ಪೆಟ್ರೋಲ್, ವಿದ್ಯುತ್‌ನಿಂದ ಚಲಿಸಬಲ್ಲ ಸ್ಮಾರ್ಟ್ ಕಾರು
ಜರ್ಮನಿ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಸ್ಮಾರ್ಟ್ ಹೊಸ ಎರಡು ಸೀಟಿನ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಪಡಿಸಿದೆ. ಇದರ ವಿಶೇಷತೆ ಏನೆಂದರೆ ಪೆಟ್ರೋಲ್ ಇಂಧನದ ಜತೆಗೆ ವಿದ್ಯುತ್ ಮೂಲಕವು ಚಲಿಸಲಿದೆ.
ಇದು ಸ್ಮಾರ್ಟ್ ಹಾಗೂ ಬೊಕಾನ್ಸೆಪ್ಟ್ ಪಾಲುದಾರಿಕೆಯ ಜಂಟಿ ಉತ್ಪನ್ನವಾಗಿದೆ. ಇದೇ ಕಾರಣಕ್ಕಾಗಿ ಸ್ಮಾರ್ಟ್ ಫೋರ್‌ಟು ಬೊಕಾನ್ಸೆಪ್ಟ್ (Smart ForTwo BoConcept Edition) ಎಂದು ಹೆಸರಿಸಲಾಗಿದೆ. ಈ ಆವೃತ್ತಿಯ ಮೊದಲ ಉತ್ಪಾದಕ ವರ್ಷನ್ ಈಗಾಗಲೇ ಅನಾವರಣಗೊಂಡಿದ್ದು, ಸರಿ ಸುಮಾರು 11 ಲಕ್ಷ ರು. ಅಂದಾಜಿಸಲಾಗಿದೆ.
ಈಗಾಗಲೇ ಜಿನೆವಾ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿರುವ ಈ ಕಾರು ಅತ್ಯಾಕರ್ಷಕ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸವನ್ನು ಪಡೆದುಕೊಂಡಿದೆ.

ಇದರಲ್ಲಿ 1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, 71 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದರ ಜತೆಗೆ ಟರ್ಬೊ ಚಾರ್ಜ್ಡ್ 1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೂಡಾ ಲಗತ್ತಿಸಲಾಗಿದ್ದು, 84 ಅಶ್ವಶಕ್ತಿ ಉತ್ಪಾದಿಸಲಿದೆ.

ನಾವು ಆರಂಭದಲ್ಲೇ ತಿಳಿಸಿರುವಂತೆಯೇ ಇದರ ಎಲೆಕ್ಟ್ರಿಕ್ ಮೋಟಾರ್ 73 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನಿಮ್ಮ ಮಾಹಿತಿಗಾಗಿ, ಮೈಕ್ರೋಕಾರು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿರುವ Daimler AG ವಾಹನ ಶಾಖೆ ಆಗಿರುವ ಸ್ಮಾರ್ಟ್ ಕಾನ್ಸೆಪ್ಟ್ ಕಾರುಗಳ ವಿನ್ಯಾಸವು 1980ರ ದಶಕದಲ್ಲಿ ಆರಂಭವಾಗಿತ್ತು.












Click it and Unblock the Notifications








