ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಫುಟ್ಬಾಲ್, ಕ್ರಿಕೆಟ್ ಕ್ರೀಡೆಗಳ ಸ್ಟಾರ್ ಆಟಗಾರರು ಕೋಟಿ ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಈ ಕಾರಣಕ್ಕೆ ಅವರು ದುಬಾರಿ ಬೆಲೆಯ ಕಾರು ಹಾಗೂ ಬೈಕುಗಳನ್ನು ಹೊಂದಿರುತ್ತಾರೆ. ಭಾರತದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯಂತಹ ಸ್ಟಾರ್ ಕ್ರಿಕೆಟಿಗರು ದುಬಾರಿ ಬೆಲೆಯ ವಾಹನಗಳನ್ನು ಹೊಂದಿದ್ದಾರೆ.

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಇನ್ನು ವಿದೇಶಿ ಫುಟ್ ಬಾಲ್ ಆಟಗಾರರು ಕಾರು, ಬೈಕ್‌ಗಳಿಗಿಂತ ವೈಯಕ್ತಿಕ ವಿಮಾನಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ ಕೆಲ ಕ್ರೀಡಾಪಟುಗಳು ಖಾಸಗಿ ವಿಮಾನಗಳನ್ನು ಹೊಂದಿದ್ದಾರೆ. ಖಾಸಗಿ ವಿಮಾನಗಳು ಪ್ರಯಾಣಿಕ ವಿಮಾನಗಳಷ್ಟು ದೊಡ್ಡದಾಗಿರುವುದಿಲ್ಲ. ಈ ವಿಮಾನಗಳನ್ನು ಕೆಲವೇ ಕೆಲವು ಮಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಬಳಸಲಾಗುತ್ತದೆ.

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಗಾತ್ರದಲ್ಲಿ ಸಣ್ಣದಾಗಿದ್ದರೂ ಐಷಾರಾಮಿ ಸೌಕರ್ಯಗಳಿರುವ ಕಾರಣಕ್ಕೆ ಇವುಗಳ ಬೆಲೆ ದುಬಾರಿಯಾಗಿರುತ್ತದೆ. ಈ ಕಾರಣಕ್ಕೆ ಕ್ರೀಡಾಪಟುಗಳು ಕೋಟಿ ಕೋಟಿ ಆದಾಯ ಗಳಿಸಿದರೂ ಖಾಸಗಿ ವಿಮಾನಗಳ ಖರೀದಿ ಅಷ್ಟು ಸುಲಭವಲ್ಲ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಆದರೂ ಸಹ ಕೆಲವು ಕ್ರೀಡಾಪಟುಗಳು ಖಾಸಗಿ ವಿಮಾನಗಳನ್ನು ಹೊಂದಿದ್ದಾರೆ. ಈ ಲೇಖನದಲ್ಲಿ ಖಾಸಗಿ ವಿಮಾನ ಹೊಂದಿರುವ ವಿಶ್ವದ ಪ್ರಮುಖ ಕ್ರೀಡಾಪಟುಗಳು ಯಾರು ಎಂಬುದನ್ನು ನೋಡೋಣ. ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಕೂಡ ಖಾಸಗಿ ವಿಮಾನಗಳನ್ನು ಹೊಂದಿದ್ದಾರೆಂದು ಹೇಳಲಾಗಿದೆ. ಅದು ನಿಜವೇ ಎಂಬುದನ್ನು ಸಹ ಈ ಲೇಖನದಲ್ಲಿ ನೋಡೋಣ.

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು. ಪೋರ್ಚುಗೀಸ್ ನ ಈ ಫುಟ್ಬಾಲ್ ಆಟಗಾರ ಸೀಮಿತ ಆವೃತ್ತಿಯ ಗಲ್ಫ್ ಸ್ಟ್ರೀಮ್ ಜಿ 650 ವಿಮಾನವನ್ನು ಹೊಂದಿದ್ದಾರೆ. ಭಾರತದ ರೂಪಾಯಿ ಮೌಲ್ಯದಲ್ಲಿ ಈ ವಿಮಾನದ ಬೆಲೆ ರೂ.280 ಕೋಟಿ ಅಂದರೆ 37 ಮಿಲಿಯನ್ ಅಮೆರಿಕನ್ ಡಾಲರ್ ಗಳಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಗೋಲು ಗಳಿಸಿದಾಗ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಎರಡೂ ಕೈಗಳನ್ನು ಚಾಚಿಕೊಂಡು ವಿಜಯೋತ್ಸವದಲ್ಲಿ ಭಾಗಿಯಾಗುತ್ತಾರೆ ಎಂಬುದು ಅವರ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿರುವ ಸಂಗತಿ. ಅವರು ಹೊಂದಿರುವ ಖಾಸಗಿ ವಿಮಾನದ ಪ್ರವೇಶದ್ವಾರದ ಒಂದು ಬದಿಯಲ್ಲಿ ಪುಟ್ ಬಾಲ್ ಆಟಗಾರನ ಮುದ್ರೆಯನ್ನು ಕೆತ್ತಲಾಗಿದೆ. ಮತ್ತೊಂದು ಬದಿಯಲ್ಲಿ ಸಿಆರ್ 7 ಎಂದು ಕೆತ್ತಲಾಗಿದೆ. ಸಿಆರ್ ಎಂದರೆ ಕ್ರಿಸ್ಟಿಯಾನೊ ರೊನಾಲ್ಡೊ, 7 ಎಂಬುದು ಅವರ ಜರ್ಸಿ ಸಂಖ್ಯೆ.

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಲಿಯೊನೆಲ್ ಮೆಸ್ಸಿ

ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ರೂ.125 ಕೋಟಿ ರೂಪಾಯಿ ಬೆಲೆಯ ಅಂದರೆ 16 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಖಾಸಗಿ ವಿಮಾನವನ್ನು ಹೊಂದಿದ್ದಾರೆ. ಈ ವಿಮಾನದ ಹಿಂಭಾಗದಲ್ಲಿ ಅವರ ಜರ್ಸಿ ಸಂಖ್ಯೆಯಾದ 10 ಅನ್ನು ಕೆತ್ತಲಾಗಿದೆ. ಇದರ ಜೊತೆಗೆ ಮೆಸ್ಸಿ ಕುಟುಂಬದ ಹೆಸರುಗಳನ್ನು ಸಹ ವಿಮಾನದ ಮೆಟ್ಟಿಲುಗಳ ಮೇಲೆ ಬರೆಯಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರತಿಸ್ಪರ್ಧಿ ಎಂದು ಹೇಳಲಾಗುವ ಲಿಯೊನೆಲ್ ಮೆಸ್ಸಿಯ ಖಾಸಗಿ ವಿಮಾನವು ಅಡುಗೆ ಮನೆ ಹಾಗೂ 2 ಸ್ನಾನಗೃಹಗಳನ್ನು ಹೊಂದಿದೆ. ಈ ವಿಮಾನದಲ್ಲಿ 16 ಸೀಟುಗಳಿವೆ. ಅವುಗಳನ್ನು 8 ಹಾಸಿಗೆಗಳಾಗಿ ಪರಿವರ್ತಿಸಬಹುದು ಎಂಬುದು ಗಮನಿಸಬೇಕಾದ ಸಂಗತಿ.

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡ 2019ರ ಆರಂಭದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಖಾಸಗಿ ವಿಮಾನದ ಮುಂಭಾಗದಲ್ಲಿದ್ದ ಫೋಟೋಗಳು ವೈರಲ್ ಆಗಿದ್ದವು. ಈ ಖಾಸಗಿ ವಿಮಾನ ವಿರಾಟ್ ಕೊಹ್ಲಿಗೆ ಸೇರಿದ್ದೇ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಆದರೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ನಲ್ಲಿ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದಿದ್ದರು ಎಂದು ನಂತರ ತಿಳಿದು ಬಂತು. ವಿರಾಟ್ ಕೊಹ್ಲಿ ಸೆಸ್ನಾ 680 ಸಾವರಿನ್ ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆದಿದ್ದರು ಎಂದು ವರದಿಯಾಗಿತ್ತು. ಈ ವಿಮಾನದ ಬೆಲೆ ರೂ.125 ಕೋಟಿ ಅಂದರೆ 16 ಮಿಲಿಯನ್ ಅಮೆರಿಕನ್ ಡಾಲರ್ ಗಳಾಗಿದೆ.

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಸಚಿನ್ ತೆಂಡೂಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ರೂ.260 ಕೋಟಿ, 34 ಮಿಲಿಯನ್ ಅಮೆರಿಕನ್ ಡಾಲರ್, ಮೌಲ್ಯದ ಖಾಸಗಿ ವಿಮಾನವನ್ನು ಹೊಂದಿದ್ದಾರೆ ಎಂದು ಒಂದು ಹಂತದಲ್ಲಿ ವರದಿಯಾಗಿತ್ತು. ಆದರೆ ಈ ಮಾಹಿತಿಯನ್ನು ದೃಢೀಕರಿಸಲಾಗಿಲ್ಲ. ಖ್ಯಾತ ನಟ ವರುಣ್ ಧವನ್ ರವರು 2016ರಲ್ಲಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಕುರಿತು ಫೋಟೋವೊಂದನ್ನು ಶೇರ್ ಮಾಡಿದ್ದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಖಾಸಗಿ ವಿಮಾನ ಹೊಂದಿರುವ ಜನಪ್ರಿಯ ಕ್ರೀಡಾ ತಾರೆಗಳಿವರು

ಆ ಫೋಟೋದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವರುಣ್ ಧವನ್ ಜ್ಯೂಸ್ ಕುಡಿಯುತ್ತಿದ್ದರು. ಈ ಖಾಸಗಿ ವಿಮಾನವು ಸಚಿನ್ ತೆಂಡೂಲ್ಕರ್‌ಗೆ ಸೇರಿದೆ ಎಂದು ವರದಿಯಾಗಿತ್ತು. ಸಚಿನ್ ತೆಂಡೂಲ್ಕರ್ ರವರು ಈ ಕುರಿತು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಸಚಿನ್ ತೆಂಡೂಲ್ಕರ್ ಹಲವಾರು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Sports celebrities having their own planes. Read in Kannada.
Story first published: Friday, August 28, 2020, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X