ವಿಮಾನದಲ್ಲಿ 360 ಡಿಗ್ರಿ ವಿಹಂಗಮ ನೋಟ
ಬಸ್ಸಿನಲ್ಲಿ ಪ್ರಯಾಣದ ವೇಳೆ ಚಿಕ್ಕ ಮಕ್ಕಳಿಗೆ ಬದಿಯಲ್ಲಿರುವ ವಿಂಡೋ ಸೀಟೇ ಬೇಕಾಗುತ್ತದೆ. ಬೆಳೆದು ದೊಡ್ಡವರಾದ ಮೇಲೂ ತಮ್ಮ ಈ ಬಯಕೆಯಿಂದ ಬದಲಾಗಿರುವುದಿಲ್ಲ. ಇನ್ನು ವಿಮಾನದ ಪ್ರಯಾಣದ ಅನುಭವವನ್ನು ಬೇರೆ ಹೇಳಬೇಕಾಗಿಲ್ಲ.
ಕೆಲವರಂತೂ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನದಲ್ಲಿ ಹಾರಾಟ ನಡೆಸಬೇಕೆಂಬ ಕನಸು ಕಟ್ಟಿಕೊಂಡಿರುತ್ತಾರೆ. ಅಂತವರಿಗೆ ಅದ್ಭುತ ಅನುಭವ ನೀಡುವ ಸಲುವಾಗಿ ವ್ಯೋಮಯಾನ ಸಂಸ್ಥೆಗಳು ಹೊಸ ಹೊಸ ಯೋಜನೆಗಳೊಂದಿಗೆ ಮುಂದೆ ಬರುತ್ತಿದೆ. ನಾವಿಂದು ಪರಿಚಯಿಸುವ ವಿಮಾನವು ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಲಿದೆ.

ವಿಂಡ್ ಸ್ಪೀಡ್ ಟೆಕ್ನಾಲಜೀಸ್ ಎಂಬ ಸಂಸ್ಥೆಯು ಸ್ಕೈಡೆಕ್ ಎಂಬ ಈ ವಿನೂತನ ವಿಮಾನವನ್ನು ವಿನ್ಯಾಸಗೊಳಿಸಿದೆ. ಆಕಾಶದ ಮೇಲೆ ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುವುದು ಇದರ ಪ್ರಮುಖ ಗುರಿಯಾಗಿದೆ.

ಪ್ರಸ್ತುತ ಕಾನ್ಸೆಪ್ಟ್ ಹಂತದಲ್ಲಿರುವ ಈ ವಿಮಾನವು ಯಾವಾಗ ಬೇಕಾದರೂ ನಿರ್ಮಾಣ ಹಂತವನ್ನು ತಲುಪುವುದು. ಈ ಮುಖಾಂತರ ದೂರ ಪ್ರಯಾಣದ ಪರಿಪೂರ್ಣ ಅನುಭವ ನೀಡಲಿದೆ.

ವಿಮಾನದ ಮಧ್ಯಭಾಗದಲ್ಲಿ ಗಾಜುಗಳಿಂದ ಆವರಿಸಿರುವ ಆಸನವನ್ನು ತಯಾರಿಸಲಾಗಿದೆ. ಇದು 360 ಡಿಗ್ರಿ ಸುತ್ತಳತೆಯಲ್ಲಿ ತಿರುಗಲಿದ್ದು ಹೊರ ಪ್ರದೇಶದ ವಿಹಂಗಮ ನೋಟ ನೀಡಲಿದೆ.

ಇದುವರೆಗೆ ಯಾತ್ರಿಕರಿಗೆ ವಿಮಾನ ಹಾರಾಟದ ವೇಳೆ ಹೊರಗಡೆ ಏನು ಸಂಭವಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವಿರಲಿಲ್ಲ. ಆದರೆ ಮೋಡಗಳ ಮಧ್ಯೆ ಸಂಭವಿಸುವ ಅದ್ಭುತ ನೋಟವನ್ನು ಇದು ಬಿತ್ತರಿಸಲಿದೆ.

ಯಾವತ್ತೂ ಕೇಳಿ ತಿಳಿಯುವುದಕ್ಕಿಂತಲೂ ಮಿಗಿಲಾಗಿ ನೈಜ ದರ್ಶನಕ್ಕೆ ಹೆಚ್ಚಿನ ಆಕರ್ಷಣೆಯಿರುತ್ತದೆ. ವಿಮಾನದ ಮೇಲ್ಬಾಗದಲ್ಲಿ ಆಳವಡಿಸಲಾಗಿರುವ ಈ ಆಸನವನ್ನು ತಲುಪಲು ಮೆಟ್ಟಿಲುಗಳನ್ನು ಇಡಲಾಗಿದೆ.

ಸಂಸ್ಥೆಯ ಪ್ರಕಾರ ಸಣ್ಣ ವಿಮಾನಗಳಿಂದ ತೊಡಗಿ ಎಲ್ಲ ತರಹದ ವಿಮಾನಗಳಲ್ಲೂ ಇದನ್ನು ಆಳವಡಿಸಬಹುದಾಗಿದೆ. ಸಣ್ಣ ಜೆಟ್ ವಿಮಾನಗಳಲ್ಲಿ ಸಿಂಗಲ್ ಸೀಟು ಹಾಗೂ ದೊಡ್ಡ ಏರ್‌ಕ್ರಾಫ್ಟ್ ಗಳಲ್ಲಿ ಎರಡು ಸೀಟುಗಳನ್ನು ಆಳವಡಿಸಲಾಗುವುದು.

ಪ್ರಸ್ತುತ ವಿನ್ಯಾಸದಿಂದ ವಿಮಾನದ ನಿರ್ವಹಣೆಗೆ ಏನಾದರೂ ತೊಂದರೆ ಬರಬಹುದೇ ಎಂಬುದರ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


Click it and Unblock the Notifications








