ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ರಾಹುಲ್ ಆರ್ ನಾಯರ್ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಅವರು ತಮ್ಮ ವಾಹನದ ಮೂಲಕ ಕೇರಳದ ಕೊಚ್ಚಿಗೆ ಹೋಗಲು ಬಯಸಿದ್ದರು. ಆದರೆ ಅವರ ಡ್ರೈವಿಂಗ್ ಲೈಸೆನ್ಸ್ ಪರವಾನಗಿ ಅವಧಿ 2 ತಿಂಗಳ ಹಿಂದೆಯೇ ಮುಗಿದಿದೆ.

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಅವರು ತಮ್ಮ ಪೋಷಕರಿಗೆ ಕೊಚ್ಚಿಗೆ ಬರುವುದಾಗಿ ಭರವಸೆ ನೀಡಿದ್ದ ಕಾರಣ ತಮ್ಮ ಪ್ರವಾಸವನ್ನು ಮುಂದೂಡಲು ಬಯಸಲಿಲ್ಲ. ಅವರ ಪೋಷಕರ ವೈದ್ಯಕೀಯ ಚಿಕಿತ್ಸೆಗಾಗಿ ಕೊಚ್ಚಿಗೆ ಹೋಗಬೇಕಾಯಿತು. ಕೇರಳದಲ್ಲಿ ಈಗ ಪರಿಸ್ಥಿತಿ ಬದಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸಹಜ ಸ್ಥಿತಿಯತ್ತ ಮರಳಿದೆ. ಅಂತರರಾಜ್ಯ ಪ್ರಯಾಣವೂ ಸುಲಭವಾಗಿದೆ.

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಆದರೆ ರಾಹುಲ್ ಆರ್ ನಾಯರ್ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಇಷ್ಟ ಪಡಲಿಲ್ಲ. ಕರೋನಾ ಸೋಂಕು ಹರಡಬಹುದು ಎಂಬ ಭೀತಿಯೇ ಇದಕ್ಕೆ ಪ್ರಮುಖ ಕಾರಣ. ಕೊನೆಗೆ ರಾಹುಲ್ ಆರ್ ನಾಯರ್ ತಮ್ಮ ಸೈಕಲ್‌ ಮೂಲಕವೇ ಕೊಚ್ಚಿಗೆ ಹೋದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಅವರು ನವೆಂಬರ್ 18ರಂದು ಬೆಂಗಳೂರಿನಿಂದ ಹೊರಟು ನವೆಂಬರ್ 21ರಂದು ಕೊಚ್ಚಿಯಲ್ಲಿರುವ ತಮ್ಮ ಮನೆಯನ್ನು ಸೇರಿಕೊಂಡರು. ಅವರು ಕೊಚ್ಚಿಗೆ ತೆರಳಿ ಪೋಷಕರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡರು ಎಂಬುದು ಗಮನಾರ್ಹ.

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ತಮ್ಮ ಮಗನ ಆಗಮನವನ್ನು ನೋಡಿದ ರಾಹುಲ್ ಆರ್ ನಾಯರ್ ಅವರ ಪೋಷಕರಾದ ಕೆ ರಾಮಚಂದ್ರನ್ ನಾಯರ್ ಹಾಗೂ ಮೃಣಾಲಿನಿ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕೊಚ್ಚಿಯಲ್ಲಿ ಕೆಲಸ ಮುಗಿದ ನಂತರ ರಾಹುಲ್ ಆರ್ ನಾಯರ್ ನವೆಂಬರ್ 27ರಂದು ಮತ್ತೆ ಸೈಕಲ್ ಮೂಲಕವೇ ಬೆಂಗಳೂರಿಗೆ ವಾಪಸಾದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಮೂರು ದಿನಗಳ ಸೈಕಲ್ ಸವಾರಿಯ ನಂತರ ಬೆಂಗಳೂರು ತಲುಪಿದರು. ಅವರು ಬೆಂಗಳೂರಿನಿಂದ ಕೊಚ್ಚಿಗೆ ಹಾಗೂ ಕೊಚ್ಚಿಯಿಂದ ಬೆಂಗಳೂರಿಗೆ ಸಾಗುವಾಗ ಒಟ್ಟು 1,100 ಕಿ.ಮೀ ಸೈಕಲ್ ತುಳಿದಿದ್ದಾರೆ. ಇದು ಅವರಿಗೆ ವಿಶೇಷ ಅನುಭವವನ್ನು ನೀಡಿದೆ. ರಾಹುಲ್ ಆರ್ ನಾಯರ್ ಸೈಕ್ಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಅವರು ಬೆಂಗಳೂರಿನಲ್ಲಿ ಟು ವೀಲ್ಸ್ ಅಂಡ್ ಎ ಹ್ಯಾಂಡಲ್ ಬಾರ್ ಎಂಬ ಸ್ಟಾರ್ಟ್ ಅಪ್ ಕಂಪನಿಯನ್ನು ನಡೆಸುತ್ತಿದ್ದಾರೆ. ಇದರ ಮೂಲಕ ಅವರು ದೂರದ ಸೈಕ್ಲಿಂಗ್ ಬಗ್ಗೆ ಜನರಿಗೆ ಕಲಿಸುತ್ತಿದ್ದಾರೆ. ಆದರೆ ಸ್ವತಃ ರಾಹುಲ್ ಆರ್ ನಾಯರ್ ಇಷ್ಟು ದೂರ ಸೈಕ್ಲಿಂಗ್ ಮಾಡುತ್ತಿರುವುದು ಇದೇ ಮೊದಲು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಲಾಕ್'ಡೌನ್ ಅವಧಿಯಲ್ಲಿ ಹಲವಾರು ಜನರು ಸೈಕಲ್ ಮೂಲಕ ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣ ಬೆಳೆಸಿದ್ದರು ಎಂಬುದು ಗಮನಾರ್ಹ. ಕೆಲಸ ಕಳೆದುಕೊಂಡವರು ತಮ್ಮ ಊರುಗಳನ್ನು ತಲುಪಲು ಅಗತ್ಯ ಸಾರ್ವಜನಿಕ ಸಾರಿಗೆ ಇಲ್ಲದ ಕಾರಣಕ್ಕೆ ಸೈಕಲ್ ಮೂಲಕವೇ ಪ್ರಯಾಣಿಸಿದ್ದರು.

ಪೋಷಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾವಿರಾರು ಕಿ.ಮೀ ದೂರ ಸೈಕಲ್ ತುಳಿದ ಸ್ಟಾರ್ಟ್ ಅಪ್ ಕಂಪನಿ ಮಾಲೀಕ

ಈ ಮೊದಲೇ ಹೇಳಿದಂತೆ ಭಾರತದಲ್ಲಿ ಸಾರ್ವಜನಿಕ ಸಾರಿಗೆಯು ಸಹಜ ಸ್ಥಿತಿಯತ್ತ ಮರಳಿದೆ. ಸೈಕಲ್ ಮೂಲಕ ಸಾವಿರಾರು ಕಿ.ಮೀ ಪ್ರಯಾಣ ಮಾಡುವುದು ನಿಜಕ್ಕೂ ವಿಶಿಷ್ಟ ಅನುಭವವನ್ನು ನೀಡುತ್ತದೆ. ಸಾಕಷ್ಟು ಜನರು ಸೈಕಲ್ ಮೂಲಕವೇ ಲಾಂಗ್ ರೈಡ್'ಗೆ ತೆರಳುತ್ತಿದ್ದಾರೆ. ಈ ಚಿತ್ರಗಳನ್ನು ಟು ವೀಲ್ಸ್ ಅಂಡ್ ಎ ಹ್ಯಾಂಡಲ್ ಬಾರ್'ನಿಂದ ಪಡೆಯಲಾಗಿದೆ.

Most Read Articles

Kannada
English summary
Start up company owner pedals 1100 kms from Bangalore to Cochin. Read in Kannada.
Story first published: Tuesday, December 8, 2020, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X