆವೃತ್ತಿಗಿಂತ ಒಂದು ತಲೆಮಾರಿನ ಹಿಂದೆ ಇದೆ. ಇದು ಇನ್ನೂ ಖರೀದಿದಾರರನ್ನು ಆಕರ್ಷಿಸಲು ನಿರ್ವಹಿಸುತ್ತದೆ. ಹೊಸ ಕಿಯಾ ಕಾರ್ನಿವಲ್ ಎಂಪಿವಿಯು 8 ಇಂಚಿನ ಇನ್ಫೋಟೈನ್‌ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್, ಇಸಿಎಂ ಮಿರರ್, ಹಿಂಭಾಗದ ಪ್ರಯಾಣಿಕರಿಗಾಗಿ ಸಿಂಗಲ್ 10.1 ಇಂಚಿನ ಡಿಸ್‌ಪ್ಲೇ, ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಗಳನ್ನು ಒಳಗೊಂಡಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಇದರ ಜೊತೆಗೆ ಸಂಪೂರ್ಣ ಸುಸಜ್ಜಿತವಾದ ಲಿಮೋಸಿನ್ ಪ್ಲಸ್ ಮಾದರಿಯು ಹರ್ಮನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10 ವೇ ಪವರ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ವೆಂಟಿಲೇಷನ್, ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ನಾಬ್, ಪ್ರೀಮಿಯಂ ವುಡ್ ಗಾರ್ನಿಷ್, ಡ್ಯುಯಲ್ 10.1 ಇಂಚಿನ ಹಿಂಭಾಗದ ಡಿಸ್ಪ್ಲೇ, ಟಿಪಿಎಂಎಸ್ ಫೀಚರ್ ಗಳನ್ನು ಹೊಂದಿವೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಕಿಯಾ ಕಾರ್ನಿವಲ್ ಎಂಪಿವಿಯು 18 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್‌ಗಳನ್ನು ಎಲ್ಲಾ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ ಪ್ರೀಮಿಯಂ ಲೆಥರೆಟ್ ಸೀಟುಗಳನ್ನು ಈಗ ಪ್ರೇಸ್ಟಿಜ್, ಲಿಮೋಸಿನ್ ಹಾಗೂ ಲಿಮೋಸಿನ್ ಪ್ಲಸ್ ಮಾದರಿಗಳಲ್ಲಿ ನೀಡಲಾಗುತ್ತದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಇನ್ನು ಹೆಚ್ಚುವರಿ ಬೆಂಬಲ, ಸೌಕರ್ಯವನ್ನು ನೀಡಲು ಡೈಮಂಡ್ ಶೇಪ್ ಕ್ವಿಲ್ಟಿಂಗ್‌ನೊಂದಿಗೆ ಬ್ರಾಂಡ್ ವಿಐಪಿ ಸೀಟಿನೊಂದಿಗೆ ಟಾಪ್ ಮಾದರಿಯನ್ನು ನೀಡಲಾಗಿದೆ. 2021ರ ಎಂಪಿವಿಯ ಒಟ್ಟಾರೆ ನೋಟವನ್ನು ಹೆಚ್ಚಿಸುತ್ತವೆ. ಉಳಿದ ಫೀಚರ್ ಗಳು, ಬಣ್ಣಗಳು ಹಾಗೂ ಎಂಜಿನ್ ಆಯ್ಕೆಗಳು ಹಿಂದಿನ ಮಾದರಿಯಂತೆಯೇ ಇರಲಿವೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಎಂಪಿವಿಯ ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 197 ಬಿ‌ಹೆಚ್‌ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್'ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಕಾರ್ನಿವಲ್ ಎಂಪಿವಿಯನ್ನು ಕಂಪ್ಲೀಟ್ಲಿ ನಾಕ್ ಡೌನ್ (ಸಿಕೆಡಿ) ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ನಂತರ ಆಂಧ್ರಪ್ರದೇಶದಲ್ಲಿರುವ ಕಿಯಾ ಕಂಪನಿಯ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುತ್ತಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಭಾರತದಲ್ಲಿ ಬಿಡುಗಡೆಯಾಗಿರುವ 2021ರ ಕಾರ್ನಿವಲ್ ಎಂಪಿವಿಯನ್ನು ಕಿಯಾ ಕಂಪನಿಯು ಹೊಸ ಲೋಗೋ ಹಾಗೂ ಸುಧಾರಿತ ಮಾದರಿಗಳೊಂದಿಗೆ ಅಪ್ ಡೇಟ್ ಮಾಡಿದೆ. ಈ ಮೂಲಕ ಈ ಸೆಗ್ ಮೆಂಟ್ ಗ್ರಾಹಕರಿಗೆ ಹೆಚ್ಚು ಆಯ್ಕೆಯನ್ನು ನೀಡುತ್ತದೆ. ಕಾರ್ನಿವಲ್ ಎಂಪಿವಿಯು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಇದರಿಂದ ಈ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದೊರೆಯುವ ಜನಪ್ರಿಯ ಐಷಾರಾಮಿ ಎಂಪಿವಿ ಆಗಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಕಿಯಾ ಕಂಪನಿಯು 2021ರ ಅಕ್ಟೋಬರ್ ತಿಂಗಳಿನಲ್ಲಿ ಕಾರ್ನಿವಲ್‌ನ 400 ಯೂನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಅದರ ಪ್ರೀಮಿಯಂ ಬೆಲೆಯನ್ನು ಪರಿಗಣಿಸಿ ಉತ್ತಮ ಸಂಖ್ಯೆಯಾಗಿದೆ. ಇನ್ನು ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 16,331 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕಿಯಾ ಕಂಪನಿಯು 21,021 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಇದು ವರ್ಷದಿಂದ ವರ್ಷಕ್ಕೆ ಸುಮಾರು ಶೇ.22.31 ರಷ್ಟು ಮಾರಾಟದಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ.

ಹೊಸ Kia Carnival ಕಾರು ಖರೀದಿಸಿದ ಗಾಯಕ ಸೋನು ನಿಗಮ್

ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕಿಯಾ ಇಂಡಿಯಾ 14,441 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.13.09 ರಷ್ಟು ಮಾರಾಟದ ಬೆಳವಣಿಗೆಯನ್ನು ಕಂಡಿದೆ. ಆದರೆ ವಾರ್ಷಿಕ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ಕಂಡಿದೆ. ಕಿಯಾ ಇಂಡಿಯಾ ಕಂಪನಿಯ ಮಾರಾಟದ ದೊಡ್ಡ ಭಾಗವನ್ನು ಅದರ ಎಸ್‍ಯುವಿಗಳಾದ ಸೆಲ್ಟೋಸ್ ಮತ್ತು ಸೊನೆಟ್‌ನಿಂದ ಪಡೆದುಕೊಂಡಿದೆ.ಮುಂದಿನ ದಿನಗಳ ಕಾರು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಬಹುದು.

Article Published On: Tuesday, November 30, 2021, 15:09 [IST]
English summary
Singer sonu nigam buys new kia carnival mpv price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+