ನಿಮಗೂ ಇಂತಹ ಹೆಲ್ಮೆಟ್‌ಗಳು ಬೇಕೇ?

Written By:

ನೀವು ಹೊಸ ಕಾರೊಂದನ್ನು ಚಾಲನೆ ಮಾಡುವುದಾದ್ದಲ್ಲಿ ಜಿಪಿಎಸ್, ಕ್ಯಾಮೆರಾ, ನೇವಿಗೇಷನ್‌ಗಳಂತಹ ಅನೇಕ ಸೌಲಭ್ಯಗಳು ನಿಮಗೆ ಲಭಿಸಲಿದೆ. ಇದು ನಿಮ್ಮ ಚಾಲನೆಯನ್ನು ಸರಳವಾಗಿಸುತ್ತದೆ.

ಸರಿಯಾದ ಹೆಲ್ಮೆಟ್ ಬಳಕೆಗೆ ಸಲಹೆ ಪಡೆಯಿರಿ

ಆದರೆ ಬೈಕ್‌ವೊಂದರಲ್ಲಿ ಸಂಚರಿಸುವಾಗ ನಿಮ್ಮ ಪರಿಸ್ಥಿತಿ ಹೇಗಿರುತ್ತದೆ? ಸುತ್ತಲಿರುವ ವಾಹನಗಳ ಶಬ್ದ ಮಾಲಿನ್ಯವು ನಿಮ್ಮಲ್ಲಿ ಕಿರಿಕಿರಿಯನ್ನುಂಟು ಮಾಡಬಹುದು. ಇದನ್ನೇ ಗಮನದಲ್ಲಿರಿಸಿಕೊಂಡಿರುವ ಅಮೆರಿಕ ಮೂಲದ ಸ್ಕಲಿ (Skully) ಎಂಬ ಸಂಸ್ಥೆಯು ಮುಂದುವರಿದ ಬೈಕ್ ಹೆಲ್ಮೆಟ್‌ಗಳನ್ನು ನಿಮ್ಮ ಮುಂದಿಡುತ್ತಿದೆ.

ನಿಮಗೂ ಇಂತಹ ಹೆಲ್ಮೆಟ್‌ಗಳು ಬೇಕೇ?

ಬೈಕ್ ಚಾಲನೆ ಹೆಚ್ಚು ಸುರಕ್ಷಿತ ಎನಿಸಿಕೊಳ್ಳುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ನೀವು ಹೊಸ ಬೈಕ್ ಖರೀದಿಗಾರರಾಗಿದ್ದರೆ ಖಂಡಿತವಾಗಿಯೂ ಇದರಲ್ಲಿರುವ ಹೊಸ ಹೊಸ ತಂತ್ರಾಂಶಗಳು ನಿಮ್ಮ ಚಾಲನೆಯನ್ನು ಸುಲಭಗೊಳಿಸಲಿದೆ.

ನಿಮಗೂ ಇಂತಹ ಹೆಲ್ಮೆಟ್‌ಗಳು ಬೇಕೇ?

ಆಂಡ್ರಾಯ್ಡ್ ನಿಯಂತ್ರಿತ ಸ್ಕಲಿ ಎಆರ್-1 ಹೆಲ್ಮೆಟ್‌ಗಳಲ್ಲಿ, ಪರದೆ ಹಾಗೂ ಬ್ಲೂಟೂತ್ ವಾಯ್ಸ್ ಕಂಟ್ರೋಲ್ ಆಳವಡಿಸಲಾಗಿದೆ. (ಅಂತಿಮ ಚಿತ್ರ ಪುಟದಲ್ಲಿ ಕೊಡಲಾಗಿರುವ ವೀಡಿಯೋ ವೀಕ್ಷಿಸಿ)

ನಿಮಗೂ ಇಂತಹ ಹೆಲ್ಮೆಟ್‌ಗಳು ಬೇಕೇ?

ಇದು ನಿಮ್ಮ ಫೋನ್‌ನಿಂದ ನೇರವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಇದರಲ್ಲಿ ಜಿಪಿಎಸ್ ವಿವರ, ಆಡಿಯೋ ಕಂಟ್ರೋಲ್ ಅಷ್ಟೇ ಯಾಕೆ ಕೈ ಸಹಾಯವಿಲ್ಲದೆ ಫೋನ್ ಕಾಲ್ ಕೂಡಾ ಮಾಡಬಹುದಾಗಿದೆ.

ನಿಮಗೂ ಇಂತಹ ಹೆಲ್ಮೆಟ್‌ಗಳು ಬೇಕೇ?

ರಿಯರ್ ವ್ಯೂ ಕ್ಯಾಮೆರಾ ಸ್ಕಲಿ ಹೆಲ್ಮೆಟ್‌ನಲ್ಲಿ ಮಗದೊಂದು ಆಕರ್ಷಕ ವೈಶಿಷ್ಟ್ಯವಾಗಿರಲಿದೆ. ಅಂದರೆ ಹಿಂದುಗಡೆ ತಿರುಗಿ ನೋಡದೆಯೇ ಸ್ಪಷ್ಟ ಚಿತ್ರಣ ದೊರಕಲಿದೆ.

ನಿಮಗೂ ಇಂತಹ ಹೆಲ್ಮೆಟ್‌ಗಳು ಬೇಕೇ?

ಒಟ್ಟಿನಲ್ಲಿ ಕಾರಿನಲ್ಲಿ ದೊರಕುವ ಆರಾಮದಾಯಕ ಚಾಲನಾ ಅನುಭವ ನಿಮಗೆ ಸ್ಕಲಿ ಹೆಲ್ಮೆಟ್‌ನಲ್ಲಿ ದೊರಕಲಿದೆ. ಇದು ಅನನುಭವಿ ಚಾಲಕರಿಗೂ ಹೆಚ್ಚು ಸಹಕಾರಿಯಾಗಲಿದೆ.

ವಿಶಿಷ್ಟತೆ

ವಿಶಿಷ್ಟತೆ

  • ಇಂಟೆಗ್ರೇಟಡ್ ಹೆಡ್ಸ್-ಅಪ್ ಡಿಸ್‌ಪ್ಲೇ,
  • 180 ಡಿಗ್ರಿ ರಿಯರ್ ವ್ಯೂ ಕ್ಯಾಮೆರಾ
  • ಜಿವಿಎಸ್ ಮ್ಯಾಪಿಂಗ್ (ನೇವಿಗೇಷನ್)
  • ಸ್ಮಾರ್ಟ್ ಫೋನ್ ಕನೆಕ್ಷನ್,
ಪ್ರಮುಖಾಂಶಗಳು

ಪ್ರಮುಖಾಂಶಗಳು

  • ಹಗುರ ಭಾರ, ಏರೋಡೈನಾಮಿಕ್
  • 3ಡಿ ಲೇಸರ್ ಕಟ್,
  • ವೆಂಟಿಲೇಷನ್,
  • ಆಂಟಿ ಫಾಗ್, ಆಂಟಿ ಸ್ಕ್ರಾಚ್

ವೀಡಿಯೋ ವೀಕ್ಷಿಸಿ

English summary
The Silicon Valley based company Skully Helmets has created a motorcycle helmet that plenty of modern technological features. The Skully AR-1 is an augmented reality motorcycle helmet. Take a look.
Story first published: Tuesday, July 8, 2014, 17:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark