ನೈಸರ್ಗಿಕ ವಿಪತ್ತಿಗೆ ತುತ್ತಾದ ಕಾರ್ವೆಟ್ ಮ್ಯೂಸಿಯಂ ಸಂರಕ್ಷಣೆ
ಭೂಕಂಪಗಳಂತಹ ನೈಸರ್ಗಿಕ ವಿಪತ್ತಿನ ವೇಳೆ ಭೂಮಿಯ ಆಳದ ವರೆಗೆ ಕುಳಿಗಳು ಬೀಳುವುದು ಸಾಮಾನ್ಯ. ಆದರೆ ಕೆಲವು ತಿಂಗಳುಗಳ ಹಿಂದೆ ಅಮೆರಿಕ ಕಾರ್ವೆಟ್ ಕಾರು ಸಂಗ್ರಹಾಲಯದಲ್ಲಿ ಸಂಭವಿಸಿದ ಇಂತಹದೊಂದು ದುರಂತದಲ್ಲಿ ಅನೇಕ ಕಾರ್ವೆಟ್ ಮಾದರಿಗಳು ದೈತ್ಯಕಾರಾದ ಕುಳಿಯೊಳಗೆ ಸೇರಿದ್ದವು.
ಮಾನವನ ವೈಜ್ಞಾನಿಕ ತಪ್ಪಿನಿಂದಾಗಿ ಅಥವಾ ನೈಸರ್ಗಿಕವಾಗಿ ಕುಳಿ ಬಿದ್ದಿದೆಯೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ. ಆದರೆ ಆಕಸ್ಮಾತ್ ಉಂಟಾದ ಇಂತಹ ಬೃಹತ್ತಾಕಾರದ ಕುಳಿಯಿಂದಾಗಿ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೀರಿಸಲಾಗಿದ್ದ ಎಂಟರಷ್ಟು ಕಾರುಗಳು ಸಂಪೂರ್ಣವಾಗಿ ಹಾನಿಗೀಡಾಗಿದ್ದವು.

ಅಮೆರಿಕದ ಕೆಂಚುಕಿ ರಾಷ್ಟ್ರೀಯ ಕಾರ್ವೆಟ್ ಸಂಗ್ರಹಾಲಯದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಇಂತಹದೊಂದು ಅಪಘಾತ ಸಂಭವಿಸಿತ್ತು. ಘಟನೆಯ ಬೆನ್ನಲ್ಲೇ ಸಂಗ್ರಹಾಲಯವನ್ನು ತಾತ್ಕಾಲಿಕವಾಗಿ ಮುಚ್ಚುಗಡೆಗೊಳಿಸಲಾಗಿತ್ತು.

ಹಾನಿಗೀಡಾದ ಕಾರುಗಳು
ಜನರಲ್ ಮೋಟಾರ್ಸ್‌ನ 1993 ಝಡ್‌ಆರ್-1 ಸ್ಪೈಡರ್ ಹಾಗೂ 2009 ಝಡ್‌ಆರ್1 ಬ್ಲೂ ಡೆವಿಲ್ ಮತ್ತು ಕಾರ್ವೆಟೆಯ 1962ರ ಬ್ಲ್ಯಾಕ್ ಕಾರ್ವೆಟ್, 1984ರ ಪಿಪಿಜಿ ಪೇಸ್ ಕಾರ್, 1992ರ ವೈಟ್ 1 ಮಿಲಿಯನ್ತ್ ಕಾರ್ವೆಟೆ, 1993ರ ರುಬಿ ರೆಡ್, 2001ರ ಮಲೆಟ್ ಹಮ್ಮರ್ ಮತ್ತು 2009ರ ವೈಟ್ ಕಾರ್ವೆಟ್ ಕಾರುಗಳು ಜಖಂ ಆಗಿದ್ದವು.

ಇದೀಗ ಸಭೆ ಸೇರಿರುವ ಕೆಂಚುಕಿ ಮ್ಯೂಸಿಯಂ ಅಧಿಕಾರಿಗಳು ನೈಸರ್ಗಿಕ ವಿಪತ್ತಿಗೆ ತುತ್ತಾಗಿರುವ ಕಾರು ಹಾಗೂ ಪ್ರದೇಶವನ್ನು ಸಂರಕ್ಷಿಸಲು ನಿರ್ಧರಿಸಿದೆ.

ಈ ರಾಷ್ಟ್ರೀಯ ಸಂಗ್ರಹಾಲಯ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕಾಗಿ 40 ಅಡಿ ಅಗಲ ಹಾಗೂ 60 ಅಡಿ ಆಳದಷ್ಟು ಕುಳಿಯನ್ನು ಸಂರಕ್ಷಿಸಲು ನಿರ್ಧರಿಸಲಾಗಿದೆ.

ಮ್ಯೂಸಿಯಂ ಸಂರಕ್ಷಿಸಲು ಅಧಿಕಾರಿಗಳ ಬಳಿ ಮೂರು ಆಯ್ಕೆಗಳಿದ್ದವು. ಒಂದನೇಯದ್ದು ನೈಸರ್ಗಿಕ ವಿಪತ್ತಿನಿಂದಾಗಿ ಉಂಟಾಗಿರುವ ಕುಳಿಯನ್ನು ಸಂಪೂರ್ಣವಾಗಿ ಮುಚ್ಚುಗಡೆಗೊಳಿಸುವುದು, ಎರಡನೇಯದಾಗಿ ಈಗಿರುವ ಹಾಗೆಯೇ ಬಿಟ್ಟುಬಿಡುವುದು ಹಾಗೂ ಕೊನೆಯದಾಗಿ ಕುಳಿಯನ್ನು ಪರಿಷ್ಕರಿಸುವುದು.

ಬಳಿಕ ನಡೆದ ಅಧಿಕಾರಿಗಳ ಮತದಾನದ ಬಳಿಕ ಕಾರ್ವೆಟೆ ಕುಳಿಯನ್ನು 40 ಅಡಿ ಅಗಲದಿಂದ 20ಕ್ಕೂ ಹಾಗೆಯೇ 60 ಆಡಿ ಆಳದ ಕುಳಿಯನ್ನು 30 ಅಡಿಗೆ ಇಳಿಸಲು ನಿರ್ಧರಿಸಲಾಗಿದೆ.

ಮುಂದಿನ ದಿನಗಳ ಅಧ್ಯಯನದ ಬಳಿಕ ಇನ್ನಷ್ಟು ಪರಿಷ್ಕರಣೆ ನಿರೀಕ್ಷಿಸಬಹುದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಕಾರ್ವೆಟೆ ಸಂಗ್ರಹಾಲಯ ಸಂರಕ್ಷಿಸುವ ನಿಟ್ಟಿನಲ್ಲಿ ನಾವೀನ್ಯತೆಯ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದಿದ್ದಾರೆ.

ಕಾರ್ವೆಟ್ ಸಂಗ್ರಹಾಲಯ

ಕಾರ್ವೆಟ್ ಸಂಗ್ರಹಾಲಯ


Click it and Unblock the Notifications