ವೈರಲ್ ಆಗಲು ವಿಡಿಯೋ ಮಾಡಿ ಅದರಿಂದಲೇ ಜೈಲು ಸೇರಿದ ಜೋಡಿ!

ಸೋಷಿಯಲ್ ಮೀಡಿಯಾ ಯುವ ಜನತೆಯನ್ನು ಫೆಮಸ್ ಆಗಲು ತಪ್ಪು ದಾರಿಗಳನ್ನು ಹಿಡಿಸುತ್ತಿದೆ. ಇದೇ ಪ್ಲಾಟ್‌ಫಾರ್ಮ್‌ ಮೂಲಕ ಒಳ್ಳೆಯ ಸಂಗತಿಗಳನ್ನು ಹೇಳಿ ಕೂಡ ವೈರಲ್ ಆಗಬಹುದು, ಆದ್ರೆ ಇದಕ್ಕೆ ಸಮಯ ಹಿಡಿಯುತ್ತದೆ. ಇದರಿಂದ ತಾಳ್ಮೆಯಿಲ್ಲದ ಯುವಕ-ಯುವತಿಯರು ನಿಯಮಗಳನ್ನು ಉಲ್ಲಂಘಿಸಿ ವೈರಲ್ ಆಗಲು ಹೊರಟಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇನ್ಸ್ಟಾಗ್ರಾಂನಲ್ಲಿ ರೀಲ್ ಮಾಡಲು ದೆಹಲಿಯ ದ್ವಾರಕಾದ ಬೀದಿಗಳಲ್ಲಿ ಸೂಪರ್‌ ಹೀರೋಗಳಂತೆ ವೇಷ ಧರಿಸಿ ಮೋಟಾರ್‌ ಸೈಕಲ್‌ನಲ್ಲಿ ಸ್ಟಂಟ್ ಮಾಡಿದ್ದಾರೆ. ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆದ ಕೂಡಲೇ, ಮಿರರ್ ಮತ್ತು ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಸವಾರಿ ಮಾಡುವುದು ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಇಬ್ಬರನ್ನು ಬಂಧಿಸಲಾಗಿದೆ. ಆದಿತ್ಯ ಮತ್ತು ಅವರ ಸ್ನೇಹಿತೆ ಅಂಜಲಿ ಎಂಬುವವರು "ಸ್ಪೈಡರ್ ಮ್ಯಾನ್ ನಜಾಫ್ ಘರ್ ಪಾರ್ಟ್ 5" ಎಂಬ ಶೀರ್ಷಿಕೆ ನೀಡಿ ಬೈಕ್ ಸವಾರಿ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

spiderman-couple-riding-bike-without-helmet-arrested

ವೀಡಿಯೊದಲ್ಲಿ, "ಸ್ಪೈಡರ್-ವುಮನ್" ತನ್ನ ಸ್ಪೈಡರ್ ಮ್ಯಾನ್ ಸ್ನೇಹಿತನ ಬಳಿಗೆ ಮೆಟ್ರೋ ನಿಲ್ದಾಣದಿಂದ ಹೊರಬರುವುದನ್ನು ಕಾಣಬಹುದು. ಇದಾದ ನಂತರ ಇಬ್ಬರೂ ಕೈಕುಲುಕಿ ಬೈಕ್ ಏರಿ ದೆಹಲಿಯ ಬೀದಿಗಳಲ್ಲಿ ಸವಾರಿ ಮಾಡಲು ಹೋಗುತ್ತಾರೆ. ವೀಡಿಯೊ ವೈರಲ್ ಆದ ಕೂಡಲೇ ದೆಹಲಿ ಸಂಚಾರ ಪೊಲೀಸರು ಇಬ್ಬರನ್ನು ಬಂಧಿಸಿ ಮೋಟಾರು ವಾಹನ ಕಾಯ್ದೆಯಡಿ ಚಲನ್ ನೀಡಿದ್ದಾರೆ.

ಸ್ಪೈಡರ್‌ ಮ್ಯಾನ್ ಉಡುಪನ್ನು ಧರಿಸಿ ಸಾರ್ವಜನಿಕವಾಗಿ ಇಂತಹ ಕೃತ್ಯವನ್ನು ಚಿತ್ರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಇವರು ಇಂಡಿಯನ್ ಸ್ಪೈಡಿ ಎಂಬ ಇನ್ಸ್ಟಾಗ್ರಾಂ ಖಾತೆ ನಡೆಸುತ್ತಿದ್ದು, ತಮ್ಮ "ಸ್ಟಂಟ್‌ಗಳ" ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಸದ್ಯ ಇವರನ್ನು ಜೈಲಿಗಟ್ಟಿರುವ ಪೊಲೀಸರು ಗುಣಪಾಠ ಕಲಿಸಿದ್ದಾರೆ.

ಮದುವೆ ಉಡುಪು ಧರಿಸಿ ಬೈಕ್‌ನಲ್ಲಿ ಸವಾರಿ: ಇತ್ತೀಚೆಗೆ ಇನ್ನೊಂದು ಘಟನೆಯಲ್ಲಿ ವಧುವಿನ ವೇಷ ಧರಿಸಿದ ಯುವತಿಯೊಬ್ಬರು ಕೆಟಿಎಂ ಆರ್‌ಸಿ ಬೈಕ್ ಸವಾರಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಜಲ್ ದತ್ತಾ ಎಂಬುವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ಯಾವುದೇ ಭಯವಿಲ್ಲದೇ ಓಡಿಸುತ್ತಿದ್ದಾರೆ. ಎಲ್ಲವೂ ಸರಿಯೇ, ಆದ್ರೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಾರೆ. ಯುವತಿ ತನ್ನ ಮುಖ ಮುಚ್ಚಿಕೊಳ್ಳದಿರಲು ಆಕೆಯ ಮೇಕಪ್ ಹಾಳಾಗುವ ಕಾರಣದಿಂದಿರಬಹುದು. ಆದರೆ ಇದು ಜೀವವನ್ನು ಅಪಾಯಕ್ಕೆ ತಳ್ಳಲು ಕಾರಣವಾಗಬಹುದು. ಯುವತಿ ಇದನ್ನು ಕೇವಲ ವೀಡಿಯೊಗಾಗಿ ಮಾಡಿದ್ದಾರಾದರೂ ಆಕಸ್ಮಿಕ ಅನಾಹುತಗಳು ಹೇಳಿ ಬರುವುದಿಲ್ಲ.

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನುಬಾಹಿರ, ಇದಕ್ಕೆ ನಿಮಗೆ ದಂಡ ವಿಧಿಸಬಹುದು. ಹಾಗೆಯೇ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಅತ್ಯಂತ ಅಪಾಯಕಾರಿ ಕೂಡ ಹೌದು. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ನಿಮ್ಮನ್ನು ತಲೆಗೆ ಆಗುವ ಗಾಯಗಳಿಂದ ರಕ್ಷಿಸುತ್ತದೆ. ನೀವು ನಿಜವಾಗಿಯೂ ಇಂತಹ ಸ್ಟಂಟ್ ಮಾಡಲು ಬಯಸಿದರೆ, ಇತರ ರಸ್ತೆ ಬಳಕೆದಾರರಿಗೆ ತೊಂದರೆ ಕೊಡದೆ ನಿಮ್ಮ ಖಾಸಗಿ ರಸ್ತೆಗಳನ್ನು ನೋಡಿಕೊಳ್ಳುವುದು ಉತ್ತಮ.

spiderman-couple-riding-bike-without-helmet-arrested

ಯುವ ಜನತೆಗೆ ಈ ಬಗ್ಗೆ ತಿಳಿದರೂ ಪತ್ತೆಹಚ್ಚಲು ಸಾಧ್ಯವಾಗದಂತೆ ತಮ್ಮ ಬೈಕುಗಳ ನೋಂದಣಿ ಸಂಖ್ಯೆಗಳನ್ನು ಜಾಣತನದಿಂದ ತೆಗೆದುಹಾಕುತ್ತಾರೆ. ಆದ್ರೂ ಪೊಲೀಸರಿಗೆ ನಿಮ್ಮನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವೇನಲ್ಲ ಎಂಬುದನ್ನು ಮರೆಯಬಾರದು. ಯುವ ಜನತೆಯ ಈ ಕೃತ್ಯಗಳ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 27, 2024, 11:16 [IST]
English summary
Spiderman couple riding bike without helmet arrested
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+