ಸ್ಟೆಲ್ಲಾ- ಜಗತ್ತಿನ ಪ್ರಪ್ರಥಮ ಸೌರಶಕ್ತಿ ನಿಯಂತ್ರಿತ ಫ್ಯಾಮಿಲಿ ಕಾರು
ಸಾಧಾರಣವಾಗಿ ಸೋಲರ್ ನಿಯಂತ್ರಿತ ವಾಹನಗಳು ಆಕಾರದಲ್ಲಿ ತುಂಬಾನೇ ಚಿಕ್ಕದಾಗಿರುತ್ತದೆ. ಇದರಲ್ಲಿ ಹೆಚ್ಚೆಂದರೆ ಚಾಲಕ ಸೇರಿದಂತೆ ಸಹ ಪ್ರಯಾಣಿಕನಿಗೆ ಮಾತ್ರ ಚಲಿಸುವ ವ್ಯವಸ್ಥೆ ಹೊಂದಿರುತ್ತದೆ.
ಅಷ್ಟೇ ಅಲ್ಲದೆ ಬಹುತೇಕ ಸೋಲರ್ ವಾಹನಗಳಲ್ಲಿ ಹೆಚ್ಚು ದೂರ ಸಾಗಲು ಸಾಧ್ಯವಾಗುವುದಿಲ್ಲ. ಆದರೆ ನಾವಿಂದು ಪರಿಚಯಸಲಿರುವ ನೂತನ ಸೋಲರ್ ಕಾರು ಈ ಎಲ್ಲ ಸಮಸ್ಯೆಗಳನ್ನು ಸರಿದೂಗಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಸ್ಟೆಲ್ಲಾ ಎಂಬ ಜಗತ್ತಿನ ಪ್ರಪ್ರಥಮ ಸೌರಶಕ್ತಿ ನಿಯಂತ್ರಿತ ಫ್ಯಾಮಿಲಿ ಕಾರೊಂದನ್ನು ಹಾಲೆಂಡ್‌ನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಹಾಲೆಂಡ್‌ನ ಎಡೊವೆನ್ (Eindhoven) ವಿಶ್ವ ವಿದ್ಯಾನಿಲಯದ ಸೋಲರ್ ಟೀಮ್ ವಿದ್ಯಾರ್ಥಿಗಳು ಇಂತಹದೊಂದು ಸಾಧನೆ ಮಾಡಿದ್ದಾರೆ.
ಅಂದರೆ ಈ ಕೌಟುಂಬಿಕ ಕಾರಿನಲ್ಲಿ ಎಷ್ಟು ಜನರಿಗೆ ಪ್ರಯಾಣಿಸಬಹುದು? ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ಸ್ಲೈಡರ್ ವೀಕ್ಷಿಸಿ....

ಒಟ್ಟು ನಾಲ್ಕು ಮಂದಿಗೆ ಆರಾಮದಾಯಕವಾಗಿ ಚಲಿಸುವ ಸಿಟ್ಟಿಂಗ್ ವ್ಯವಸ್ಥೆಯನ್ನು ಸ್ಟೆಲ್ಲಾ ಸೋರರ್ ಫ್ಯಾಮಿಲಿ ಕಾರು ಹೊಂದಿದೆ.

ಅಷ್ಟೇ ಅಲ್ಲದೆ ವರ್ಷಾಂತ್ಯದಲ್ಲಿ ಸಾಗಲಿರುವ 2013 ವಿಶ್ವ ಸೋಲರ್ ಚಾಲೆಂಜ್‌ನಲ್ಲೂ ಸ್ಟೆಲ್ಲಾ ಭಾಗವಹಿಸಲಿದ್ದು, ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲಿದ್ದಾಳೆ.

ಕಡಿಮೆ ಎನರ್ಜಿಯಲ್ಲಿ ಹೆಚ್ಚು ದೂರ ಪ್ರಯಾಣಿಸುವುದು ಈ ಸೋಲರ್ ಕಾರಿನ ವಿಶೇಷಯಾಗಿದೆ.

ಹಾಗಿದ್ದರೂ ವಿಭಿನ್ನವಾದ ವಿನ್ಯಾಸವನ್ನು ಸ್ಟೆಲ್ಲಾ ಸೋಲರ್ ಕಾರು ಹೊಂದಿದೆ. ಇದರ ಮೇಲ್ಛಾವಣಿಯಲ್ಲಿ ಸೌರಶಕ್ತಿ ಪ್ಯಾನೆಲ್‌ಗಳಿವೆ.

ಕಾರ್ಬನ್ ಫೈಬರ್ ಹಾಗೂ ಅಲ್ಯೂಮಿನಿಯಂಗಳಂತಹ ಹಗುರ ಭಾರದ ಪರಿಕರಗಳೊಂದಿಗೆ ಈ ಸೌರಶಕ್ತಿ ವಾಹನ ತಯಾರಿಸಲಾಗಿದೆ.

ಇನ್ನು ಇತರ ಸೋಲರ್ ಕಾರಿಗಿಂತಲೂ ಭಿನ್ನವಾಗಿ ಸ್ಟೆಲ್ಲಾ 600 ಕೀ.ಮೀ. ದೂರದ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ.

ಇದರ ಮೇಲ್ಗಡೆ ಲಗ್ಗತ್ತಿಸಲಾಗಿರುವ ಸೌರಶಕ್ತಿ ಪ್ಯಾನೆಲ್‌ಗಳಿಂದ ಎನರ್ಜಿ ಸ್ಟೋರ್ ಆಗಲಿದೆ. ಇದು ಸೂರ್ಯನ ಕಿರಣಗಳಿಂದ ಶಕ್ತಿ ಉತ್ಪಾದಿಸಲಿದೆ.

ಈ ಸೋಲರ್ ವಾಹನದಲ್ಲಿ ಆಧುನಿಕ ತಂತ್ರಗಾರಿಕೆಯನ್ನು ಆಳವಡಿಸಲಾಗಿದ್ದು, ಎಲ್‌ಇಡಿ ಇಂಡಿಕೇಟರ್ ಹಾಗೂ ಟಚ್ ಸ್ಕ್ರೀನ್ ಡಿಸ್‌ಪ್ಲೇ ಯುನಿಟ್‌ಗಳನ್ನು ಹೊಂದಿದೆ.

ಇದರ ನವೀನ ಸ್ಟೀರಿಂಗ್ ವೀಲ್ ಮತ್ತೊಂದು ಪ್ರಮುಖ ವೈಶಿಷ್ಟ್ಯವಾಗಿದ್ದು, ಕಾರಿನ ವೇಗತೆಗೆ ಅನುಸಾರವಾಗಿ ಹಿಗ್ಗುತ್ತದೆ ಹಾಗೂ ಕುಗ್ಗುವುದು. ಈ ಮೂಲಕ ಚಾಲಕರನ್ನು ಎಚ್ಚರಿಸುತ್ತದೆ.

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಸಾಗಲಿರುವ 2013 ವರ್ಲ್ಡ್ ಸೋಲರ್ ಚಾಲೆಂಜ್‌ನಲ್ಲಿ ಸ್ಟೆಲ್ಲಾ ಭಾಗವಹಿಸಲಿದ್ದಾಳೆ.

ವರ್ಲ್ಡ್ ಸೋಲರ್ ಚಾಲೆಂಜ್ ಅಕ್ಟೋಬರ್ 6ರಿಂದ 13ರ ವರೆಗೆ ಸಾಗಲಿದೆ.

ತನ್ನದೇ ಆದ ವಿಶಿಷ್ಟ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಟೆಲ್ಲಾ ಸೋಲರ್ ಕಾರನ್ನು ಕ್ರೂಸರ್ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ.

ಕ್ರೂಸರ್ ವಿಭಾಗಕ್ಕೆ ಸೇರಿದ ಕಾರುಗಳು ಎಷ್ಟು ವೇಗತೆಯಲ್ಲಿ ಚಲಿಸಲಿದೆ ಎಂಬುದು ಮುಖ್ಯವಲ್ಲ. ಬದಲಾಗಿ ಪ್ರಾಯೋಗಿಕವಾಗಿ ಎಷ್ಟು ಇಂಧನ ಕ್ಷಮತೆ ಹೊಂದಿದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಆಸ್ಟ್ರೇಲಿಯಾದ ಆಡಿಲೇಡ್‌ನಲ್ಲಿ ಆರಂಭಿಸಲಿರುವ ರೇಸ್ ದಕ್ಷಿಣ ತುದಿ ಭಾಗವಾದ ಡಾರ್ವಿನ್‌ನಲ್ಲಿ ಕೊನೆಗೊಳ್ಳಲಿದೆ. ಒಟ್ಟು 3000 ಕೀ.ಮೀ.ಗಳನ್ನು ಕ್ರಮಿಕರಿಸುತ್ತದೆ.
ವೀಡಿಯೋ ವೀಕ್ಷಿಸಿ

ಇದೀಗ ಸೌರಶಕ್ತಿ ಕುಟಂಬ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








