ಆರ್‌ಸಿಬಿ ಬೆವರಿಳಿಸಿದ ಸನ್‌ರೈಸರ್ಸ್ ಒಡತಿ ಕಾವ್ಯಾ ಮಾರನ್ ಲಕ್ಷುರಿ ಕಾರು ಕಲೆಕ್ಷನ್‌ಗೆ ಜನ ನಿಬ್ಬೆರಗು!

ಈ ಭಾರಿಯ ಐಪಿಎಲ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ತಂಡವೆಂದರೆ ಅದು ಸನ್‌ರೈಸರ್ಸ್‌ ಹೈದರಾಬಾದ್‌. ಈ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಬಾದ್‌ ತಂಡ ಎರಡು ಬಾರಿ ಗರಿಷ್ಟ ರನ್‌ ಗಳಿಸಿ ದಾಖಲೆ ಮಾಡಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಷ್ಟೇ, ಈ ತಂಡದ ಮಾಲೀಕರಾದ ಕಾವ್ಯಾ ಮಾರನ್‌ ಸಹ ಅಷ್ಟೇ ಪ್ರಸಿದ್ಧಿ ಹೊಂದಿದ್ದಾರೆ.

ಬಹುತೇಕ ಎಲ್ಲಾ ಪಂದ್ಯದಲ್ಲೂ ಕಾವ್ಯಾ ಮಾರನ್‌ ತಮ್ಮ ತಂಡವನ್ನು ಹುರಿದುಂಬಿಸಲು ಪೆವಿಲಿಯನ್‌ಗೆ ಬಂದಿರುತ್ತಾರೆ. ಇಂದಿನ ಈ ಲೇಖನದಲ್ಲಿ ನಾವು ಕಾವ್ಯಾ ಮಾರನ್‌ ಬಳಿ ಇರುವ ಕಾರುಗಳ ಕುರಿತಾಗಿ ನೋಡೋಣ. ಅವರ ಕಾರುಗಳ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Sunrisers Hyderabad Owner Kavya Maran s Luxury Car Collection Rolls Roy

ರೋಲ್ಸ್ ರಾಯ್ಸ್‌ ಫಾಂಟಮ್‌ VIII EWB: ಕಾವ್ಯಾ ಮಾರನ್‌ ಬಳಿಯಿರುವ ಪ್ರಮುಖ ಕಾರುಗಳಲ್ಲಿ ಲಕ್ಷುರಿ ಕಾರು ನಿರ್ಮಾಣ ಸಂಸ್ಥೆಯಾದ ರೋಲ್ಸ್ ರಾಯ್ಸ್ ಕಾರು ಸಹ ಸೇರಿದೆ. ಇವರ ಬಳಿ ರೋಲ್ಸ್ ರಾಯ್ಸ್‌ ಫಾಂಟಮ್‌ VIII EWB ಇದ್ದು, ಈ ಕಾರಿನ ಬೆಲೆ ಸುಮಾರು 12.2 ಕೋಟಿ ರೂಪಾಯಿಗಳು. ಇದನ್ನು ಹೆಚ್ಚಾಗಿ ಕಲಾನಿಧಿ ಮಾರನ್‌ ಉಪಯೋಗಿಸುವುದನ್ನು ಆಗಾಗ ಕಾಣಬಹುದಾಗಿದೆ.

ಫೆರಾರಿ ರೋಮಾ: ಕಾವ್ಯಾ ಮಾರನ್ ಅವರು ಮತ್ತೊಂದು ಪ್ರಸಿದ್ದ ಸೂಪರ್‌ ಕಾರು ಕಂಪನಿಯಾದ ಫೆರಾರಿಯ ಕಾರುಗಳನ್ನು ಸಹ ಹೊಂದಿದ್ದಾರೆ. ಫೆರಾರಿ ಕಂಪನಿಯ ರೋಮಾ ಎಂಬ ಸೂಪರ್‌ ಕಾರನ್ನು ಕಾವ್ಯಾ ಮಾರನ್‌ ತಮ್ಮ ಕಾರು ಕಲೆಕ್ಷನ್‌ನಲ್ಲಿ ಇಟ್ಟುಕೊಂಡಿದ್ದು, ಫೆರಾರಿ, ತಯಾರಿಸಿ ಯಶಸ್ವಿಯಾದ ಪ್ರಮುಖ ಕಾರುಗಳಲ್ಲಿ ಇದೂ ಸಹ ಒಂದು.

Sunrisers Hyderabad Owner Kavya Maran s Luxury Car Collection Rolls Roy

ಫೆರಾರಿ ರೋಮಾ ಕಾರಿನ ವಿಶೇಷತೆ ಬಗ್ಗೆ ಮಾತನಾಡುವುದಾದರೆ, ಈ ಕಾರು 3.9 - ಲೀಟರ್ ಸಾಮರ್ಥ್ಯದ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 612 bhp ಗರಿಷ್ಠ ಪವರ್ ಹಾಗೂ ಮತ್ತು 760 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಪಡೆದಿದೆ. ಜೊತೆಗೆ 8 - ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

ನೂತನ ಫೆರಾರಿ ರೋಮಾ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 8.93 kmpl ಮೈಲೇಜ್ ನೀಡುತ್ತದೆ. ಕೇವಲ 3.4 ಸೆಕೆಂಡುಗಳಲ್ಲಿ 0 -100 kmph, 9.3 ಸೆಕೆಂಡುಗಳಲ್ಲಿ 200 kmph ವೇಗವನ್ನು ಪಡೆಯಲಿದ್ದು, 320 kmph ಟಾಪ್ ಸ್ವೀಡ್ ಹೊಂದಿದೆ. 8.4 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 16 - ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Sunrisers Hyderabad Owner Kavya Maran s Luxury Car Collection Rolls Roy

ಬೆಂಟ್ಲಿ ಬೆಂಟೈಗಾ: ಬೆಂಟ್ಲೆ ಬ್ರಿಟಿಷ್ ಮೂಲದ ಕಾರು ತಯಾರಕ ಕಂಪನಿಯಾಗಿದೆ. ಈ ಎಸ್‌ಯುವಿಯು ಮರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎಸ್ 600 ಮತ್ತು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಎಸ್‌ಯುವಿಯನ್ನು ಲಾಂಗ್ ವ್ಹೀಲ್ ಬೇಸ್ ಮತ್ತು ಶಾರ್ಟ್ ವ್ಹೀಲ್ ಬೇಸ್ ಮಾದರಿಗಳು ಸೇರಿದಂತೆ ಅನೇಕ ರೂಪಾಂತರಗಳಲ್ಲಿ ನೀಡಲಾಗುತ್ತದೆ.

ಈ ನಿರ್ದಿಷ್ಟ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಸ್‌ಯುವಿ ಶಾರ್ಟ್ ವ್ಹೀಲ್ ಬೇಸ್ ಮಾದರಿ ಎಂದು ತೋರುತ್ತಿದೆ. ಇದು 4.0 ಲೀ. ವಿ8 ಎಂಜಿನ್ ಹೊಂದಿದೆ. ಇದು 542 ಬಿಹೆಚ್‌ಪಿ ಪವರ್ ಹಾಗೂ 770 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಬೆಂಟ್ಲೆಯಿಂದ ಬಂದ ಮೊದಲ ಎಸ್‌ಯುವಿಯಾಗಿದೆ.

ಬಿಎಂಡಬ್ಲ್ಯೂ i7: ಸುಮಾರು ಎರಡರಿಂದ ಎರಡೂವರೆ ಕೋಟಿ ರೂಪಾಯಿಗಳು ಬೆಲೆ ಬಾಳುವ ಈ ಕಾರು ಇತ್ತೀಚೆಗೆ ಎಲ್ಲರ ನೆಚ್ಚಿನ ಕಾರಾಗಿ ಬದಲಾಗುತ್ತಿದೆ. ಈಗಾಗಲೇ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಕೆಲವರಷ್ಟೇ ಈ ಕಾರನ್ನು ಖರೀದಿ ಮಾಡುತ್ತಿದ್ದು, ಈ ಸಾಲಿಗೆ ಕಾವ್ಯಾ ಮಾರನ್‌ ಸಹ ಸೇರಿದ್ದಾರೆ.

ಬಿಎಂಡಬ್ಲ್ಯೂ ಐ7 ಸೆಡಾನ್, ರೂ.2.03 ರಿಂದ 2.50 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು, 101.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಇದರ ಎಕ್ಸ್‌ಡ್ರೈವ್60 ರೂಪಾಂತರದಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 544 PS ಪವರ್, 745 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್ ನಲ್ಲಿ 625 km ರೇಂಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, April 21, 2024, 9:00 [IST]
English summary
Sunrisers hyderabad owner kavya marans luxury car collection rolls roy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+