ವೆಡ್ಡಿಂಗ್ ಆನಿವರ್ಸರಿಗಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ತಾರಾ ದಂಪತಿ
ಫಹದ್ ಫಾಸಿಲ್ ಹಾಗೂ ನಜ್ರಿಯಾ ನಜಿಂ ಮಲಯಾಳಂ ಚಿತ್ರರಂಗದ ತಾರಾ ದಂಪತಿ. ಇವರಿಬ್ಬರ ಮದುವೆ 2014ರ ಆಗಸ್ಟ್ 21ರಂದು ನಡೆಯಿತು. ಅವರಿಬ್ಬರೂ ಇತ್ತೀಚೆಗೆ ತಮ್ಮ 6ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಈ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅವರು ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಫಹದ್ ಫಾಸಿಲ್ - ನಜ್ರಿಯಾ ನಜಿಂ ದಂಪತಿ ಪೋರ್ಷೆ 911 ಕ್ಯಾರೆರಾ ಎಸ್ ಕಾರನ್ನು ಎಂದು ಹೇಳಲಾಗಿದೆ. 911 ಕ್ಯಾರೆರಾ ಎಸ್, ಜರ್ಮನಿ ಮೂಲದ ಪೋರ್ಷೆ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದು.

ಪೋರ್ಷೆ 911 ಕ್ಯಾರೆರಾ ಎಸ್ ಕಾರಿನಲ್ಲಿ 3.0 ಲೀಟರಿನ 6-ಸಿಲಿಂಡರ್ ಬಿಎಸ್ -6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 444 ಬಿಹೆಚ್‌ಪಿ ಪವರ್ ಹಾಗೂ 2,300 ಆರ್‌ಪಿಎಂನಲ್ಲಿ 530 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸ್ಪೋರ್ಟ್ಸ್ ಕಾರ್ ಆಗಿದ್ದರೂ ಪೋರ್ಷೆ 911 ಕ್ಯಾರೆರಾ ಎಸ್ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 11.24 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರನ್ನು 4 ಸೀಟುಗಳ ಆವೃತ್ತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಪೋರ್ಷೆ 911 ಕ್ಯಾರೆರಾ ಎಸ್ ಕಾರನ್ನು 9 ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಫಹದ್ ಫಾಸಿಲ್ - ನಜ್ರಿಯಾ ನಜಿಂ ದಂಪತಿ ಹಸಿರು ಬಣ್ಣದ ಕಾರನ್ನು ಖರೀದಿಸಿದ್ದಾರೆ. ಪೋರ್ಷೆ 911 ಕ್ಯಾರೆರಾ ಎಸ್ ಕಾರು 64 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಈ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿದ ನಂತರ 719.36 ಕಿಮೀಗಳವರೆಗೆ ಚಲಿಸಬಹುದು. ಪೋರ್ಷೆ 911 ಕ್ಯಾರೆರಾ ಎಸ್ ಕಾರು 132 ಲೀಟರಿನ ಬೂಟ್ ಸ್ಪೇಸ್ ಹಾಗೂ 1,515 ಕೆ.ಜಿ ತೂಕವನ್ನು ಹೊಂದಿದೆ.

ಕಡಿಮೆ ತೂಕವನ್ನು ಹೊಂದಿರುವ ಕಾರಣಕ್ಕೆ ಈ ಕಾರು ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸೀಟ್ ಬೆಲ್ಟ್ ವಾರ್ನಿಂಗ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೋರ್ಷೆ 911 ಕ್ಯಾರೆರಾ ಎಸ್ ಕಾರಿನ ಬೆಲೆ ಎಕ್ಸ್ ಶೋರೂಂದರದಂತೆ ರೂ.1.84 ಕೋಟಿಗಳಾಗಿದೆ. ಆನ್-ರೋಡ್ ಬೆಲೆ ರೂ.2.12 ಕೋಟಿಗಳಾಗುತ್ತದೆ. ಫಹದ್ ಫಾಸಿಲ್ - ನಜ್ರಿಯಾ ನಜಿಂ ದಂಪತಿ ಖರೀದಿಸಿರುವ ಪೋರ್ಷೆ 911 ಕ್ಯಾರೆರಾ ಎಸ್ ಕಾರಿನ ಬೆಲೆ ರೂ.2.65 ಕೋಟಿಗಳಾಗಿದೆ ಎಂದು ಹೇಳಲಾಗಿದೆ.

ಫಹದ್ ಫಾಸಿಲ್ - ನಜ್ರಿಯಾ ನಜಿಂ ದಂಪತಿ ತಮ್ಮಿಷ್ಟದಂತೆ ಪೋರ್ಷೆ 911 ಕ್ಯಾರೆರಾ ಎಸ್ ಕಾರನ್ನು ಮಾಡಿಫೈ ಮಾಡಿರುವ ಕಾರಣಕ್ಕೆ ಈ ಕಾರಿನ ಬೆಲೆ ಹೆಚ್ಚಾಗಿದೆ. ಪೋರ್ಷೆ 911 ಕ್ಯಾರೆರಾ ಎಸ್ ಕಾರಿನ ಮಾರ್ಪಾಡಿಗಾಗಿ ಫಹದ್ ಫಾಸಿಲ್ - ನಜ್ರಿಯಾ ನಜಿಂ ದಂಪತಿ ರೂ.53 ಲಕ್ಷ ಹೆಚ್ಚು ಪಾವತಿಸಿದ್ದಾರೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಫಹದ್ ಫಾಸಿಲ್ - ನಜ್ರಿಯಾ ನಜಿಂ ದಂಪತಿ ತಮ್ಮ ಹೊಸ ಕಾರಿನೊಂದಿಗಿರುವ ಚಿತ್ರಗಳನ್ನು ಕೇರಳದ ಎಕ್ಸೊಟಿಕ್ಸ್ ಅಂಡ್ ಇಂಪೋರ್ಟ್ಸ್ ಸ್ಪಾಟ್ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ.


Click it and Unblock the Notifications