ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಭಾಗವಾಗಿ ಭಾರತದಲ್ಲೇ ಅವ್ರಿಲ್ ಬುಲೆಟ್ ರೈಲು ನಿರ್ಮಿಸಲು ಸ್ಪೇನ್ ಮೂಲದ ಟಾಲ್ಗೊ ಸಂಸ್ಥೆಯು ವಿಶೇಷ ಆಸಕ್ತಿಯನ್ನು ತೋರಿದೆ.

By Nagaraja

ಸ್ಪೇನ್‌ನ ಟಾಲ್ಗೊ ರೈಲು ನಿರ್ಮಾಣ ಸಂಸ್ಥೆಯು ಮಗದೊಂದು ಯೋಜನೆಯೊಂದಿಗೆ ಮುಂದೆ ಬಂದಿದ್ದು, ಭಾರತದಲ್ಲೇ ಬುಲೆಟ್ ರೈಲು ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾಪವನ್ನು ಸಲ್ಲಿಸಿದೆ. ಈ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ತುಂಬಲಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಸ್ಪೇನ್ ಮೂಲದ ಟಾಲ್ಗೊ ರೈಲು ಸಂಸ್ಥೆಯು ಅತಿ ನೂತನ 'ಅವ್ರಿಲ್' ಬುಲೆಟ್ ರೈಲು ಯೋಜನೆಯನ್ನು ಭಾರತದಲ್ಲಿ ನನಸಾಗಿಸಲು ಬದ್ಧತೆಯನ್ನು ಪ್ರದರ್ಶಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಟಾಲ್ಗೊ ಬುಲೆಟ್ ರೈಲು ದೇಶದಲ್ಲಿ ಓಡಾಟ ಆರಂಭಿಸಲಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಭಾರತದಲ್ಲಿ ಹೈ ಸ್ಪೀಡ್ ರೈಲು ಜಾಲ ಅಭಿವೃದ್ಧಿ ಬಗ್ಗೆ ಟಾಲ್ಗೊ ವಿಶೇಷ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ಇದಕ್ಕಾಗಿ ನೂತನ ಒಪ್ಪಂದ ಕರೆಯಬೇಕಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಟಾಲ್ಗೊ ಶ್ರೇಣಿಯ ತಾಜಾ ಬುಲೆಟ್ ರೈಲು ಆಗಿರುವ ಅವ್ರಿಲ್, ಗಂಟೆಗೆ 380 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಲ್ಲದೆ 600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

200 ಮೀಟರ್ ಉದ್ದದ ಅವ್ರಿಲ್ ರೈಲಿನೊಳಗೆ 3+2 ಆಸನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಇನ್ನು ಬೇಕಾದಷ್ಟು ಸ್ಥಳಾವಕಾಶ ಕಾಪಾಡಿಕೊಳ್ಳಲಾಗಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ವೇಗ ವರ್ಧಿಸುವ ಹಾಗೂ ಇಳಿಕೆಯ ವೇಳೆಯಲ್ಲಿ ಕಡಿಮೆ ಶಕ್ತಿಯನ್ನು ಅವ್ರಿಲ್ ಬುಲೆಟ್ ರೈಲು ಬಳಕೆ ಮಾಡಲಿದೆ. ಅಲ್ಲದೆ ಮೂಲ ಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡುವುದಿಲ್ಲ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಪ್ರಾಯೋಗಿಕ ಸಂಚಾರ ಪರೀಕ್ಷೆಯ ವೇಳೆಯಲ್ಲಿ ಟಾಲ್ಗೊ ರೈಲು ದೆಹಲಿ ಮತ್ತು ಮುಂಬೈ ನಡುವಣ ದೂರವನ್ನು ಕೇವಲ 12 ತಾಸಿನಲ್ಲಿ ಕ್ರಮಿಸಿತ್ತು.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ದೇಶದ ಎರಡು ಮಹಾನಗರಗಳ ನಡುವಣ ಅಂತರ 1388 ಕೀ.ಮೀ. ಆಗಿದ್ದು, ಪ್ರಸ್ತುತ ರಾಜಧಾನಿ ಎಕ್ಸ್ ಪ್ರೆಸ್ ತಲುಪಲು ತಗಲುವ ಸಮಯಕ್ಕಿಂತಲೂ ಕಡಿಮೆ ಕಾಲಾವಧಿಯಲ್ಲಿ ಗಮ್ಯ ಸ್ಥಾನ ತಲುಪಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

2015 ಜುಲೈ ತಿಂಗಳಲ್ಲಿ ವೇಗದ ರೈಲುಗಳಲ್ಲಿ ಹಗುರ ಭಾರದ ಕೋಚ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯನ್ನು ಸಮೀಪಿಸಿತ್ತು.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಏತನ್ಮಧ್ಯೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲು ಯೋಜನೆಯನ್ನು ಜಪಾನ್ ಕೈಗೆತ್ತಿಕೊಂಡಿದೆ. ಇದು 2023ರ ವೇಳೆಯಲ್ಲಿ ಸೇವೆ ಆರಂಭಿಸುವ ನಿರೀಕ್ಷೆಯಿದೆ.

ಭಾರತದಲ್ಲೇ ಬುಲೆಟ್ ರೈಲು ನಿರ್ಮಿಸಲಿರುವ ಟಾಲ್ಗೊ

ಅತ್ತ ಭಾರತದಲ್ಲಿ ಬುಲೆಟ್ ರೈಲು ನಿರ್ಮಿಸಲು ನೆರೆಯ ಚೀನಾ ಸಹ ಆಸಕ್ತಿಯನ್ನು ವ್ಯಕ್ತಪಡಿಸಿದೆ.


More from DriveSpark

Article Published On: Thursday, December 15, 2016, 12:21 [IST]
English summary
Avril: The Bullet Train Talgo Wants To 'Make In India' — Details Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+