ಮೇಕ್ ಇನ್ ಇಂಡಿಯಾ ಮೊದಲೇ ಭಾರತದಲ್ಲಿ ನಿರ್ಮಿತ ಮಿಲಿಟರಿ ವಾಹನಗಳು

By Nagaraja

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸೇರಿದಂತೆ ವಿದೇಶದಲ್ಲೂ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಉತ್ತೇಜನ ನೀಡಲಾಗುತ್ತಿದ್ದು, ಭಾರಿ ಹೂಡಿಕೆಗೆ ಹುರಿದುಂಬಿಸಲಾಗುತ್ತಿದೆ. ಭಾರತ ಒಂದು ಅಶ್ವಶಕ್ತಿಯಾಗಿ ಬೆಳೆದು ನಿಲ್ಲಲು ಮಿಲಿಟರಿ ಪವರ್ ಕೂಡಾ ಅಷ್ಟೇ ಮುಖ್ಯವೆನಿಸುತ್ತದೆ.

ಅಷ್ಟಕ್ಕೂ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಮೊದಲೇ ಭಾರತದಲ್ಲೇ ನಿರ್ಮಾಣವಾಗಿರುವ ಕೆಲವು ಮಿಲಿಟರಿ ವಾಹನಗಳನ್ನು ನಾವಿಂದು ಪರಿಚಯಿಸಲಿದ್ದೇವೆ.

 ಅಶೋಕ್ ಲೇಲ್ಯಾಂಡ್ ಮೈನ್ ಪ್ರೊಟೆಕ್ಟಡ್ ವೆಹಿಕಲ್

ಅಶೋಕ್ ಲೇಲ್ಯಾಂಡ್ ಮೈನ್ ಪ್ರೊಟೆಕ್ಟಡ್ ವೆಹಿಕಲ್

ಅಶೋಕ್ ಲೇಲ್ಯಾಂಡ್ ಮೈನ್ ಪ್ರೊಟೆಕ್ಟಡ್ ವೆಹಿಕಲ್ ಬಹು ಬಳಕೆಯ ವಾಹನದಲ್ಲಿ ಚಾಲಕ ಹಾಗೂ ಸಹ ಚಾಲಕ ಸೇರಿದಂತೆ 10 ಮಂದಿ ಸೈನಿಕರಿಗೆ ಪ್ರಯಾಣಿಸಬಹುದಾಗಿದೆ. ಶಕ್ತಿಯುತ ಗಣಿಗಾರಿಕಾ ಸ್ಪೋಟವನ್ನು ತಡೆಯುವಂತಹ ರಕ್ಷಣಾ ಕವಚವನ್ನು ಹೊಂದಿರುವ ಈ ವಾಹನ ನೆಪ್ಚುನ್ ರೇಂಜ್‌ನ ಇನ್ ಲೈನ್ 6 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಪವರ್ 230 ಅಶ್ವಶಕ್ತಿ (800 ಎನ್‌ಎಂ ತಿರುಗುಬಲ) ಮತ್ತು 360 ಅಶ್ವಶಕ್ತಿ (1400 ಎನ್‌ಎಂ ತಿರುಗುಬಲ)

02. ಮಹೀಂದ್ರ ಏಕ್ಸ್

02. ಮಹೀಂದ್ರ ಏಕ್ಸ್

ಮಹೀಂದ್ರ ಏಕ್ಸ್ ಒಂದು ಮಿಲಿಟರಿ ಸಿಬ್ಬಂದಿ ವಾಹಕವಾಗಿದ್ದು, ಯುದ್ಧ ಹಾಗೂ ಯುದ್ಧ ರಹಿತ ಪರಿಸ್ಥಿತಿಯನ್ನು ನಿಭಾಯಿಸುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಹೀಂದ್ರ ಏಕ್ಸ್ ಇದುವರೆಗೆ ಸೇರ್ಪಡೆಗೊಳ್ಳದಿದ್ದರೂ ಮಿಲಿಟರಿ ಬೇಡಿಕೆಯ ಅನುಗುಣವಾಗಿ ಏಕ್ಸ್ ವಾಹನವನ್ನು ಮಹೀಂದ್ರ ಮಿಲಿಟರಿ ಡಿಫೆನ್ಸ್ ವ್ಯವಸ್ಥೆಯು ವಿದೇಶಗಳಿಗೆ ಪೂರೈಸುತ್ತಿದೆ. ಇದೊಂದು ಹಮ್ಮರ್ ಎಚ್2 ತದ್ರೂಪವಾಗಿದೆ.

ಎಂಜಿನ್: ಮರ್ಸಿಡಿಸ್ ಬೆಂಝ್‌ನಿಂದ ಆಮದು ಮಾಡಲಾಗಿರುವ 2.7 ಲೀಟರ್ 5 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 340 ಎನ್ ಎಂ ತಿರುಗುಬಲದಲ್ಲಿ 172 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

03. ಮಹೀಂದ್ರ ಮಾರ್ಕ್ಸ್‌ಮ್ಯಾನ್

03. ಮಹೀಂದ್ರ ಮಾರ್ಕ್ಸ್‌ಮ್ಯಾನ್

ಉಗ್ರರ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಪ್ರತಿ ದಾಳಿ ನಡೆಸುವಷ್ಟು ಶಕ್ತವಾಗಿರುವ ಮಹೀಂದ್ರ ಮಾರ್ಕ್ಸ್‌ಮ್ಯಾನ್ ಬುಲೆಟ್ ಫ್ರೂಕ್ ಗಾಡಿ ಸಂಪೂರ್ಣ ಭದ್ರತಾ ಕವಚವನ್ನು ಹೊಂದಿದೆ. ಬೆಂಗಳೂರು ಹಾಗೂ ಮುಂಬೈ ಪೊಲೀಸ್ ಸಹ ಇದರ ಸೇವೆಯನ್ನು ಬಳಕೆ ಮಾಡುತ್ತಿದೆ. ಮಹೀಂದ್ರ ಮ್ಯಾಕ್ಸ್ ಮ್ಯಾನ್ ‌ನಲ್ಲಿ 2.5 ಲೀಟರ್ ಸಿಆರ್ ಡಿಇ ಎಂಜಿನ್ ಬಳಕೆ ಮಾಡಲಾಗಿದ್ದು, 105 ಅಶ್ವಶಕ್ತಿ (228 ತಿರುಗುಬಲ) ಉತ್ಪಾದಿಸು ಸಾಮರ್ಥ್ಯ ಹೊಂದಿದೆ. ಅಲ್ಲದೆ 3200 ಕೆ.ಜಿಗಳಷ್ಟು ಭಾರವನ್ನು ಹೊಂದಿರಲಿದೆ.

04. ಅಶೋಕ್ ಲೇಲ್ಯಾಂಡ್ ಸೂಪರ್ ಸ್ಟಾಲಿಯನ್ 8X8

04. ಅಶೋಕ್ ಲೇಲ್ಯಾಂಡ್ ಸೂಪರ್ ಸ್ಟಾಲಿಯನ್ 8X8

ಮಗದೊಂದು ಮಿಲಿಟರಿ ಸಿಬ್ಬಂದಿ ವಾಹಕವಾಗಿರುವ ಅಶೋಕ್ ಲೇಲ್ಯಾಂಡ್ ಸೂಪರ್ ಸ್ಟಾಲಿಯನ್ 8X8, ಭಾರತೀಯ ಸೇನೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಅಷ್ಟೇ ಯಾಕೆ 65,000ದಷ್ಟು ಇಂತಹ ವಾಹನಗಳು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದೆ. ಅದು ರಾಜಸ್ತಾನವೇ ಆಗಿರಲಿ ಅಥವಾ ಲಡಾಕ್ ಎಂತಹುದೇ ಪರಿಸ್ಥಿತಿ ನಿರ್ವಹಿಸುವಲ್ಲಿ ಪರಿಣಾಮಕಾರಿಯೆನಿಸಿದೆ. ಇದರ ಡೀಸೆಲ್ ಎಂಜಿನ್ 1400 ಎನ್ ಎಂ ತಿರುಗುಬಲದಲ್ಲಿ 360 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

05. ಟಾಟಾ ಆರ್ಮರ್ಡ್ ಪರ್ಸನಲ್ ಕ್ಯಾರಿಯರ್ 4x4

05. ಟಾಟಾ ಆರ್ಮರ್ಡ್ ಪರ್ಸನಲ್ ಕ್ಯಾರಿಯರ್ 4x4

ಟಾಟಾದ ವ್ಯಯಕ್ತಿಯ ಸಿಬ್ಬಂದಿ ವಾಹಕವಾಗಿರುವ ಎಪಿಸಿ 4x4 ಮಿಲಿಟರಿ ಸೈನ್ಯಕ್ಕೆ ಸಂಪೂರ್ಣ ಬೆಂಗಾಗಲು ವಾಹನವಾಗಿರಲಿದೆ. ಈ 14 ಸೀಟುಗಳ ಶಕ್ತಿಶಾಲಿ ಶಸ್ತ್ರಸಜ್ಜಿತ ವಾಹನವು ಟರ್ಬೊ ಡೀಸೆಲ್ ಎಂಜಿನ್ ನಿಯಂತ್ರಿಸ್ಪಡುತ್ತಿದ್ದು, 925 ಎನ್‌ಎಂ ತಿರುಗುಬಲದಲ್ಲಿ 240 ಅಶ್ವಶಕ್ತಿ ಉತ್ಪಾದಿಸುತ್ತದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಅಲ್ಲದೆ ಶಕ್ತಿಶಾಲಿ ಗ್ರೇನೆಡ್ ದಾಳಿಯನ್ನು ಎದುರಿಸುವಷ್ಟು ಸಮರ್ಥವಾಗಿದೆ.

06. ಟಾಟಾ ಲೈಟ್ ಸ್ಪೆಷಲಿಸ್ಟ್ ವೆಹಿಕಲ್

06. ಟಾಟಾ ಲೈಟ್ ಸ್ಪೆಷಲಿಸ್ಟ್ ವೆಹಿಕಲ್

ಹಮ್ಮರ್ ಎಚ್2 ವಿನ್ಯಾಸದಿಂದ ಸ್ಪೂರ್ತಿ ಪಡೆದಿರುವ ಟಾಟಾ ಲೈಟ್ ಸ್ಪೆಷಲಿಸ್ಟ್ (ಎಲ್‌ಎಸ್‌ವಿ) ವಾಹನವನ್ನು ಭಾರತೀಯ ಸೇನೆಯ ಸಿಬ್ಬಂದಿಗಳ ಅಗತ್ಯಗಳಿಗಾಗಿ ನಿರ್ಮಿಸಲಾಗಿತ್ತು. ಇದು ಯಾವುದೇ ಪ್ರದೇಶಕ್ಕೂ ತೆರಳುವ ಸಾಮರ್ಥ್ಯವನ್ನು ಹೊಂದಿದ್ದು, 3 ಲೀಟರ್ ಡಿಕೊರ್ ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ 320 ಎನ್‌ಎಂ ತಿರುಗುಬಲದಲ್ಲಿ 115 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇನ್ನುಳಿದಂತೆ ಫೋರ್ ವೀಲ್ ಡ್ರೈವ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

More from DriveSpark

Article Published On: Thursday, October 22, 2015, 9:11 [IST]
English summary
Six powerful made in India military vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+