ಪವನ ಶಕ್ತಿಯಿಂದ ಓಡಾಡುವ ಆಸಮ್ ಕಾರು
ಪರಸ್ಪರ ಕೂಡಿಕೊಳ್ಳುವ ಘನಕಾರದ ರೂಪಗಳಲ್ಲಿರುವ ಪ್ಲಾಸ್ಟಿಕ್ ತುಂಡುಗಳಿಂದ (Lego) ತಯಾರಿಸಿದ ಅನೇಕ ಆಶ್ಚರ್ಯಕರ ಆಟದ ಸಾಮಾನು ಅಥವಾ ಯಂತ್ರಗಳನ್ನು ನಾವು ಕಳೆದ ಹಲವಾರು ವರ್ಷಗಳಿಂದ ನೋಡಿರುತ್ತೇವೆ.
ಬರಿ ಗಾಳಿಯಿಂದ ಚಲಿಸುವ ಕಾರು- ಮೈಲೇಜ್ 50
ಪ್ರಸ್ತುತ ವಿನೂತನ ಸಾಹಸಕ್ಕೆ ಮುಂದಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಯಾಮ್‌ಮಾರ್ಟಿನೊ ( Steve Sammartino) ಮತ್ತು ರೌಲ್ ಒಯ್ಡಾ (Raul Oaida) ಇಂತಹ ಜೋಡಣೆಯ ಲೆಗೊ ವಸ್ತುಗಳಿಂದ ಆಕರ್ಷಕ ವಾಹನವೊಂದಕ್ಕೆ ರೂಪುರೇಷೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್ ಸಂದರ್ಶಿಸಿರಿ.

ಸೂಪರ್ ಆಸಮ್ ಮೈಕ್ರೋ ಪ್ರಾಜೆಕ್ಟ್ (Super Awesome Micro Project) ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಕಾರು ಸಂಪೂರ್ಣವಾಗಿ ಪವನ ಶಕ್ತಿಯಿಂದ ಓಡಾಡಲಿದೆ ಎಂಬುದು ವಿಶೇಷತೆಯಾಗಿದೆ.

ಪರಸ್ಪರ ಕೂಡಿಕೊಳ್ಳುವ ಘನಕಾರದ ರೂಪಗಳಲ್ಲಿರುವ ಪ್ಲಾಸ್ಟಿಕ್ ತುಂಡುಗಳಿಂದ ತಯಾರಿಸಲಾಗಿರುವ ಲೆಗೊಗಳಿಂದಲೇ ಇದರ ಎಂಜಿನ್ ನಿಯಂತ್ರಿಸಲ್ಪಡುತ್ತಿದ್ದು, ಪೂರ್ಣವಾಗಿಯೂ ಗಾಳಿಯಿಂದ ಚಲಿಸಲಿದೆ.

ಹಾಗಿದ್ದರೂ ಕಾರಿನ ಚಕ್ರ ಹಾಗೂ ಇನ್ನಿತರ ಲೋಡ್ ಬೇರಿಂಗ್ ಭಾಗಗಳಿಗಾಗಿ ಇನ್ನಿತರ ಸಾಮಾಗ್ರಿಗಳನ್ನು ಬಳಕೆ ಮಾಡಲಾಗಿದೆ.

ಮೆಲ್ಬರ್ನ್ ಉದ್ಯಮಿ ಮತ್ತು ಮಾರುಕಟ್ಟೆ ವ್ಯಕ್ತಿ ಸ್ಟೀವ್ ಸ್ಯಾಮ್‌ಮಾರ್ಟಿನೊ ಮತ್ತು 20ರ ಹರೆಯದ ಸ್ವಯಂ ಕಲಿತ ತಂತ್ರಜ್ಞಾನ ಪ್ರತಿಭೆ ರೌಲ್ ಒಯ್ಡಾ ಅವರ ಕನಸಿನ ಕೂಸೆಂದೇ ಇದನ್ನು ಬಿಂಬಿಸಲಾಗುತ್ತಿದೆ.

ಇಷ್ಟೊಂದು ಮಹತ್ತರ ಯೋಜನೆಗೆ ಹೂಡಿಕೆ ಮಾಡುವುದು ಇವರಿಗೆ ಸವಾಲಿನ ಸಂಗತಿಯಾಗಿತ್ತು. ಆದರೆ ಸ್ಟೀವ್ ಮಾಡಿದ ಏಕೈಕ ಟ್ವೀಟ್‌ನಿಂದಾಗಿ ಆಸ್ಟ್ರೇಲಿಯಾದದ ಪ್ರಮುಖ ವ್ಯಕ್ತಿಗಳು ಈತನ ಬೆಂಬಲಕ್ಕೆ ನಿಂತರು. ಅಲ್ಲದೆ 20ಕ್ಕೂ ಹೆಚ್ಚು ಮಂದಿಯಿಂದ ಹಣಕಾಸು ಸಹಾಯವು ಲಭ್ಯವಾಗಿತ್ತು.

ಸೂಪರ್ ಆಸಮ್ ಮೈಕ್ರೋ ಪ್ರಾಜೆಕ್ಟ್ ಯೋಜನೆಯ ವೈಶಿಷ್ಟ್ಯಗಳೇನು?
- 5 ಲಕ್ಷಕ್ಕೂ ಹೆಚ್ಚು ಲೆಗೊ ತುಂಡುಗಳ ಬಳಕೆ,
- ಪವನ ಶಕ್ತಿಯಿಂದ ಚಲಿಸಬಲ್ಲ ಕಾರಿದು,
- ಲೆಗೊ ತುಣುಕುಗಳಿಂದ ಕಾರಿನ ಎಂಜಿನ್ ತಯಾರಿ,
- ಗರಿಷ್ಠ ವೇಗತೆ 20-30 ಕೀ.ಮೀ.,
- ರೊಮಾನಿಯಾದಲ್ಲಿ ತಯಾರಿ, ಬಳಿಕ ಮೆಲ್ಬರ್ನ್‌ಗೆ ಗೌಪ್ಯವಾಗಿ ರವಾನೆ,
- ಹಾಟ್ ರಾಡ್ ವಿನ್ಯಾಸ.

ಸೂಪರ್ ಆಸಮ್ ಮೈಕ್ರೋ ಪ್ರಾಜೆಕ್ಟ್ ಯೋಜನೆಯ ವೈಶಿಷ್ಟ್ಯಗಳೇನು?

ಅಷ್ಟಕ್ಕೂ ಈ ಲೆಗೊ ಕಾರಿನ ವೇಗತೆ ವಿಮರ್ಶಕರಲ್ಲಿ ತೃಪ್ತಿ ತಂದಿಲ್ಲ. ಗಾಳಿಯಿಂದ ಸಂಚರಿಸುವ ಈ ಪರಿಸರ ಸ್ನೇಹಿ ವಾಹನ ಗಂಟೆಗೆ 20ರಿಂದ 30 ಕೀ.ಮೀ. ವೇಗದಲ್ಲಷ್ಟೇ ಸಂಚರಿಸುತ್ತದೆ. ಇದರಿಂದಾಗಿ ಪ್ರಾಯೋಗಿಕವಾಗಿ ಇದರ ಸಾಮರ್ಥ್ಯದ ಬಗ್ಗೆ ಶಂಕೆ ಮೂಡುವಂತಾಗಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿರಿ http://www.superawesomemicroproject.com/


Click it and Unblock the Notifications








