ಅಪರೂಪದ ಅಪಘಾತ; ಸ್ಪೇನ್‌ನಲ್ಲಿ ಲಘು ವಿಮಾನ ನೆಲಸಮ
ಅಪರೂಪದ ಅಪಘಾತ ಸುದ್ದಿಯೊಂದು ಸ್ಪೇನ್‌ನಿಂದ ವರದಿಯಾಗಿದೆ. ಪತಿಯೊಂದಿಗೆ ವಿಮಾನ ಹಾರಾಟಕ್ಕೆ ಪತ್ನಿ ಜೊತೆಗೆ ತೆರಳಿದ್ದರು. ಆದರೆ ವಿಮಾನ ಹಾರಾಟದ ವೇಳೆ ಅನಾರೋಗ್ಯದ ತೊಂದರೆಯಿಂದಾಗಿ ಪತಿರಾಯ ಪ್ರಜ್ಞೆ ಕಳೆದುಕೊಂಡಿದ್ದರು.
ಅಪಾಯ ಪರಿಸ್ಥಿತಿಯನ್ನು ಅರಿತುಕೊಂಡ ಪತ್ನಿ ಬೇರೆ ದಾರಿಯಿಲ್ಲದೆ ಬಲವಂತವಾಗಿ ಲ್ಯಾಂಡಿಂಗ್ ಮಾಡುವ ಪ್ರಯತ್ನದಲ್ಲಿ ವಿಮಾನ ನೆಲಕ್ಕಪ್ಪಳಿಸಿದೆ. ಘಟನೆಯಲ್ಲಿ ಪತಿ ತಮ್ಮ ಜೀವವನ್ನೇ ಕಳೆದುಕೊಳ್ಳುವಂತಾಗಿದೆ.

ಅಪಘಾತಕ್ಕೂ ಮೊದಲು ವಿಮಾನ ಕಂಟ್ರೋಲ್ ರೂಮ್ ಸಿಬ್ಬಂದಿಯೊಂದಿಗೆ ಆಕೆ ಸಂಭಾಷಣೆ ನಡೆಸಿದ್ದರು. ಅಲ್ಲದೆ ಅಪಘಾತದ ಮುನ್ನವೇ ಪತಿ ಮೃತಪಟ್ಟಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಪ್ರಸ್ತುತ ಗಂಭೀರ ಗಾಯಗೊಂಡಿರುವ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಘಟನೆಯಲ್ಲಿ ಲಘು ವಿಮಾನ ಸಂಪೂರ್ಣ ಧ್ವಂಸಗೊಂಡಿದೆ.

ಏರ್ ಕಂಟ್ರೋಲರ್ ಸುಮಾರು 90 ನಿಮಿಷಗಳಷ್ಟು ಕಾಲ ಮಹಿಳೆಗೆ ಸಲಹೆ ನೀಡುತ್ತಿದ್ದರು ಎನ್ನಲಾಗುತ್ತಿದೆ. ಅಂತಿಮವಾಗಿ ಸೆವಿಲ್ಲೆ ವಿಮಾನ ನಿಲ್ಧಾಣ ಸಮೀಪ ತುರ್ತಾಗಿ ಲ್ಯಾಂಡ್ ಮಾಡುವ ಪ್ರಯತ್ನದಲ್ಲಿ ವಿಮಾನ ನೆಲಕ್ಕಪ್ಪಳಿಸಿದೆ.

ಮಹಿಳೆಯ ಜೊತೆಗೆ ವಿಮಾನ ನಿಯಂತ್ರಣ ಅಂತಿಮವಾಗಿ ನಡೆಸಿದ ಸಂಭಾಷಣೆ ಹೀಗಿತ್ತು 'ಯಾವುದೇ ಸಮಸ್ಯೆಗಳಿಲ್ಲದೆ ನೀವು ವಿಮಾನ ಲ್ಯಾಂಡ್ ಮಾಡಲು ಹೊರಟಿರುವೀರಿ ತಾನೇ?'

ವಿಮಾನ ಸಂಪೂರ್ಣವಾಗಿ ಧ್ವಂಸಗೊಂಡರೂ ಕಡಿಮೆ ಪಕ್ಷ ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವುದು ಅಧಿಕಾರಿಗಳಲ್ಲಿ ಸ್ವಲ್ಪ ನಿರಾಳತೆಗೆ ತಂದಿದೆ.


Click it and Unblock the Notifications








