ಒಂದೇ ಒಂದು ಬಿಂದು ಇಂಧನವಿಲ್ಲದೆ ಭೂಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

By Nagaraja

ಸಂಪೂರ್ಣವಾಗಿಯೂ ಸೂರ್ಯ ಶಾಖದಿಂದಲೇ ಚಲಿಸುವ ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ಅಥವಾ ಸೋಲಾರ್ ಚಾಲಿತ ವಿಮಾನ ಭೂ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿದೆ.

ಇಂಧನವಿಲ್ಲದೆ ಸರಿ ಸುಮಾರು 500 ತಾಸುಗಳಷ್ಟು ಸಮಯ ಸಂಚರಿಸಿರುವ ಸೋಲಾರ್ ಇಂಪಲ್ಸ್ 2, ಐತಿಹಾಸಿಕ 17 ತಿಂಗಳುಗಳ ಪ್ರಯಾಣದಲ್ಲಿ ಒಟ್ಟು 40,200 ಕೀ.ಮೀ. (25,000 ಮೈಲು) ದೂರವನ್ನು ಕ್ರಮಿಸಿದ್ದು, ನೂತನ ಮೈಲುಗಲ್ಲನ್ನು ಸೃಷ್ಟಿಸಿದೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

2015 ಮಾರ್ಚ್ 09ರಂದು ಪ್ರಯಾಣ ಆರಂಭಿಸಿದ್ದ ಸ್ವಿಜರ್ಲೆಂಡ್ ಮೂಲದ ಸೋಲಾರ್ ಇಂಪಲ್ಸ್, ಈಗ 2016 ಮಾರ್ಚ್ 26ರಂದು ಮತ್ತದೇ ಅಬುದಾಬಿ ನಗರವನ್ನು ಚುಂಬಿಸಿದೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ವಿಶ್ವದ ಅತಿ ದೊಡ್ಡ ಬೋಯಿಂಗ್ ವಿಮಾನಗಿಂತಲೂ ಅಗಲವಾದ ರೆಕ್ಕೆಯನ್ನು ಹೊಂದಿರುವ ಸೋಲಾರ್ ಇಂಪಲ್ಸ್, ಸಾಮಾನ್ಯ ಕಾರಿನ ತೂಕವನ್ನಷ್ಟೇ ಹೊಂದಿರುವುದು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಸೋಲಾರ್ ಇಂಪಲ್ಸ್ ವಿಮಾನದ ಐತಿಹಾಸಿಕ ಯಾತ್ರಿಗಾಗಿ ಒಂದೇ ಒಂದು ಬಿಂದು ಇಂಧನ ಕೂಡಾ ಬಳಕೆಯಾಗಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ. ತನ್ಮೂಲಕ ಸಂಪೂರ್ಣ ಪರಿಸರ ಸ್ನೇಹಿ ಹಾಗೂ ಭವಿಷ್ಯದ ಪರ್ಯಾಯ ವ್ಯವಸ್ಥೆಗೆ ಹೊಸ ಆಶಾಕಿರಣ ತುಂಬಿದೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಸ್ವಿಜರ್ಲೆಂಡ್ ಪೈಲಟ್ ಬರ್ಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬೋರ್ಶ್ ಬರ್ಗ್ ಅಂತಿಮ ಚರಣದ ಯಾತ್ರೆಯಲ್ಲಿ ಈಜಿಪ್ಟ್ ನ ಕೈರೋದಿಂದ ಅಬುದಾಬಿಯ ಅಲ್ ಬತೀನ್ ಎಕ್ಸ್ ಕ್ಯೂಟಿವ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ತನ್ನ 17 ತಿಂಗುಳಗಳ ದೀರ್ಘ ಯಾತ್ರೆಯಲ್ಲಿ 40,200 ಕೀ.ಮೀ. ದೂರವನ್ನು ಕ್ರಮಿಸಿರುವ ಸೋಲಾರ್ ಇಂಪಲ್ಸ್, 16 ಪ್ರದೇಶಗಳಲ್ಲಿ ನಿಲುಗಡೆಗೊಂಡಿತ್ತು. ಹಾಗೆಯೇ ಗಂಟೆಗೆ ಸರಾಸರಿ 75 ಕೀ.ಮೀ. ವೇಗವನ್ನು ಕಾಪಾಡಿಕೊಂಡಿತ್ತು.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ಅನೇಕ ದೇಶಗಳಲ್ಲಿ ಸೋಲಾರ್ ಪ್ರಯಾಣಕ್ಕೆ ತಿಂಗಳುಗಟ್ಟಲೆ ತೊಂದರೆ ಎದುರಾಗಿತ್ತು. ಈ ಎಲ್ಲ ಸಮಸ್ಯೆಯನ್ನು ಎದುರಿಸಿರುವ ಸೋಲಾರ್ ಕೊನೆಗೂ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಕೊನೆಯ ಹಂತದ ಯಾತ್ರೆಯಲ್ಲಿ ಪೈಲಟ್ ಬರ್ಟ್ರಾಂಡ್ ಪಿಕಾರ್ಡ್ ಆಕಾಶದಿಂದಲೇ ಸೆಲ್ಫಿ ತೆಗೆದುಕೊಂಡು ಸಂಭ್ರಮಾಚರಣೆ ನಡೆಸಿಕೊಂಡಿರುವುದು ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಈ ಬಗ್ಗೆ ಅಂತಿಮ ಸಂತಸ ವ್ಯಕ್ತಪಡಿಸಿರುವ ಆಂಡ್ರೆ ಬೋರ್ಶ್ ಬರ್ಗ್, ಯೋಜನೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಭವಿಷ್ಯದ ಪರ್ಯಾಯ ವ್ಯವಸ್ಥೆಗೆ ಭದ್ರ ತಳಹದಿ ರೂಪುಗೊಂಡಿದೆ. ನಾವೀಗ ವಿವಿಧ ದಿಕ್ಕುಗಳಲ್ಲಾಗಿ ಕಾರ್ಯಾಚರಿಸಬೇಕಿದೆ ಎಂದಿದ್ದಾರೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಿಮಾನಗಳ ನಿರ್ಮಾಣ ಸಾಧ್ಯತೆಯ ಬಗ್ಗೆಯೂ ಬರ್ಟ್ರಾಂಡ್ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ವಚ್ಛ ತಂತ್ರಜ್ಞಾನದ ಅಭಿವೃದ್ಧಿಗಾಗಿ ವಿಶ್ವ ಮಂಡಳಿ ರೂಪಿಸುವುದರ ಮಹತ್ವದ ಬಗ್ಗೆಯೂ ವಿವರಿಸಿದ್ದಾರೆ.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ವಿಮಾನದಲ್ಲಿ ಜೋಡಿಸಲಾಗಿರುವ 17,000 ಸೋಲಾರ್ ಸೆಲ್ ಗಳಿಂದ ಉತ್ಪಾದಿಸಲಾಗಿರುವ ಶಕ್ತಿಯು ನಾಲ್ಕು ಲಿಥಿಯಂ ಬ್ಯಾಟರಿಯಲ್ಲಿ ಶೇಖರಣೆಯಾಗುತ್ತಿತ್ತು. ಬಳಿಕ ಇದು ಭೂತಲದಿಂದ ಸರಿ ಸುಮಾರು 9 ಕೀ.ಮೀ. ಎತ್ತರದಲ್ಲಿ ಹಾರಾಡಲು ಚೈತನ್ಯ ತುಂಬುತ್ತಿತ್ತು.

ಐತಿಹಾಸಿಕ ಕ್ಷಣ; ಇಂಧನವಿಲ್ಲದೆ ಭೂಮಿಗೆ ಪ್ರದಕ್ಷಿಣೆ ಹಾಕಿದ ಸೋಲಾರ್ ವಿಮಾನ

ಅಬುದಾಬಿಯಿಂದ ಚೊಚ್ಚಲ ಹಾರಾಟ ಆರಂಭಿಸಿರುವ ಸೌರಶಕ್ತಿ ವಿಮಾನವು ಅರಬೀಯಾ ಸಮುದ್ರ ಮಾರ್ಗವಾಗಿ ಭಾರತವನ್ನು ತಲುಪಿತ್ತು. ಇಲ್ಲಿಂದ ಬಳಿಕ ಚೀನಾ, ಫೆಸಿಫಿಕ್ ಸಾಗರ, ಅಮೆರಿಕ, ಅಟ್ಲಾಂಟಿಕಾ ಸಾಗರ, ಯುರೋಪ್, ಉತ್ತರ ಆಫ್ರಿಕಾವನ್ನು ಸುತ್ತಾಡಿ ಮತ್ತೆ ಅಬುದಾಬಿ ನಗರವನ್ನು ಹಿಂತಿರುಗಿದೆ.

More from DriveSpark

Article Published On: Thursday, July 28, 2016, 13:04 [IST]
English summary
Solar Impulse completes historic world trip
Read more on ವಿಮಾನ solar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+